Advertisement

ಈ ಇನ್ಸುಲಿನ್‌ಗೆ ಫ್ರಿಜ್‌ ಬೇಡ!

12:18 AM Sep 25, 2021 | Team Udayavani |

ಹೊಸದಿಲ್ಲಿ: ದೇಶದ ಪ್ರಮುಖ ಸಂಶೋಧನ ಸಂಸ್ಥೆಗಳಲ್ಲಿ ಒಂದಾಗಿರುವ ಕೋಲ್ಕತ್ತಾದ ಬೋಸ್‌ ಇನ್‌ಸ್ಟಿಟ್ಯೂಟ್‌ ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಕೆಮಿಕಲ್‌ ಬಯಾಲಜಿ ಸಂಸ್ಥೆಯ ವಿಜ್ಞಾನಿಗಳು ಜತೆಗೂಡಿ ಫ್ರಿಜ್‌ನಲ್ಲಿ ಇರಿಸುವುದು ಅಗತ್ಯವಿಲ್ಲದ ಸ್ಥಿರ ಉಷ್ಣ ಇನ್ಸುಲಿನ್‌ ಆವಿಷ್ಕರಿಸಿದ್ದಾರೆ.

Advertisement

ಇನ್ಸುಲಿನ್‌ ಅವಲಂಬಿತ ಮಧುಮೇಹಿಗಳಿಗೆ ಇದುವರೆಗೆ ಇನ್ಸುಲಿನ್‌ ಕೆಡದಂತೆ ಕಾಯ್ದುಕೊಳ್ಳುವುದು, ಒಯ್ಯುವುದು ದೊಡ್ಡ ಸಮಸ್ಯೆಯಾಗಿದ್ದು, ಈ ಆವಿಷ್ಕಾರ ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ.

ಈ ಸಂಶೋಧನೆಯಲ್ಲಿ ಹೈದರಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಕೆಮಿಕಲ್‌ ಟೆಕ್ನಾಲಜಿಯ ವಿಜ್ಞಾನಿ ಗಳು ಕೈಜೋಡಿಸಿದ್ದಾರೆ. ಪ್ರಸ್ತುತ ಇನ್ಸುಲಿನನ್ನು 4 ಡಿಗ್ರಿ ಸೆ. ಉಷ್ಣತೆಯಲ್ಲಿ ಇರಿಸಿಕೊಳ್ಳಬೇಕಿದೆ, ಹೊಸ ವಿಧದ ಇನ್ಸುಲಿನ್‌ 65 ಡಿಗ್ರಿ ಸೆ. ವರೆಗಿನ ಉಷ್ಣತೆಯನ್ನು ತಡೆದುಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next