Advertisement

ಕೋಲ್ಕತ : ಜೆಟ್‌ ಏರ್‌ ವೇಸ್‌ ವಿಮಾನ ಸ್ಫೋಟಿಸುವೆನೆಂದಾತ ವಶಕ್ಕೆ

12:36 PM Nov 26, 2018 | Team Udayavani |

ಕೋಲ್ಕತ : ಇಲ್ಲಿನ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ವಿಮಾನ ನಿಲ್ದಾಣದಿಂದ ಮುಂಬಯಿಗೆ ಹಾರಲಿದ್ದ ಜೆಟ್‌ ಏರ್‌ ವೇಸ್‌ ವಿಮಾನವನ್ನು ಸ್ಫೋಟಿಸಿ ಎಲ್ಲ ಪ್ರಯಾಣಿಕರನ್ನು ಕೊಲ್ಲುವುದಾಗಿ ತನ್ನ ಮೊಬೈಲ್‌ ಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಾ ಹೇಳುತ್ತಿದ್ದ ಜೆ ಪೊದ್ದಾರ್‌ ಎಂಬಾತನನ್ನು ಸಿಐಎಸ್‌ಎಫ್ ಸಿಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಜೆಟ್‌ ಏರ್‌ ವೇಸ್‌ ವಿಮಾನ ಹಾರಾಟ ಸಂಖ್ಯೆ 9ಡಬ್ಲ್ಯು0472 ಇಂದು ಬೆಳಗ್ಗೆ 8.15ರ ಹೊತ್ತಿಗೆ ಇಲ್ಲಿಂದ ಟೇಕಾಫ್ ಆಗುತ್ತಿದ್ದ ವೇಳೆ ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ  ಪೊದ್ದಾರ್‌ ಅದ್ಯಾರೊಂದಿಗೋ ತನ್ನ ಮೊಬೈಲ್‌ನಲ್ಲಿ ಮಾತನಾಡುತ್ತಾ ತಾನು ವಿಮಾನವನ್ನು ಸ್ಫೋಟಿಸುವುದಾಗಿಯೂ ಎಲ್ಲ ಪ್ರಯಾಣಿಕರನ್ನು ಕೊಂದು ಬಿಡುವುದಾಗಿಯೂ ಹೇಳುತ್ತಿದ್ದ ಮಾತುಗಳನ್ನು ಸಹ ಪ್ರಯಾಣಿಕರು ಕೇಳಿಸಿಕೊಂಡು ಒಡನೆಯೇ ವಿಮಾನದ ಸಿಬಂದಿಗಳಿಗೆ ತಿಳಿಸಿದರು. ಅವರು ಕೂಡಲೇ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಅಧಿಕಾರಿಗಳಿಗೆ ವಿಷಯ ತಿಳಿಸಿದರು.

ಕೂಡಲೇ ವಿಮಾನ ಟೇಕಾಫ್ ಆಗುವುದನ್ನು ಕೈಬಿಟ್ಟು ಅದನ್ನು ಟ್ಯಾಕ್ಸಿ ಬೇ ಯಲ್ಲಿ ಪ್ರತ್ಯೇಕವಾಗಿ ನಿಲ್ಲಿಸುವಂತೆ ಸೂಚಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ತಪಾಸಣೆ ಕೈಗೊಳ್ಳಲಾಯಿತು. 

ತಾಜಾ ವರದಿಗಳು ಬರುವ ತನಕವೂ ಶಂಕಿತ ವ್ಯಕ್ತಿ ಪೊದ್ದಾರ್‌ ನನ್ನು ಸಿಐಎಸ್‌ಎಫ್ ಸಿಬಂದಿಗಳು ತಮ್ಮ ವಶದಲ್ಲಿ ಇರಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next