ಮುಂಬೈ: ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಮವಾರದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ಮಣಿಸಿತು.
ಇದರಿಂದ ಕೂಟದಿಂದ ಹೊರಬೀಳುವ ಅಪಾಯ ತಪ್ಪಿಸಿಕೊಂಡಿತು. ಆದರೂ ಅದರ ಹಾದಿಯೇನು ಸಲೀಸಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್‌ಗಳಲ್ಲಿ 5 ವಿಕೆಟಿಗೆ 152 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿತ್ತು. ಇದನ್ನು ಬೆನ್ನತ್ತಿದ ಕೋಲ್ಕತಾ 19.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 158 ರನ್ ಗಳಿಸಿತು. ಕೋಲ್ಕತ ಪರ ನಿತೀಶ್ ರಾಣಾ (48), ರಿಂಕು ಸಿಂಗ್ (42) ಅತ್ಯುತ್ತಮ ಬ್ಯಾಟಿಂಗ್ ಮಾಡಿದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ಪರ ನಾಯಕ ಸಂಜು ಸ್ಯಾಮ್ಸನ್ ಅರ್ಧಶತಕ ಬಾರಿಸಿದರು. 49 ಎಸೆತ ನಿಭಾಯಿಸಿದ ಅವರು 54 ರನ್ನುಗಳ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 7 ಬೌಂಡರಿ, ಒಂದು ಸಿಕ್ಸರ್. ಕೊನೆಯ ಹಂತದಲ್ಲಿ ಹೆಟ್‌ಮೈರ್ 13 ಎಸೆತಗಳಿಂದ ಅಜೇಯ 27 ರನ್ ಹೊಡೆದು ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ್ 20 ಓವರ್, 152/5 (ಸಂಜು ಸ್ಯಾಮ್ಸನ್ 54, ಹೆಟ್‌ಮೈರ್ 27, ಟಿಮ್ ಸೌದಿ 46ಕ್ಕೆ 2). ಕೋಲ್ಕತಾ 19.1 ಓವರ್ 158/3 (ನಿತೀಶ್ ರಾಣಾ 48, ರಿಂಕು ಸಿಂಗ್ 42, ಬೌಲ್ಟ್ 25ಕ್ಕೆ 1).