Advertisement

Kolkata; ಮೃ*ತ ಟ್ರೈನಿ ವೈದ್ಯೆ ದೇಹದಲ್ಲಿ 16 ಗಾಯದ ಗುರುತುಗಳು ಪತ್ತೆ!

12:59 AM Aug 20, 2024 | Team Udayavani |

ಕೋಲ್ಕತಾ: ಅತ್ಯಾಚಾರ ಮತ್ತು ಹತ್ಯೆಗೊಳಗಾದ ಬಂಗಾಲದ ಟ್ರೈನಿ ವೈದ್ಯೆ ದೇಹದಲ್ಲಿ 16 ಗಾಯದ ಗುರು ತುಗಳು ಪತ್ತೆಯಾಗಿದ್ದು, ಈ ಪೈಕಿ ಗುಪ್ತಾಂಗದಲ್ಲಿನ ಗಾಯವೂ ಸೇರಿ 9 ಆಂತರಿಕ ಗಾಯಗಳೂ ಇವೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಈ ಎಲ್ಲ ಗಾಯದ ಗುರುತುಗಳು ಆಕೆ ಮೇಲೆ ರೇಪ್‌ಆಗುವಾಗಲೇ ಆದಂಥವು ಎಂದೂ ತಿಳಿಸಲಾಗಿದೆ.

Advertisement

ಸಂತ್ರಸ್ತೆಯನ್ನು ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲ್ಲ ಲಾಗಿದ್ದು, ಆಕೆಯ ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ. ಗುಪ್ತಾಂಗದ ಮೇಲೆ ಬಲ ಪ್ರಯೋಗ ನಡೆದಿದ್ದು, ಬಿಳಿ ಬಣ್ಣದ ದ್ರವವೂ ಗುಪ್ತಾಂಗದಲ್ಲಿ ಪತ್ತೆಯಾಗಿದೆ ಎಂದು ವರದಿ ಹೇಳಿ ದೆ. ಆದರೆ ದ್ರವದ ಸ್ವರೂಪದ ಬಗ್ಗೆ ಉಲ್ಲೇಖೀಸಲಾಗಿಲ್ಲ.

ಡ್ರಗ್ಸ್‌ ಮಾಫಿಯಾ ಗೊತ್ತಿದ್ದಕ್ಕೆ ವೈದ್ಯೆ ಹತ್ಯೆಯಾಗಿದೆ- ಆರೋಪ: ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಡ್ರಗ್‌ ಮಾಫಿಯಾ ಬಗ್ಗೆ ಆಕೆಗೆ ತಿಳಿದಿರಬಹುದು. ಹಾಗಾ ಗಿಯೇ ಹತ್ಯೆಗೈಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಮಾಜಿ ಪ್ರಾಂಶುಪಾಲ ಇಂಥ ಡ್ರಗ್‌ ಮಾಫಿಯಾದ ಭಾಗವಾಗಿದ್ದರು ಎಂಬ ಆರೋಪ ನಡು ವೆಯೇ, ಸಂತ್ರ ಸ್ತೆ ಸಹೋ ದ್ಯೋ ಗಿ ಗಳು ಇಂಥ ದ್ದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಸಂದೀಪ್‌ರನ್ನು ಸತತ 4ನೇ ದಿನ ಸಿಬಿಐ ವಿಚಾರಣೆ ನಡೆಸಿದೆ.

ಕಪ್ಪು ರಾಖಿ ಕಟ್ಟಿಕೊಂಡು ಪ್ರತಿಭಟಿಸಿದ ವೈದ್ಯರು!

ಟ್ರೈನಿ ವೈದ್ಯೆ “ಅಭಯಾ’ ಅತ್ಯಾಚಾರ ಖಂಡಿಸಿ, ಆಕೆಗೆ ನ್ಯಾಯ ಒದಗಿಸಬೇಕೆಂದು ದೇಶಾದ್ಯಂತ ವೈದ್ಯರು ನಡೆಸುತ್ತಿರುವ ಪ್ರತಿಭಟನೆ 8ನೇ ದಿನ ಪೂರೈಸಿದೆ. ಸೋಮವಾರ ಪ್ರತಿಭಟನಾನಿರತ ವೈದ್ಯರು ಕೈಗೆ ಕಪ್ಪು ರಾಖಿ ಧರಿಸಿ “ನಾನು ಅಭಯಾಳ ಅಣ್ಣ’ ಎಂದು ಘೋಷಣೆ ಕೂಗಿ ನಮ್ಮ ಸಹೋದರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ಕಲ್ಕತ್ತಾ ಹೈಕೋರ್ಟ್‌ನ ವಕೀಲರೂ ಪ್ರತಿಭಟನೆಗೆ ಧುಮುಕಿದ್ದಾರೆ.

Advertisement

ಸಿಬಿಐ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಕಿಡಿ

ಟ್ರೈನಿ ವೈದ್ಯೆ ಕೊಲೆ ಸಂಬಂಧ ರಾಜ್ಯ ಸರಕಾರವನ್ನು ದೂಷಿಸಿ, ಸುಳ್ಳು ಮಾಹಿತಿಗಳನ್ನು ಬಿಜೆಪಿ ಹಬ್ಬಿ ಸಿದೆ. ಪ್ರಕರಣ ಹಸ್ತಾಂತರಿಸಿ 5 ದಿನವಾದರೂ ಸಿಬಿಐ ಒಂದೇ ಒಂದು ತನಿಖಾ ವರದಿ ನೀಡದೇ ಸರಕಾರ ದೂಷಿಸಲು ಬಿಜೆಪಿಗೆ ಅವಕಾಶ ಮಾಡಿಕೊಟ್ಟು ಕೈಕಟ್ಟಿ ನಿಂತಿದೆ ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್‌ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next