Advertisement

ಕಾಲುವೆಗೆ ನೀರು ಹರಿಸಿ

04:53 PM Mar 14, 2020 | Naveen |

ಕೊಲ್ಹಾರ: ಕೂಡಗಿ ಗ್ರಾಮದ ರೈಲ್ವೆ ಸ್ಟೇಷನ್‌ ಹತ್ತಿರ ಮುಳವಾಡ ಆಲಮಟ್ಟಿ ರಸ್ತೆ ಪಕ್ಕದಲ್ಲಿ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿರುವ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

Advertisement

ಈ ವೇಳೆ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಳವಾಡ ಏತ ನೀರಾವರಿಯ ಮಸೂತಿ ಜಾಕ್‌ವೆಲ್‌ನಿಂದ ವಿಜಯಪುರ ಮುಖ್ಯ ಕಾಲುವೆ ಮತ್ತು ಮನಗೂಳಿ ಶಾಖಾ ಕಾಲುವೆಗೆ ಚಿಮ್ಮಲಗಿ ಏತ ನೀರಾವರಿಯ ಕೋರವಾರ ಶಾಖಾ ಕಾಲುವೆಗೆ ನೀರು ಹರಿಸಬೇಕು. ಕೂಡಗಿ ರೈಲ್ವೆ ಹಳಿ ಕೆಳಗಡೆ ಹಾಯ್ದು ಹೋಗುವ ಕಾಲುವೆ ಮಾರ್ಗಕ್ಕೆ ಬಾಕ್ಸ್‌ ಪುಸ್ಸಿಂಗ್‌ ಕಾಮಗಾರಿ ವಿಳಂಬವಾಗಿ ಸಾಗುತ್ತಿರುವುದರಿಂದ ಕಾಲುವೆಗಳಿಗೆ ನೀರು ಹರಿದು ಬರುತ್ತಿಲ್ಲ. ಆದ್ದರಿಂದ ನಾಲ್ಕು ದಿನ ಈ ಭಾಗದಲ್ಲಿ ಸಂಚರಿಸುವ ಎಲ್ಲ ಪ್ರಯಾಣಿಕರ ಮತ್ತು ಗೂಡ್ಸ್‌ ರೈಲ್ವೆಗಳ ಸಂಚಾರ ಬಂದ್‌ ಮಾಡಿ ಬಾಕ್ಸ್‌ ಪುಸ್ಸಿಂಗ್‌ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಲು ರೈಲ್ವೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈಗ ಬೇಸಿಗೆ ಆರಂಭವಾಗಿದ್ದು ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬದೆ ಇರುವುದರಿಂದ ಮತ್ತು ಕಾಲುವೆಗಳಿಗೆ ಸರಾಗವಾಗಿ ನೀರು ಬಾರದೇ ಇರುವುದರಿಂದ ತುಂಬಾ ತೊಂದರೆಯಾಗುತ್ತದೆ. ಈ ರೀತಿ ರೈತಾಪಿ ವರ್ಗದವರಿಗೆ ಸರಕಾರ ತೊಂದರೆ ಕೊಟ್ಟು ದಿನನಿತ್ಯ ಸಾಯಿಸುವುದಕ್ಕಿಂತ ಒಂದೇ ಬಾರಿಗೆ ತೊಟ್ಟು ವಿಷ ಕೊಟ್ಟು ಸಾಯಿಸುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ ಸಂಚಾರ ಸ್ಥಗಿತಗೊಳಿಸಿ ಬಾಕ್ಸ್‌ ಪುಸ್ಸಿಂಗ್‌ ಕಾಮಗಾರಿ ವೇಗ ಹೆಚ್ಚಿಸಲು ನಿರಂತರ ಕೆಲಸವನ್ನು ಪ್ರಾರಂಭಿಸಬೇಕು. ಇದಕ್ಕೆ ಅವಕಾಶ ಕೊಡದಿದ್ದರೆ ಅಖಂಡ ಕರ್ನಾಟಕ ರೈತ ಸಂಘದ ಪ್ರತಿಯೊಬ್ಬ ರೈತರು ರೈಲ್ವೆ ಹಳಿ ಮೇಲೆ ಕುಳಿತುಕೊಂಡು ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಕೀಂಗಳ ನೆಪ ಹೇಳುತ್ತ ರೈತರಿಗೆ ವಂಚನೆ ಮಾಡುತ್ತಿರುವ ಜನಪ್ರತಿನಿಧಿಗಳು ಅ ಧಿಕಾರಿಗಳು ಕೂಡಲೆ ಮನಗೂಳಿ ಮತ್ತು ಚಿಮ್ಮಲಗಿ ಕಾಲುವೆಗಳಿಗೆ ನೀರು ಹರಿಸಿ ಕೆರೆ ಬಾಂದರುಗಳನ್ನು ತುಂಬಿಸಬೇಕು. ಇಲ್ಲದಿದ್ದರೆ ಕೆಬಿಜೆಎನ್‌ಎಲ್‌ ಮುಖ್ಯಅಭಿಯಂತರ ಕಚೇರಿಗೆ ಬೀಗ ಜಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಎರಡನೇ ದಿನದ ಧರಣಿಯಲ್ಲಿ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಸದಾಶಿವ ಬರಟಗಿ, ವಿಠ್ಠಲ ಬಿರಾದಾರ, ಸಂಗಪ್ಪ ಬಾಗಿ, ವನಕೆರೆಪ್ಪ ತೆಲಗಿ, ರಾಮಣ್ಣ ಶಿರೆಗೋಳ, ನಾಗಪ್ಪ ಹಟಪದ, ಭೂಮರೆಡ್ಡಿ ರುದ್ರಗೌಡ ಪಾಟೀಲ, ನಬಿಸಾನ ರೋಣಿಹಾಳ, ಸಿದ್ದಲಿಂಗಪ್ಪ ಬಿರಾದಾರ, ಮಹಾದೇವಪ್ಪ ಬಿರಾದಾರ, ಬಸಗೊಂಡೆಪ್ಪ ಹೊಲದೂರ, ಅಣ್ಣುಗೌಡ ಪಾಟೀಲ, ರಾಮಣ್ಣ ಗೋವಿಂದ, ಮೈಬುಸಾಬ ಮುಲ್ಲಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next