Advertisement

ಬೆಲೆ ಏರಿಕೆ: ವಾಟಾಳ್‌ ರಿಂದ ಪೊರಕೆ ಚಳವಳಿ

07:15 PM Jun 13, 2021 | Team Udayavani |

ಕೋಲಾರ: ಕೊರೊನಾ ಸೊಂಕಿನಿಂದ ರಾಜ್ಯದಲ್ಲಿ ಬಡಮತ್ತು ಸಾಮಾನ್ಯ ಜನತೆ ಸಂಕಷ್ಟಕ್ಕೆ ಸಿಲುಕಿರುವಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌,ಡಿಸೇಲ್‌, ಗ್ಯಾಸ್‌ ದರ ಏರಿಕೆ ಜೂತೆಗೆ ರಾಜ್ಯಸರ್ಕಾರವು ವಿದ್ಯುತ್‌ ದರ ಏರಿಕೆ ಮಾಡಿರುವುದುಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ನಾಗರಾಜ್‌ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ರೈಲ್ವೆ ನಿಲ್ದಾಣದ ಬಳಿ ಪೊರಕೆ ಚಳವಳಿನಡೆಸಿ, ಸರ್ಕಾರವು ವರ್ಷದಿಂದ ಬಡವರು,ಕಾರ್ಮಿಕರ ಜೀವನ ನಿರ್ವಾಹಣೆಗೆ ಯಾವುದೇಪರ್ಯಾಯ ವ್ಯವಸ್ಥೆ ಕಲ್ಪಿಸದೆ ಲಾಕ್‌ಡೌನ್‌ಘೋಷಿಸುತ್ತಿರುವ ಕ್ರಮ ಸಮಂಜಸವಲ್ಲ ಎಂದುಅಭಿಪ್ರಾಯಪಟ್ಟರು.ಬಿಪಿಲ್‌ ಕಾರ್ಡ್‌ ಹೊಂದಿರುವವರ ಸಾಲ ವಸೂಲಾತಿಯನ್ನು ಒಂದು ವರ್ಷಕಾಲ ರದ್ದುಗೊಳಿಸಬೇಕು.ಸಾಲದ ಮೇಲಿನ ಬಡ್ಡಿಯನ್ನು ಒಂದು ವರ್ಷ ಕಾಲಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾಸಂದರ್ಭದಲ್ಲಿ ನಾಟಕ ಮಾಡುವುದು ಬಿಡಬೇಕು.ಬಡ ಕುಟುಂಬಗಳಿಗೆ ಒಂದು, ಎರಡು ಸಾವಿರದಪರಿಹಾರ ಪ್ಯಾಕೇಜ್‌ನಿಂದ ಯಾವುದೇ ಪ್ರಯೋಜನವಿಲ್ಲ. ಲಕ್ಷಾಂತರ ರೂ. ಕಳೆದುಕೊಂಡ ರೈತರಿಗೆ 10ಸಾವಿರ ಪರಿಹಾರ ಇದೊಂದು ಪುಕ್ಕಟೆ ಪ್ರಚಾರದಗಿಮಿಕ್‌ ಅಷ್ಟೆ ಎಂದು ವಿವರಿಸಿದರು.

ರಾಜ್ಯದಲ್ಲಿ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೂಉಚಿತ ಶಿಕ್ಷಣ ದೊರಕಿಸಲು ಕ್ರಮ ಕೈಗೊಳ್ಳಬೇಕು.ಶೈಕ್ಷಣಿಕ ಶುಲ್ಕ ವಸೂಲಾತಿ ಮಾಡಬಾರದು, ದುಬಾರಿಶುಲ್ಕದಿಂದ ಸಂಕಷ್ಟದಲ್ಲಿರುವ ಬಡ ವಿದ್ಯಾರ್ಥಿಗಳಿಗೆಶೈಕ್ಷಣಿಕ ಅಭ್ಯಾಸಕ್ಕೆ ತೊಡಕುಂಟಾಗುವುದು ಎಂದುಹೇಳಿದರು.ಪ್ರತಿಭಟನೆಯಲ್ಲಿ ವಾಟಾಳ್‌ ಪಕ್ಷದ ಬೆಂಗಳೂರಿನರಾಮು, ಕನ್ನಡ ಸಂಘಟನೆಗಳ ಮುಖಂಡರಾದಕನ್ನಡದ ವೆಂಕಟಪ್ಪ, ಭುವನೇಶ್ವರಿ ಕನ್ನಡ ಸಂಘದಅಧ್ಯಕ್ಷ ತ್ಯಾಗರಾಜ್‌, ರೈತ ಸಂಘ ಮತ್ತು ಹಸಿರು ಸೇನೆರಾಜ್ಯ ಉಪಾಧ್ಯಕ್ಷ ನಾರಾಯಣಗೌಡ, ನಾರಾಯಣಸ್ವಾಮಿ, ರಾಮು ಶಿವಣ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next