Advertisement
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬಕಲ್ಯಾಣ ಸೇವೆಗಳ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅತಿಸಾರಭೇದಿ ತೀವ್ರತರ ನಿಯಂತ್ರಣಪಾಕ್ಷಿಕ 2021 ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ. ಡೆಂಗ್ಯು, ಚಿಕನ್‌ಗುನ್ಯಾ,ಮಲೇರಿಯಾ ಹಾಗೂ ಅತಿಸಾರ ಭೇದಿಯ ಬಗ್ಗೆಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.ಅಂಗನವಾಡಿ ಕಾರ್ಯಕರ್ತೆಯರು ಹಾಗೂಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿನೀಡಿ ಪರಿಶೀಲನೆ ಮಾಡಿ ಅತಿಸಾರಭೇದಿಪ್ರಕರಣಗಳು ಕಂಡು ಬಂದರೆ ತಕ್ಷಣ ತಾಲ್ಲೂಕುವೈದ್ಯಾಧಿಕಾರಿಗಳಿಗೆ ತಿಳಿಸಬೇಕು.
Related Articles
Advertisement
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಜಗದೀಶ್ ಮಾತನಾಡಿ, ಈ ಕಾರ್ಯಕ್ರಮದಲ್ಲಿಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ 5ವರ್ಷದೊಳಗಿನಮಕ್ಕಳಸಮೀಕ್ಷೆನಡೆಸಿ,ಪ್ರತಿಯೊಂದುಮನೆಗೆ ಓ.ಆರ್.ಎಸ್ ಪಟ್ಟಣ ನೀಡಿ ಕೈ ತೊಳೆಯುವವಿಧಾನದ ಬಗ್ಗೆ, ಶೌಚಾಲಯ ಬಳಸುವ ಬಗ್ಗೆ,ತಾಯಿಯ ಹಾಲಿನ ಮಹತ್ವದ ಬಗ್ಗೆ ಹಾಗೂ ಪೌಷ್ಟಿಕಆಹಾರದ ಬಗ್ಗೆ ಅರಿವು ಮೂಡಿಸುವರು ಹಾಗೂಅವಶ್ಯಕತೆ ಇರುವ ಮಕ್ಕಳಿಗೆ ಝಿಂಕ್ ಮಾತ್ರೆಯನ್ನುನೀಡುವರು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಉಪ ನಿರ್ದೇಶಕಿ ಎಂ.ಜಿ.ಪಾಲಿ, ಸಾರ್ವಜನಿಕ ಶಿಕ್ಷಣಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ, ಜಿಲ್ಲಾಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್, ತಾಲೂಕುವೈದ್ಯಾಧಿಕಾರಿಗಳಾದ ರಮ್ಯಾ ದೀಪಿಕ, ಪ್ರಭಾರ ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿಪ್ರೇಮಇತರರಿದ್ದರು.