ಕೋಲಾರ: ಮುಂಬರುವ 2023 ಸಾರ್ವತ್ರಿಕವಿಧಾನಸಭೆ ಚುನಾವಣೆ ವೇಳೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಮೀಸಲಿಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿಘೋಷಿಸಬೇಕು ಎಂದು ಅಂಬೇಡ್ಕರ್ ದಲಿತ ಸೇನೆಮತ್ತು ಮೂಲ ನಿವಾಸಿ ಸಂಘಟನೆಗಳ ಒಕ್ಕೂಟದರಾಜ್ಯಾಧ್ಯಕ್ಷ ಆರ್.ಕೇಶವಮೂರ್ತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರವಿವಿಧ ದಲಿತ ಸಂಘಟನೆಗಳಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 2013 ಮತ್ತು2018ರ ವಿಧಾಸಭಾ ಚುನಾವಣೆಯಲ್ಲಿ ದಲಿತಮುಖ್ಯಮಂತ್ರಿ ಕೂಗು ಎದ್ದಿದ್ದ ಕಾರಣದಿಂದಲೇಕೊನೆಯ ಸಂದರ್ಭದಲ್ಲಿ ಈ ಸಮುದಾಯಕ್ಕೆ ಸೇರಿದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.ದಲಿತರಲ್ಲಿಯೂ ದೊಡ್ಡ ಹುದ್ದೆ ನಿರ್ವಹಣೆಮಾಡಿದ ಉದಾಹರಣೆ ಇದೆ ಎಂದು ಹೇಳಿದರು.
ಸಾಮರ್ಥ್ಯ ಇದ್ರೂ ಸ್ಥಾನ ಸಿಕ್ಕಿಲ್ಲ: ರಾಷ್ಟ್ರಪತಿ ರಾಮನಾಥ್ ಕೋವಿಂದ್, ನೂತನ ರಾಜ್ಯಪಾಲರುಹಾಗೂ ಸಚಿವರು ಸಾಕಷ್ಟು ಮಂದಿ ಬೃಹತ್ ಹುದ್ದೆಯನ್ನು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ.ಇಷ್ಟಾದರೂ ಈತನಕ ರಾಜ್ಯದಲ್ಲಿ ಒಬ್ಬರು ದಲಿತಮುಖ್ಯಮಂತ್ರಿ ಆಗಲಿಲ್ಲ ಎಂದು ವಿಷಾದಿಸಿದರು.ದಲಿತ ಮುಖ್ಯಮಂತ್ರಿ ಅನುಷ್ಠಾನ ಮತ್ತುಹೋರಾಟ ಸಮಿತಿಯಿಂದ ಮುಂದೆ ರಾಜ್ಯಾದ್ಯಂತ32ಜಿಲ್ಲೆಯಲ್ಲಿ ಹೋರಾಟಹಮ್ಮಿಕೊಳ್ಳಲಾಗುವುದು.ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುವುದು.ಪ್ರತಿ ಜಿಲ್ಲೆಯಲ್ಲಿ ಗ್ರಾಮ ಮಟ್ಟದಿಂದ ಸಭೆ,ಸಮಾವೇಶ ಆಯೋಜನೆ ಮಾಡಲಾಗುವುದುಎಂದು ವಿವರಿಸಿದರು.
ಉಗ್ರ ಸಂದೇಶ ರವಾನೆ: ಇಡೀ ದಲಿತ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿಐತಿಹಾಸಿಕ ಸಮಾವೇಶವನ್ನು ಆಯೋಜಿಸಿ ದಲಿತಮುಖ್ಯಮಂತ್ರಿ ಅನುಷ್ಠಾನಕ್ಕೆ ತರುವಂತೆ ಉಗ್ರವಾದಸಂದೇಶವನ್ನು ನೀಡಲಾಗುತ್ತದೆ ಎಂದರು.ಹಲವರ ಬೆಂಬಲ: ದಲಿತ ಸಿಎಂ ಅನ್ನು ಘೋಷಿಸುವ ಪಕ್ಷಕ್ಕೆ ಮತ ನೀಡುವಂತೆ ಮತ್ತು ಘೋಷಣೆಮಾಡದ ಪಕ್ಷವನ್ನು ವಿರೋಧಿಸುವಂತೆ ಮನವಿಮಾಡಲಾಗುತ್ತದೆ.
ಈ ಹೋರಾಟದಲ್ಲಿ ಮಠಾಧೀಶರು, ಹಿರಿಯ ದಲಿತ ಪರ ಹೋರಾಟಗಾರರು,ರಾಜಕೀಯ ನಾಯಕರು, ಹಾಲಿ ಮತ್ತು ನಿವೃತ್ತಅಧಿಕಾರಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಮಹನೀಯರು ಬೆಂಬಲಿಸಲಿದ್ದಾರೆಎಂದು ಹೇಳಿದರು.ನಿರಂತರ ಹೋರಾಟ: ಬಹುಜನ ದಲಿತಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಸಂಗಸಂದ್ರ ಡಾ.ವಿಜಯಕುಮಾರ್ ಮಾತನಾಡಿ, ದಲಿತರಿಗೂರಾಜ್ಯ ಆಳುವ ಶಕ್ತಿ ಇದೆ. ರಾಜ್ಯದ1.8ಕೋಟಿ ದಲಿತರು ಇದ್ದು, 157 ಜಾತಿಗಳ ಒತ್ತಾಯವಾಗಿಮುಂದಿನ 2023ರ ಚುನಾವಣೆಯಲ್ಲಿ ದಲಿತಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು. ಅಲ್ಲಿ ತನಕ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.ಗೋಷ್ಠಿಯಲ್ಲಿ ದಲಿತ ಸಂಘಟನೆ ಮುಖಂಡರಾದ ಎಂ.ನಾಗೇಶ್, ತಿಪ್ಪಸಂದ್ರ ಶ್ರೀನಿವಾಸ್, ಮಲ್ಲಸಂದ್ರ ನಾಗರಾಜ್, ಎ.ಸುರೇಶ್, ಎಂ.ಚಂದ್ರಪ್ಪ,ಅಬ್ದುಲ್‌ಖಾದರ್ ಇತರರಿದ್ದರು.