Advertisement

ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸಿ

08:42 PM Jul 16, 2021 | Team Udayavani |

ಕೋಲಾರ: ಗ್ರಾಪಂ ನೌಕರರ ವೇತನ, ನೇರ ನೇಮಕಾತಿ ಆದೇಶತಡೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಿಐಟಿಯುನೇತೃತ್ವದ ರಾಜ್ಯ ಗ್ರಾಪಂ ನೌಕರರ ಸಂಘ ಜಿಪಂಕಚೇರಿ ಮುಂದೆಪ್ರತಿಭಟಿಸಿತು.ರಾಜ್ಯದಲ್ಲಿ ಗ್ರಾಪಂನ ಬಿಲ್‌ಕಲೆಕ್ಟರ್‌ ಗುಮಾಸ್ತ ಹುದ್ದೆಯಿಂದಗ್ರೇಡ್‌-2 ಕಾರ್ಯದರ್ಶಿ,ದ್ವಿತೀಯದರ್ಜೆಲೆಕ್ಕ ಸಹಾಯಕ ಹು¨ಗೆ ೆªಆಯ್ಕೆ ಮೂಲಕ ನೇರ ನೇಮಕಾತಿಗೆ ತಡೆ ನೀಡಿದ್ದ ಆದೇಶವನ್ನುಆರ್ಥಿಕ ಇಲಾಖೆಯು ಜೂ.24ರಂದುಈಹುದ್ದೆಗಳ ನೇಮಕಮಾಡಲು ಸಹಮತ ನೀಡಿದ್ದರೂ ಅದರ ಅನ್ವಯ ಜು.2ರಂದುಸರ್ಕಾರವು ನೇಮಕಾತಿ ಆದೇಶ ನೀಡಿದ್ದು, ಮರುದಿನಹಿಂಪಡೆದಿದೆ.

Advertisement

ಇದರಿಂದ25ವರ್ಷಗಳಿಂದ ಸೇವೆ ಮಾಡಿ, ನಿವೃತ್ತಿಅಂಚಿನಲ್ಲಿರುವ ನೌಕರರಿಗೆ ಅನ್ಯಾಯವಾಗುತ್ತದೆ. ಇದರಿಂದ ಈಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.ಸಿಐಟಿಯು ಜಿಲ್ಲಾ ಮುಖಂಡ ಗಾಂಧಿನಗರನಾರಾಯಣಸ್ವಾಮಿ ಮಾತನಾಡಿ, ಗ್ರಾಪಂ ನೌಕರರಿಗೆ ಸಂಬಳನೀಡದ ಪಿಡಿಒಗಳನ್ನು ಅಮಾನತ್ತು ಮಾಡಬೇಕು,

ನೇಮಕಾತಿನಿಯಮಗಳಿಗೆ ತಿದ್ದುಪಡಿ ತರುವಾಗ ಗ್ರಾಪಂನ ಎಲ್ಲಾ ಸಿಬ್ಬಂದಿಒಳಪಡಿಸಬೇಕು, ತ್ತೈಮಾಸಿಕ ವೇತನವು ಹಲವು ಗ್ರಾಪಂಗಳಿಗೆಕಡಿಮೆವೇತನವುಬಿಡುಗಡೆಯಾಗಿದ್ದು,ಇದನ್ನುಸರಿಪಡಿಸಬೇಕುಎಂದು ಹೇಳಿದರು. ಸರ್ಕಾರಿ ಆದೇÍದ ‌ ಂತೆ Óಳೀ¿‌§ ು ತೆರಿಗೆಸಂಗ್ರಹದಲ್ಲಿ ಶೇ.40 ಹಣ ಕಡ್ಡಾಯವಾಗಿ ಸಿಬ್ಬಂದಿ ವೇತನಕ್ಕೆಪಾವತಿಸಬೇಕು,

ಪ್ರತಿ ತಿಂಗಳ 5ರಂದು ಸಿಬ್ಬಂದಿ ವೇತನಪಾವತಿಸಿ, ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದುಒತ್ತಾಯಿಸಿದರು. ಗ್ರಾಪಂ ನೌಕರ ಸಂಘದ ಜಿಲ್ಲಾಧ್ಯಕ್ಷಅಮರನಾರಾಯಣ, ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿಕೇಶವರಾವ್‌, ಮುಖಂಡರಾದ ವೆಂಕಟರಾಮೇಗೌಡ,ರಾಮಚಂದ್ರಪ್ಪ,ಕೃಷ್ಣಪ್ಪ, ಶ್ರೀನಿವಾಸ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next