ಕೋಲಾರ: ಪ್ರತ್ಯೇಕ ತಾಲೂಕು ಆಗಿರುವಕೆಜಿಎಫ್‌ಗೆ ಕೂಡಲೇ ಎಪಿಎಂಸಿ, ಟಿಎಪಿಸಿಎಂಎಸ್,ಪಿಸಿಆರ್‌ಡಿ ಬ್ಯಾಂಕ್ ಮಂಜೂರು ಮಾಡುವಂತೆಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ಗೆಶಾಸಕಿ ರೂಪಕಲಾ ಮನವಿ ಮಾಡಿದರು.
ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಮನವಿಸಲ್ಲಿಸಿರುವ ಅವರು, ಕೆಜಿಎಫ್ ಅನ್ನು ಹೊಸತಾಲೂಕಾಗಿಘೋಷಿಸಿ 4 ವರ್ಷ ಉರುಳಿದೆ. ಇನ್ನೂತಾಲೂಕಿನಲ್ಲಿ ಇರಬೇಕಾದ ಕೃಷಿ ಉತ್ಪನ್ನಮಾರುಕಟ್ಟೆ, ತಾಲೂಕು ಸೊಸೈಟಿ, ಪಿಸಿಆರ್‌ಡಿಬ್ಯಾಂಕ್ ಪ್ರತ್ಯೇಕಗೊಳಿಸಿಲ್ಲ ಎಂದು ಸಚಿವರಗಮನಕ್ಕೆ ತಂದರು.
50 ಎಕರೆ ಜಾಗಕ್ಕೆ ಮನವಿ: ಕೆಜಿಎಫ್ ಗಡಿತಾಲೂಕಾಗಿದ್ದು, ಇಲ್ಲೊಂದು ದೊಡ್ಡ ಎಪಿಎಂಸಿಮಾರುಕಟ್ಟೆ ಸ್ಥಾಪಿಸುವ ಮೂಲಕ ಇಲ್ಲಿನ ರೈತರುತಮ್ಮ ಉತ್ಪನ್ನಗಳನ್ನು ಕೋಲಾರಕ್ಕೆ ಸಾಗಿಸುವಸಾಗಣೆ ವೆಚ್ಚ ತಗ್ಗಿಸಬೇಕಿದೆ. ಹೀಗಾಗಿ 50 ಎಕರೆಗುರುತಿಸಿ ಮಂಜೂರು ಮಾಡುವ ಕುರಿತುಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಕೋಲಾರ ಎಪಿಎಂಸಿ ವಿಸ್ತರಣೆಗೆ ಮನವಿ: ಈವೇಳೆ ಕೋಲಾರ ಎಪಿಎಂಸಿ ಕುರಿತು ಗಮನ ಸೆಳೆದರೂಪಕಲಾ, ಕೋಲಾರ ಟೊಮೆಟೋ ಮಾರುಕಟ್ಟೆಏಷ್ಯಾದಲ್ಲೇ ದೊಡ್ಡದೆಂಬ ಖ್ಯಾತಿ ಇದೆ. ಆದರೆ,ಟೊಮೆಟೋ ಸೀಸನ್ ಬಂದರೆ ಜಾಗವಿಲ್ಲದೇಎಲ್ಲೆಂದರಲ್ಲಿ ರಾಶಿ ಹಾಕುವುದು, ವಾಹನಗಳಒತ್ತಡ ಉಂಟಾಗಿ ಅನೇಕ ಸಮಸ್ಯೆ ಉದ್ಭವವಾಗುತ್ತಿವೆ ಎಂದು ಹೇಳಿದರು.
ಟೊಮೆಟೋ ಸೀಸನ್ ಆಗಿರುವ ಈಗ ಬೆಲೆಕುಸಿತದಿಂದ ರೈತ ಕಂಗಾಲಾಗಿದ್ದಾನೆ. ಒಂದೆರಡುದಿನಗಳಿಂದ ಬೆಲೆ ಸ್ವಲ್ಪ ಮಟ್ಟಿಗೆ ಸುಧಾರಣೆಯತ್ತಸಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಜಾಗವಿಲ್ಲದೇರೈತರು, ವ್ಯಾಪಾರಿಗಳಿಗೆ ತೊಂದರೆಯಾಗಿದೆಎಂದರು.ಈ ಮಾರುಕಟ್ಟೆಗೆ ತಾವೇ ಖುದ್ದು ಭೇಟಿ ಕೊಟ್ಟುಮಾರುಕಟ್ಟೆ ವಿಸ್ತರಣೆಗೆ ಕೂಡಲೇ ತಾತ್ಕಾಲಿಕಪರಿಹಾರ ನೀಡಿ,
ನಂತರ 100 ಎಕರೆ ಪ್ರದೇಶದಲ್ಲಿಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.ಸಚಿವರ ಭರವಸೆ: ಮನವಿಗೆ ಸ್ಪಂದಿಸಿದ ಸಚಿವಸೋಮಶೇಖರ್, ಕೃಷಿ ಉತ್ಪನ್ನ ಮಾರಾಟ ಇಲಾಖೆಪ್ರಧಾನ ಕಾರ್ಯದರ್ಶಿ ಕರೀಗೌಡರನ್ನುದೂರವಾಣಿಯಲ್ಲಿ ಸಂಪರ್ಕಿಸಿ ಕೆಜಿಎಫ್‌ನಲ್ಲಿಎಪಿಎಂಸಿ ಮಾರುಕಟ್ಟೆ ಸ್ಥಾಪನೆಗೆ ಸೂಕ್ತ ಪ್ರಸ್ತಾವನೆಸಲ್ಲಿಸಲು ಸೂಚಿಸಿದರು. ಪಿಸಿಆರ್‌ಡಿ ಬ್ಯಾಂಕ್,ಟಿಎಪಿಸಿಎಂಎಸ್ ಸ್ಥಾಪನೆ ಕುರಿತು ಸಹಕಾರಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯಕ್ರಮಕೈಗೊಳ್ಳುವ ಭರವಸೆ ನೀಡಿದರು.