ಬಂಗಾರಪೇಟೆ: ಕೊರೊನಾ 2ನೇ ಅಲೆಯಿಂದಸಂಕಷ್ಟದಲ್ಲಿರುವವರಿಗೆ ಪಕ್ಷದ ಮುಖಂಡರು,ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ದೇಶಿಹಳ್ಳಿರುವ ಆರ್.ಆರ್.ಕಲ್ಯಾಣಮಂಟಪದಲ್ಲಿ ಜೆಡಿಎಸ್ ಮುಖಂಡ ಎಂ.ಮಲ್ಲೇಶಬಾಬು ನೇತೃತ್ವದಲ್ಲಿ2 ಸಾವಿರ ಜನರಿಗೆ ಉಚಿತ ದಿನಸಿಕಿಟ್ ವಿತರಿಸಿ ಮಾತನಾಡಿ, ಬಂಗಾರಪೇಟೆ ಕ್ಷೇತ್ರದಲ್ಲಿ ಮೊದಲಿನಿಂದಲೂ ಜೆಡಿಎಸ್ ಬಗ್ಗೆ ಹೆಚ್ಚಿನ ಒಲವು ಇದೆ. ಐಎಎಸ್ ಅಧಿಕಾರಿ ಆಗಿದ್ದ ದಿ.ಮುನಿಸ್ವಾಮಿಅವರ ಪುತ್ರ ಎಂ.ಮಲ್ಲೇಶಬಾಬು ಕ್ಷೇತ್ರದಲ್ಲಿ ಪಕ್ಷಸಂಘಟಿಸುತ್ತಿದ್ದಾರೆ ಎಂದು ಹೇಳಿದರು.
ಕೊರೊನಾ 2ನೇ ಅಲೆ ತಡೆಯುವಲ್ಲಿ ರಾಜ್ಯಸರ್ಕಾರವು ವಿಫಲವಾಗಿದೆ. ಪ್ರಾರಂಭವಾದಲ್ಲೇತುರ್ತುಕ್ರಮ ಕೈಗೊಂಡಿದ್ದಲ್ಲಿ ರಾಜ್ಯದಲ್ಲಿ ಇಷ್ಟು ಸಾವುಸಂಭವಿಸುತ್ತಿರಲಿಲ್ಲ. 2ನೇ ಅಲೆಗೆ ಹೆಚ್ಚಾಗಿಯುವಕರು,ಮಧ್ಯವಯಷ್ಕರರುಸಾವನ್ನಪ್ಪಿರುವುದುದೊಡ್ಡ ದುರಂತವೇ ಆಗಿದೆ. ಸರ್ಕಾರವು ಸಂಕಷ್ಟದಕಾಲದಲ್ಲಿ ಸ್ಪಂದಿಸದೇ ಇರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಚಿತ ಊಟ, ಹಾಲು ವಿತರಣೆ: ಜೆಡಿಎಸ್‌ಮುಖಂಡ ಎಂ.ಮಲ್ಲೇಶಬಾಬು ಮಾತನಾಡಿ,ತಾಲೂಕಿನಲ್ಲಿ ಜೆಡಿಎಸ್‌ನಿಂದ ಉಚಿತಊಟ, ಹಾಲುವಿತರಣೆ, ಆ್ಯಂಬುಲೆನ್ಸ್ ಕೊಡುಗೆ ನೀಡಿ ಬಡವರಿಗೆಹೆಚ್ಚಿನ ಅನುಕೂಲವಾಗಿದೆ.ಪಕ್ಷದಲ್ಲಿ 6 ಯುವ ಮುಖಂಡರು 24ಗಂಟೆಯೂ ಕೊರೊನಾ ಸಂಕಷ್ಟದಲ್ಲಿರುವವರಿಗೆಸ್ಪಂದಿಸಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಯುವ ಮುಖಂಡ ನಿಖೀಲ್, ಜಿಲ್ಲಾಧ್ಯಕ್ಷಜಿ.ಕೆ.ವೆಂಕಟಾಶಿವಾರೆಡ್ಡಿ, ಎಂಎಲ್ಸಿ ಗೋವಿಂದರಾಜು,ಆರ್.ಚೌಡರೆಡ್ಡಿ, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮಮುನಿಸ್ವಾಮಿ, ಮುಳಬಾಗಿಲು ಸಮೃದ್ದಿ ಮಂಜುನಾಥ್, ಜೆಡಿಎಸ್ ಮುಖಂಡರಾದ ಮೂರಾಂಡಹಳ್ಳಿಗೋಪಾಲ್, ಕೆ.ಬಿ.ಗೋಪಾಲಕೃಷ್ಣ, ಡಾ.ರಮೇಶ್,ಪುರಸಭೆ ಸದಸ್ಯ ಸುನೀಲ್, ಮಾಜಿ ಸದಸ್ಯಶಿವಕುಮಾರ್, ಮರಗಲ್ ಮುನಿಯಪ್ಪ, ದೇವರಾಜ್, ಹರಟಿ ನರೇಂದ್ರ ಬಾಬು, ವೈ.ವಿ.ರಮೇಶ್,ಮರಗಲ್ ಆನಂದ್, ತಿಮ್ಮಾಪುರ ಪ್ರಸಾದ್‌ಮುಂತಾದವರಿದ್ದರು.