Advertisement
ನಗರದ ಸರಕಾರಿ ಕಾಲೇಜಿನ ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳನ್ನು ನಿಗದಿತ ಸಂಖ್ಯೆಯ ಜಾಗದಲ್ಲಿಯೇ ಪೇರಿಸಿಡಲಾಗಿದ್ದು, ಬಿಗಿ ಭದ್ರತೆಯ ನಡುವೆ ಮತಯಂತ್ರಗಳ ಭದ್ರತಾ ಕೋಣೆ ಕಿಟಕಿ ಬಾಗಿಲುಗಳಿಗೆ ಮೊಹರು ಸಮೇತ ಬೀಗ ಜಡಿಯಲಾಗಿದೆ.
ಸಂಗ್ರಹಿಸಿಡಲಾಗಿತ್ತು. ಅವುಗಳನ್ನು ಶುಕ್ರವಾರ ಬೆಳಗ್ಗೆ ವಿಶೇಷ ವಾಹನದಲ್ಲಿ ಕೋಲಾರದ ಸರಕಾರಿ ಬಾಲಕರ ಕಾಲೇಜಿಗೆ ತರಲಾಯಿತು. ಟೀ ಶರ್ಟ್: ಎರಡೂ ತಾಲೂಕುಗಳಿಂದ ವಿಶೇಷ ಟೀ ಶರ್ಟ್ ಧರಿಸಿದ್ದ ಆಯಾ ಪುರಸಭೆ, ನಗರಸಭೆ ಕಾರ್ಮಿಕರು ಶಿಸ್ತುಬದ್ಧವಾಗಿ ಮತಯಂತ್ರಗಳನ್ನು ಕಾಲೇಜಿನ ಸ್ಟ್ರಾಂಗ್ ರೂಂಗಳಿಗೆ ಸಾಗಿಸಿದರು. ಶಿಡ್ಲಘಟ್ಟ ಪೌರ ಕಾರ್ಮಿಕರು ಹಳದಿ ಬಣ್ಣದ ಹಾಗೂ ಚಿಂತಾಮಣಿ ನಗರಸಭೆಯ ಸಿಬ್ಬಂದಿ ನೀಲಿ ಬಣ್ಣದ ಟೀಶರ್ಟ್‌ಗಳನ್ನು ಧರಿಸಿದ್ದರು. ಮತಯಂತ್ರಗಳನ್ನು ಕಾಲೇಜಿಗೆ ಕರೆ ತರುವ
ಸಂದರ್ಭದಲ್ಲಿ ಬೆಂಗಾವಲು ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿತ್ತು. ಇದರಿಂದ ಕಾಲೇಜಿನ ವೃತ್ತದಲ್ಲಿ ಹಲವು ಪೊಲೀಸ್ ವಾಹನಗಳು, ಬಸ್‌ಗಳು, ಚುನಾವಣೆಗೆ ಕರೆ ತಂದಿದ್ದ ಶಾಲಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಾಗಿತ್ತು.
Related Articles
Advertisement
ವಿದ್ಯುತ್ ಸರಬರಾಜು: ಮತ ಎಣಿಕೆ ದಿನದವರೆಗೂ ಮತಯಂತ್ರಗಳಿರುವ ಕಟ್ಟಡಕ್ಕೆ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಲಾಗಿದೆ. ಕಾಲೇಜಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ನಿರಂತರ ಸಂಪರ್ಕ ಕಲ್ಪಿಸುವ ಸಲುವಾಗಿ ವಿಶೇಷವಾದ ಜನರೇಟರ್ ವಾಹನವನ್ನು ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಮಾಡಲಾಗಿದೆ ಕಾಲೇಜಿನ ಕಂಬಕಂಬಗಳಿಗೂ ಟ್ಯೂಬ್ ಲೈಟ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಕಾಲೇಜಿನ ಕಟ್ಟಡಕ್ಕೆ ವಿಶೇಷ ಅಂದ ಬರಲಿದೆ. ಮತಯಂತ್ರಗಳಿರುವ ಯಾವುದೇ ಕೋಣೆಯ ಮುಂಭಾಗ, ಹಿಂಭಾಗ ಕತ್ತಲು ಇಲ್ಲದಂತೆ ನೋಡಿ ಕೊಳ್ಳಲಾಗುತ್ತಿದೆ. ಪ್ರವೇಶ ನಿರ್ಬಂಧ: ಮತಯಂತ್ರಗಳಿರುವ ಞಕಾಲೇಜಿಗೆ ಮುಕ್ತ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದ ಯಾರು ಬೇಕೆಂದರೆ ಅವರು ಕಾಲೇಜಿಗೆ ಪ್ರವೇಶಿಸಲು ಅವಕಾಶವಿಲ್ಲ. ಕಾಲೇಜಿನ ಪ್ರವೇಶ ದ್ವಾರದಲ್ಲಿ ಚುನಾವಣಾ ಕಾರ್ಯಕ್ಕಾಗಿ ನೀಡಿರುವ ವಿಶೇಷ ಗುರುತಿನ ಚೀಟಿಯನ್ನು ತೋರಿಸಿದ ನಂತರವಷ್ಟೇ, ತಪಾಸಣೆಗೊಳಗಾಗಿ ಪ್ರವೇಶ ನೀಡಲಾಗುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳು ಆಗಾಗ್ಗೆ ಕಾಲೇಜಿಗೆ ದಿಢೀರ್ ಭೇಟಿ ಕೊಡುವ ಮೂಲಕ ಬಂದೋಬಸ್ತ್ಗೆ ನೇಮಕಗೊಂಡಿರುವ ಸಿಬ್ಬಂದಿಯನ್ನು ಎಚ್ಚರಿಸುವ ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಕೆ.ಎಸ್.ಗಣೇಶ್