Advertisement

15ರೊಳಗೆ ಜಿಲ್ಲಾ ಪ್ರಕೋಷ್ಠಗಳ ಸಮಾವೇಶ  

03:21 PM May 01, 2022 | Team Udayavani |

ಕೋಲಾರ: ಭಾರತೀಯ ಜನತಾ ಪಕ್ಷದ ವಿವಿಧ ಪ್ರಕೋಷ್ಠಗಳ ಜಿಲ್ಲಾ ಮಟ್ಟದ ಸಮಾವೇಶ ಮೇ 15ರೊಳಗೆ ನಡೆಯಲಿದ್ದು, 8-10 ದಿನದಲ್ಲಿ ಪ್ರಕೋಷ್ಠಗಳ ಜಿಲ್ಲಾ ಮತ್ತು ಮಂಡಲ ಸಮಿತಿಗಳನ್ನು ಪೂರ್ಣಗೊಳಿಸಬೇಕು ಎಂದು ಸಮಾವೇಶ ದ ಜಿಲ್ಲಾ ಉಸ್ತುವಾರಿ ಹಾಗೂ ಬಿಎಂಟಿಸಿ ಉಪಾ ಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಜಿಲ್ಲಾ ಸಂಚಾಲಕರು, ಸಹಸಂಚಾಲಕರಿಗೆ ಸೂಚಿಸಿದರು.

Advertisement

ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದ್ದು, ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವುದರಿಂದ 24 ಪ್ರಕೋಷ್ಠಗಳನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಮುಖಂಡರು ಭಾಗಿ: ಕೇಂದ್ರ ಮತ್ತು ರಾಜ್ಯದ ಯೋಜನೆಗಳು ನಿರ್ದಿಷ್ಟ ಗ್ರಾಮ, ವ್ಯಕ್ತಿಗೆ ಪರಿಣಮಕಾರಿಯಾಗಿ ತಲುಪಿಸಲು ಇವು ಸಹಕಾರಿ. ಹೀಗಾಗಿಯೇ ಕೇಂದ್ರ ನಾಯಕರ ಸಲಹೆಯಂತೆ ಸಮಾವೇಶ ಆಯೋಜಿಸುತ್ತಿದ್ದು, ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ಸಂಘಟನೆಗೆ ಅಗತ್ಯ ಕ್ರಮ: ಸಮಾವೇಶ ದಿನವಿಡೀ ನಡೆಯಲಿದ್ದು, ಬೆಳಗ್ಗೆ ರಾಜ್ಯ ನಾಯಕರು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ ಸಂಘಟನಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಸಂಜೆ ಸಮಾರೋಪ ಸಮಾರಂಭ ನಡೆಯುತ್ತದೆ. ರಾಜ್ಯಾದ್ಯಂತ ಜಿಲ್ಲಾ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಂಡ್ಯ ಉಸ್ತುವಾರಿಯೂ ನಾನೇ ಇರುವುದರಿಂದ ಅಲ್ಲಿ ಈಗಾಗಲೇ ಪೂರ್ವಭಾವಿ ಸಭೆ ಮುಗಿಸಲಾಗಿದೆ. ಜಿಲ್ಲೆಯ ಎಲ್ಲಾ ಪ್ರಕೋಷ್ಠಗಳ ವರದಿ ರಾಜ್ಯ ನಾಯಕರಿಗೆ ತಲುಪಿಸಲಾಗುವುದು. ಅವರು ಪಕ್ಷದ ಸಂಘಟನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್‌. ವೇಣುಗೋಪಾಲ್‌ ಮಾತನಾಡಿ, ವಿಶ್ವದಲ್ಲೆ ಹೆಚ್ಚು ಅಂದರೆ 18 ಕೋಟಿ ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ. 70ವರ್ಷ ರಾಷ್ಟ್ರವನ್ನಾಳಿದ ಕಾಂಗ್ರೆಸ್‌ಗಿಂತ ಹತ್ತು ಪಟ್ಟು ಹೆಚ್ಚು ಸದಸ್ಯತ್ವ ಹೊಂದಿದೆ. 7 ಮೋರ್ಚಾ, 24 ಪ್ರಕೋಷ್ಠಗಳಿದ್ದು, ಸಂಘಟನೆ ಬಲಿಷ್ಠವಾದರೆ ಜಿಲ್ಲೆಯಲ್ಲಿ ಕನಿಷ್ಠ 4ರಿಂದ 5 ಶಾಸಕರನ್ನು ಗೆಲ್ಲಿಸಿಕೊಳ್ಳಬಹುದಾಗಿದೆ ಎಂದರು.

ಮುಖಂಡರಾದ ರಾಜ್ಯ ಸಂಚಾಲಕ ಹೂಡಿ ವಿಜಯಕುಮಾರ್‌, ಹಾಲು ಉತ್ಪಾದಕರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ವೆಂಕಟೇಶಗೌಡ, ಕಾರ್ಯಾಲಯ ಕಾರ್ಯದರ್ಶಿ ರಾಜೇಶ್‌ ಸಿಂಗ್‌, ಮುಖಂಡರಾದ ಮಾಲೂರು ಬಿ.ಆರ್‌. ವೆಂಕಟೇಶ್‌, ಯಲ್ದೂರು ಪದ್ಮನಾಭ, ಹೊಳಲಿ ಹೊಸೂರು ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next