Advertisement

ಕೋಲಾರ 2020 ಹಿನ್ನೋಟ : ಕೋವಿಡ್ ಕಂಟಕ ವಿಸ್ಟ್ರಾನ್‌ ಕಪ್ಪುಚುಕ್ಕೆ

03:00 PM Dec 30, 2020 | Team Udayavani |

ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿದ 2020 ಅಳಿದು ಹೊಸ ವರ್ಷ 21ಕ್ಕೆ ಕಾಲಿಡಲು ಒಂದು ದಿನ ಮಾತ್ರ ಬಾಕಿ. 2020 ಹಲವಾರು ಏಳುಬೀಳುಗಳ ವರ್ಷವಾಗಿತ್ತು. ಕೋಲಾರ ಜಿಲ್ಲೆಯು ಹೊರತಾಗಿರಲಿಲ್ಲ. ಮಾರ್ಚ್‌ನಲ್ಲಿ ಕೋವಿಡ್‌-19 ಲಾಕ್‌ಡೌನ್‌, ಸೀಲ್‌ಡೌನ್‌ ಸರಣಿ ಆರಂಭವಾಗಿತ್ತು. ಜಿಲ್ಲೆಗಳ ಅಭಿವೃದ್ಧಿಯ ಮೇಲೆ ಇದು ದೊಡ್ಡ ಪರಿಣಾಮವನ್ನೇ ಬೀರಿತು. ಚಿನ್ನದ ಗಣಿ ಆರಂಭಿಸುವ ವಿಚಾರ ಚಾಲ್ತಿಗೆ ಬಂದಿತು. ಜಿಲ್ಲಾ ಕೇಂದ್ರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಲವಾರು ಅಡೆತಡೆಗಳ ನಡುವೆ ಕುಂಟುತ್ತಾ ಸಾಗುತ್ತಿದೆ.

Advertisement

ದೇಶದ ಮೊಟ್ಟ ಮೊದಲ ಐಫೋನ್‌ ತಯಾರಿಕಾ ಘಟಕ ವಿಸ್ಟ್ರಾನ್‌ ಕಂಪನಿಯಲ್ಲಿ ವೇತನ ತಾರತಮ್ಯ ಮಾಡಲಾಗು ತ್ತಿದೆಯೆಂದು 2020, ಡಿ.12 ಶನಿವಾರ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದ ಕಾರ್ಮಿಕರು ಇಡೀ ಕಾರ್ಖಾನೆಯನ್ನು ಧ್ವಂಸಗೊಳಿಸಿ ಸುಮಾರು 427 ಕೋಟಿ ರೂ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಗಮನ ಸೆಳೆಯಿತು. ವಿಸ್ಟ್ರಾನ್‌ ಕಂಪನಿಯು ಆಗಿರುವ ಅನಾಹುತಕ್ಕೆ ಹೊಣೆ ಹೊತ್ತುಕೊಂಡು ಬೇಷರತ್‌ ಕ್ಷಮೆಯಾಚಿಸಿ ಕಾರ್ಮಿಕರ ಹಿತ ರಕ್ಷಣೆಗೆ ಬದ್ಧ ಹೇಳಿಕೆ ನೀಡಿರುವುದು ಆಶಾದಾಯಕವಾಗಿದೆ.

ತೋಟಗಾರಿಕೆ ಬೆಳೆ ಬೀದಿಗೆ: ಟೊಮೆಟೋ ಮತ್ತಿತರ ತೋಟಗಾರಿಕೆ ಬೆಳೆಗಳು ಬೀದಿಗೆ ಬೀಳುವಂತಾಯಿತು. ಆದರೂ, ಟೊಮೆಟೋ ಬಾಕ್ಸ್‌ 810 ರೂ.ಗಳವರೆಗೂ ಹರಾ ಜಾಗಿ ದಾಖಲೆ ಬರೆದಿತ್ತು. ರೇಷ್ಮೆ ಮಾರುಕಟ್ಟೆ, ಎಪಿಎಂಸಿ ಗಳು ಕೆಲ ದಿನಗಳ ಕಾಲ ಮುಚ್ಚಲ್ಪ ಟ್ಟತ್ತು ಕೆ.ಸಿ.ವ್ಯಾಲಿ ನೀರು 270 ಎಂಎಲ್‌ಡಿಗೆ ಸೀಮಿತವಾದರೂ 80 ಕೆರೆ ತುಂಬಿಸಿತು. 400 ಎಂಎಲ್‌ಡಿ ಗೆ ಏರಿಸುವ ವಿಷಯ ಭರವಸೆಯಾಗಿಯೇ ಉಳಿಯಿತು.

ಕೋವಿಡ್ ಹಿನ್ನೆಲೆ ಟೊಮೆಟೋ ಮತ್ತಿತರ ತೋಟಗಾರಿಕೆ ಬೆಳೆಗಳು ಬೀದಿಗೆ ಬೀಳುವಂತಾಯಿತು. ಆದರೂ, ಇದೇ ವರ್ಷ ಟೊಮೆಟೋ ಬಾಕ್ಸ್‌ 810 ರೂ.ಗಳವರೆಗೂ ಹರಾಜಾಗಿ ದಾಖಲೆ ಬರೆದಿತ್ತು. ರೇಷ್ಮೆ ಮಾರುಕಟ್ಟೆ, ಎಪಿಎಂಸಿಗಳು ಕೆಲ ದಿನಗಳ ಕಾಲ ಇದೇ ಮೊದಲ ಬಾರಿಗೆ ಮುಚ್ಚಲ್ಪಟ್ಟವು. ಹೈನುಗಾರಿಕೆ ಮಾತ್ರ ಯಥಾ ಪ್ರಕಾರ ಸಾಗಿತು. ಕೆ.ಸಿ.ವ್ಯಾಲಿ ನೀರು 270 ಎಂಎಲ್‌ಡಿಗೆ ಸೀಮಿತವಾದರೂ 80 ಕೆರೆಗಳನ್ನು ತುಂಬಿಸಿತು. 400 ಎಂಎಲ್‌ಡಿ ಗೆ ಏರಿಸುವ ವಿಷಯ ಭರವಸೆಯಾಗಿಯೇ ಉಳಿಯಿತು. ಸಂಸದ ಎಸ್‌. ಮುನಿಸ್ವಾಮಿ ಭರವಸೆ ಕೊಟ್ಟ ಕೋಲಾರಮ್ಮ ಕೆರೆ ವಾಕಿಂಗ್‌ ಪಾಥ್‌, ಅಮ್ಯೂಸ್‌ಮೆಂಟ್‌ ಪಾರ್ಕ್‌ ಕಾಮಗಾರಿ ಆರಂಭವಾಗಲೇ ಇಲ್ಲ, ರೈಲ್ವೆ ವರ್ಕ್‌ಶಾಪ್‌ ಜಾಗ ಹುಡುಕುವಲ್ಲಿಗೆ ಸೀಮಿತವಾಯಿತು. ಮತ್ತೇ ಚಿನ್ನದ ಗಣಿಗಳನ್ನು ಆರಂಭಿಸುವ ವಿಚಾರ ಚಾಲ್ತಿಗೆ ಬಂದಿತು. ಜಿಲ್ಲಾ ಕೇಂದ್ರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಲವಾರು ಅಡೆತಡೆಗಳ ನಡುವೆ ಕುಂಟುತ್ತಾ ಸಾಗುತ್ತಿದೆ. ಹೊಸ ವರ್ಷ ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸಿ ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಜಿಲ್ಲೆ ಸಿಗದಿರಲಿ ಎನ್ನುವುದೇ ಸದ್ಯದ ನಿರೀಕ್ಷೆ.

ಕೋವಿಡ್ ದಿಂದ ಜಿಲ್ಲೆಗೆ ಯಾವ ರೀತಿ ಹೊಡೆತ ?  :

Advertisement

2020 ರಲ್ಲಿ ಕೋವಿಡ್‌ 19 ಕೋವಿಡ್ ವೈರಸ್‌ ಹಾವಳಿಯಿಂದಾಗಿ ಇಡೀ ಜಗತ್ತೇ ಅಲ್ಲಾಡಿ ಹೋಯಿತು. ಜಿಲ್ಲೆಯ ಅಭಿವೃದ್ಧಿಯ ಮೇಲೂ ಕೋವಿಡ್‌ ಹೊಡೆತ ಜೋರಾಗಿಯೇ ಬಿದ್ದಿತ್ತು. ಸ್ಥಳೀಯ ಹಿಂದಿನ ವರ್ಷದ ಬಜೆಟ್‌ ಪೂರ್ಣಗೊಳಿಸುವ ಹಾಗೂ ಹೊಸಬಜೆಟ್‌ ರೂಪಿಸುವುದು ಬಹುತೇಕ ಮಾರ್ಚ್‌ ತಿಂಗಳಿನಲ್ಲಿಯೇ.ಆದರೆ, ಇದೇ ಮಾರ್ಚ್‌ ತಿಂಗಳಿನಲ್ಲಿ ಕೋವಿಡ್‌  ಕಾಣಿಸಿಕೊಂಡಿದ್ದರಿಂದ ಬಹು ತೇಕ ಸ್ಥಳೀಯ ಸಂಸ್ಥೆಗಳು ಬಜೆಟ್‌, ವಾರ್ಷಿಕ ಕ್ರಿಯಾ ಯೋಜನೆಯನ್ನು ರೂಪಿ ಸಲು ಸಾಧ್ಯವಾಗಲೇ ಇಲ್ಲ. ಕೋವಿಡ್‌ ನಂತರ ಜಿಲ್ಲಾಡಳಿತದ ಸಂಪೂರ್ಣ ಗಮನ ಕೊರೊನಾ ನಿರ್ವಹಣೆ ಮೇಲೆ ಬಿದ್ದಿದ್ದರಿಂದ ಇತರೇ ಕ್ಷೇತ್ರಗಳ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿತು. ಯಾವುದೇ ಪ್ರಶ್ನೆಗೂ ಕೋವಿಡ್‌ ಕಾರಣ ದಿಂದ ಎಂಬ ನೆಪ ಸಿದ್ಧ ಉತ್ತರವಾಗಿತ್ತು. ಕೋವಿಡ್‌ ದಿಂದ ಅಧಿಕೃತವಾಗಿ 179 ಮಂದಿ ಸಾವನ್ನಪ್ಪಿರುವ ವರದಿ ಇದ್ದರೂ, ಇದಕ್ಕಿಂತಲೂ ಮೂರು ನಾಲ್ಕು ಪಟ್ಟು ಹೆಚ್ಚು ಮಂದಿ ಜಿಲ್ಲಾಡಳಿತದ ಗಮನಕ್ಕೆ ತರದೇ ಸತ್ತು ಮಣ್ಣು ಸೇರಿರುವುದನ್ನು ಸಾವಿನ ಸರಪಳಿ ದೃಢಪಡಿಸುತ್ತದೆ. ಇದೀಗ ಕೊರೊನಾ ಎರಡನೇ ಅಲೆ ಬ್ರಿಟನ್‌ ವೈರಸ್‌ ರೂಪದಲ್ಲಿ ಅನಾವರಣಗೊಳ್ಳುತ್ತಿರುವುದು 2021ರ ಭವಿಷ್ಯದ ಮೇಲೂ ಕರಿನೆರಳು ಬೀಳುವ ಆತಂಕ ಸೃಷ್ಟಿಸುವ ಸಾಧ್ಯತೆಗಳಿವೆ.

ಕೋವಿಡ್‌ ದಿಂದ ಧನಾತ್ಮಕ ಬದಲಾವಣೆ :

ಜಿಲ್ಲೆಯಲ್ಲಿ ಕೋವಿಡ್‌ ದಿಂದ ಜನಜೀವನ ಸಂಕಷ್ಟಕ್ಕೀಡಾದರೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಿಗೆ ನಾಂದಿ ಯಾಡಿತು. ಜಿಲ್ಲಾ ಕೇಂದ್ರ ಸೇರಿದಂತೆ ಬಹುತೇಕ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ತುರ್ತು ಚಿಕಿತ್ಸೆ ಲಭ್ಯವಾಗುತ್ತಿರಲಿಲ್ಲ. ಕೋವಿಡ್‌ ಕಾರಣದಿಂದ ಜಿಲ್ಲಾಸ್ಪತ್ರೆ ಸೇರಿದಂತೆ ಕೋವಿಡ್‌ ಆಸ್ಪತ್ರೆಗಳು ಹಾಗೂ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತುರ್ತು ಚಿಕಿತ್ಸಾ ಸೌಲಭ್ಯಗಳು ಸಿಗುವಂತಾಯಿತು. ಆಮ್ಲಜನಕ ಘಟಕ ಜಿಲ್ಲಾಸ್ಪತ್ರೆಗೆ ದಕ್ಕಿತು. ಜಿಲ್ಲಾಸ್ಪತ್ರೆ ಪ್ರಯೋಗಾಲಯಮೇಲ್ದರ್ಜೆಗೇರಿ ಕೋವಿಡ್‌ ಟೆಸ್ಟ್‌ಗಳನ್ನು ಜಿಲ್ಲೆಯಲ್ಲಿಯೇ ಮಾಡು ವಂತಾಯಿತು. ಕೊರೊನಾ ಚಿಕಿತ್ಸೆ ಖಾಸಗಿ ಆಸ್ಪತ್ರೆಗಳಿಗಿಂತಲೂ ಸರ್ಕಾರಿ ಆಸ್ಪತ್ರೆಗಳೇ ಮೇಲು ಎಂಬಂತಾಯಿತು. ಇವೆಲ್ಲಾ ಕಾರಣದಿಂದಲೇ ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಸಂಖ್ಯೆ 200 ರ ಗಡಿ ದಾಟಲಿಲ್ಲ

ನಾಗೇಶ್‌ ಉಸ್ತುವಾರಿ ಹೊಣೆ, ಬಿಗಿ ತಪ್ಪಿದ ಮಾತು :

ಕೋಲಾರ ಜಿಲ್ಲೆಯಲ್ಲಿ 2020 ಪ್ರಮುಖ ಚುನಾವಣೆಗಳು ನಡೆಯಲಿಲ್ಲವಾದ್ದರಿಂದ ಮಹತ್ವದ ಬದಲಾವಣೆಗಳೇನು ಕಾಣಲಿಲ್ಲ. ಆದರೂ, ಬಿಜೆಪಿ ಸರ್ಕಾರ ಬೆಂಬಲಿಸಿದ್ದ ಎಚ್‌.ನಾಗೇಶ್‌ ಉಸ್ತುವಾರಿ ಹೊಣೆ ಹೊತ್ತುಕೊಂಡಿದ್ದರು. ಇಡೀ ವರ್ಷ ತಮ್ಮ ಬಿಗಿ ತಪ್ಪಿದ ಮಾತುಗಳ ಮೂಲಕ ವಿವಾದಕ್ಕೀಡಾದರು. ಕೋಲಾರ

ಜಿಪಂನಲ್ಲಿ ಖಾಲಿ ಇದ್ದ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸುಗಮವಾಗಿಯೇ ನೇಮಕ ಮಾಡಲಾಯಿತು. ಸುಮಾರು ಒಂದು ವರ್ಷ ಕಾಲ ನೆನೆಗುದಿಗೆ ಬಿದ್ದಿದ್ದ ನಗರಸಭೆ, ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ನ್ಯಾಯಾಲಯದ ಅಡೆ ತಡೆಗಳ ನಡುವೆ ನಡೆಯಿತು. ಪದವೀಧರ ಕ್ಷೇತ್ರದಿಂದ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ಚಿದಾನಂದಗೌಡ ವಿಜೇತರಾದರು. ವಿವಿಧ ನಿಗಮ ಮಂಡಳಿಗಳಿಗೆ ಜಿಲ್ಲೆಯ ಹಲವರು ನೇಮಕಗೊಂಡರು. ಕೋಲಾರ ಡಿಸಿಸಿ ಬ್ಯಾಂಕ್‌ ಪುನಶ್ಚೇತನಗೊಳಿಸಿದ ಹೆಗ್ಗಳಿಕೆಯ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇದೇ ಮೊದಲ ಬಾರಿಗೆ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾಗಿ ಆಯ್ಕೆಯಾದರು. ಕೋಲಾರ ತಾಲೂಕಿನ ವೇಮಗಲ್‌ ಸುತ್ತಮುತ್ತಲ ನಾಲ್ಕು ಪಂಚಾಯ್ತಿಗಳನ್ನು ಸೇರಿಸಿ ಪಟ್ಟಣ ಪಂಚಾಯತ್‌ ಎಂದು ಘೋಷಿಸಲಾಯಿತು.

ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಧಮಕಿ  :

ಕೋಲಾರ ಜಿಲ್ಲೆಯ ಪ್ರವಾಸಕ್ಕೆ ಮೇ.20ರಂದು ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಕೆರೆ ಒತ್ತುವರಿ ತೆರುವುಗೊಳಿಸುವಂತೆ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಮಾಡಿದ ಮನವಿಗೆ ಕೆರಳಿ ನಾನು ಕೆಟ್ಟವನಿದ್ದೇನೆಂದು ಹೇ ಬಾಯಿ ಮುಚ್ಚೇ…ರಾಸ್ಕಲ್‌ ಇತ್ಯಾದಿ ಪದಗಳಿಂದ ಬೆದರಿಕೆ ಹಾಕಿದ್ದಲ್ಲದೇ ಪೊಲೀಸರಿಗೆಆಕೆಯನ್ನು ಎಳೆದೊಯ್ಯುವಂತೆ ಸೂಚಿಸಿದ ಘಟನೆ ಕೋಲಾರ ತಾಲೂಕಿನ ಎಸ್‌.ಅಗ್ರಹಾರ ಕೆರೆಯವೀಕ್ಷಣೆ ಸಂದರ್ಭದಲ್ಲಿ ಜರುಗಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. 1022 ಎಕರೆ ಇರುವ ಎಸ್‌.ಆಗ್ರಹಾರ ಕೆರೆಯ ಅಂಗಳದಲ್ಲಿ 100 ಎಕರೆಗೂ ಹೆಚ್ಚು ಒತ್ತುವರಿಯಾಗಿದೆ, ಅಧಿಕಾರಿಗಳೇ ಪಹಣಿ ಮಾಡಿಕೊಟ್ಟಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸುವವರು ಯಾರು ಎಂದು ಸಚಿವರನ್ನು ಪ್ರಶ್ನಿಸಿದರು. ರೈತ ಸಂಘದ ಈ ಪ್ರಶ್ನೆಗೆ ಕೆರಳಿ ಕೆಂಡಾಮಂಡಲವಾದ ಸಚಿವ ಮಾಧುಸ್ವಾಮಿ, ನಾನು ಕೆಟ್ಟವನಿದ್ದೇನೆ, ನನ್ನ ಬಳಿ ಅಹವಾಲು ಮಾತ್ರವೇ ಮಾಡಿಕೊಳ್ಳ ಬೇಕು ಎಂದು ಸಹನೆ ಕಳೆದುಕೊಂಡಿದ್ದರು. ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಂಡ ನಂತರ ಬಹಿರಂಗವಾಗಿ ಕ್ಷಮೆಯಾಚಿಸಿ ಪ್ರಕರಣವನ್ನು ತಿಳಿಗೊಳಿಸಿದ್ದರು.

ಕೆ.ಸಿ.ವ್ಯಾಲಿಯಿಂದ 80 ಕೆರೆಗಳು ಕೋಡಿ :

ಜಿಲ್ಲೆಯಲ್ಲಿ 2020 ಕೋವಿಡ್‌ ಮತ್ತು ವಿವಿಧ ಕಾರಣಗಳಿಗೆ ಸಮಸ್ಯೆಗಳ ವರ್ಷವಾದರೂ, ಮಳೆಬೆಳೆ ವಿಚಾರದಲ್ಲಿ ತೃಪ್ತಿದಾಯಕ ವರ್ಷವಾಗಿತ್ತು.ಜಿಲ್ಲೆಯ ಪ್ರಮುಖ ರಾಗಿ ಬೆಳೆ ಸಮೃದ್ಧವಾಗಿ ಫ‌ಸಲು ನೀಡಿತು. ಜೊತೆಗೆ ಮಾವು, ಆಲೂಗಡ್ಡೆ,ಟೊಮೇಟೋಗಳು ಆತಂಕದ ನಡುವೆಯೂ ರೈತರಕೈ ಹಿಡಿಯಿತು. ಜೊತೆಗೆ ಕೆ.ಸಿ.ವ್ಯಾಲಿ ನೀರು 270 ಎಂಎಲ್‌ಡಿ ಪ್ರಮಾಣದಲ್ಲಿ ಸತತವಾಗಿಹರಿಯುತ್ತಿರುವುದರಿಂದ ಜಿಲ್ಲೆಯ ಸುಮಾರು 80ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಜಿಲ್ಲೆಯ ಅತಿ ದೊಡ್ಡ ಕೆರೆಯೆನಿಸಿಕೊಂಡಿರುವ ಕೋಲಾರ ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಯು

ಇಪ್ಪತ್ತು ವರ್ಷಗಳ ಕೋಡಿ ಹರಿಯಲು ಆರಂಭಿಸಿ, ಪ್ರವಾಸಿ ತಾಣವಾಗಿ ಮಾರ್ಪಟ್ಟಿತ್ತು. ನಂದಿ ಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ಮೂಲಕ ಹರಿದು ತಮಿಳುನಾಡು ಸೇರುವ ಪಾಲಾರ್‌ ನದಿ ಹರಿಯುವ ಸಾಲಿನಲ್ಲಿಯೇ ಸೋಮಾಂಬುಧಿ ಅಗ್ರಹಾರ ಕೆರೆಯನ್ನು ಅತಿ ದೊಡ್ಡ ಕೆರೆಯೆಂದು ಗುರುತಿಸಲಾಗಿದೆ.

ಗಮನ ಸೆಳೆದ ಹಾಗೂ ಫ‌ಲಶೃತಿಗೆ ಕಾರಣವಾದ 10 ಉದಯವಾಣಿ ಸುದ್ದಿಗಳು :

ಕ್ರಿಮಿನಲ್‌ ಮೊಕದ್ದಮೆಗೆ ಆದೇಶ : ಎತ್ತಿನ ಹೊಳೆ ಯೋಜನೆಯಡಿ 41.48 ಕೋಟಿ ರೂ. ಅಕ್ರಮವೆಸಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಆರ್ಥಿಕ ನಷ್ಟ ವಸೂಲಿ ಮಾಡುವಂತೆ ಸರ್ಕಾರ ಆದೇಶಿಸಿದೆ.

ಗಡಿ ಗ್ರಾಮಗಳಲ್ಲಿ ಜೂಜಾಟ :

ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಜೂಜು ನಿರಾಂತಕವಾಗಿ ನಡೆಯುತ್ತಿದ್ದು, ಉದಯವಾಣಿಯಲ್ಲಿ ವರದಿ ಪ್ರಕಟ ನಂತರ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು ಜೂಜಾಟ ಕೇಂದ್ರಗಳನ್ನು ಸ್ಥಗಿತಗೊಳಿಸಿದ್ದರು.

ಕಾಸು ಕೊಟ್ಟರೂ ಮಾಸ್ಕ್ ಸಿಗುತ್ತಿಲ್ಲ… :

ಕೋಲಾರದಲ್ಲೂ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗೆ ಬೇಡಿಕೆ ಕುದುರಿದ್ದು, ಕಾಸು ಕೊಟ್ಟರೂ ಮಾಸ್ಕ್ ಸಿಗದಂತಾಗಿತ್ತು. ವರದಿ ನಂತರ ಬೆಲೆ ಏರಿಕೆ ಮಾಡಿದವರ ಮೇಲೆ ಕ್ರಮ ಕೈಗೊಂಡಿದ್ದರು.

ಅಂತರ್ಜಲ ಕಲುಷಿತ ಭೀತಿ :

ಅಮ್ಮೇರಹಳ್ಳಿ ಕೆರೆಗೆ ಕೆ.ಸಿ. ವ್ಯಾಲಿ ನೀರು ಹರಿದು ಬರುತ್ತಿದ್ದು, ನೇರವಾಗಿ ಕೊಳವೆ ಬಾವಿಗಳ ಮೂಲಕಅಂತರ್ಜಲ ಕಲುಷಿತಗೊಳ್ಳುವ ಭೀತಿ ಎದುರಾಗತ್ತು. ವರದಿ ನಂತರ ನಗರಸಭೆ ಎಚ್ಚೆತ್ತುಕೊಂಡಿತು.

ಹೆಚ್ಚಿದ ಬಾಲ್ಯವಿವಾಹಗಳು :

2020 ರ ಏಪ್ರಿಲ್‌ನಿಂದ ಆಗಸ್ಟ್‌ವರೆವಿಗೂ 61 ಬಾಲ್ಯ ವಿವಾಹಗಳು ಪತ್ತೆಯಾಗಿದ್ದವು. ಈ ಕುರಿತ ಉದಯವಾಣಿ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಜಾಗೃತಿಗೆ ಮುಂದಾದರು

ವರದಾನವಾದ ನರೇಗಾ :

ಲಾಕ್‌ಡೌನ್‌ ದಿನಗಳಲ್ಲಿ ಯಾವುದೇ ಕೆಲಸ ಕಾರ್ಯ ಮಾಡಬಾರದೆಂಬ ಭೀತಿ ಎದುರಾಗಿತ್ತು. ಆದರೆ,ಆನಂತರದ ದಿನಗಳಲ್ಲಿ ನರೇಗಾಗೆ ಹಸಿರು ನಿಶಾನೆ ಸಿಕ್ಕಿದರಿಂದ ಕಾಮಗಾರಿಗಳಲ್ಲಿ ತೊಡಗಿಸಿಕೊಂಡರು.

ಒಂದೇ ಕಚೇರಿಗೆ ಇಬ್ಬರು ಅಧಿಕಾರಿಗಳು!  :

ಒಂದೇ ಕಚೇರಿಯಲ್ಲಿ ಇಬ್ಬರು ಕಾರ್ಯಪಾಲಕ ಇಂಜಿನಿಯರ್‌ಗಳು ಕಾರ್ಯನಿರ್ವಹಣೆ ಸಮಸ್ಯೆಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ ದಲ್ಲಿ ಉದ್ಭವವಾಗಿತ್ತು. ವರದಿ ನಂತರ ತಿಳಿಯಾಯಿತು.

ಪರಿಶಿಷ್ಟರ ಅನುದಾನ ದುರ್ಬಳಕೆ  ;

ನರಸಾಪುರ ಗ್ರಾಪಂನಲ್ಲಿ ಪ.ಜಾತಿ ವರ್ಗಕ್ಕೆ ಮೀಸಲಾದ ಅನುದಾನದ ಖರೀದಿಯಲ್ಲಿ ಅವ್ಯವಹಾರ ಬೆಳಕಿಗೆ ಬಂದಿತ್ತು. ವರದಿ ನಂತರ ಅಕ್ರಮ ಬಗ್ಗೆ ಅಧಿಕಾರಿಗಳು ಗಮನ ಹರಿಸಿದ್ದರು

ವ್ಯಕ್ತಿಗೆ ಬೆಂಗಾವಲಾಗಿದ್ದರೆ ! :

ಬಂಧನದ ವಾರೆಂಟ್‌ ಇದ್ದ ವ್ಯಕ್ತಿಗೆ ಬೆಂಗಾವಲಾಗಿ ನಿಂತು ಕಾಮಸಮುದ್ರ ಠಾಣೆ ಪೊಲೀಸರು ತಹಶೀಲ್ದಾರ್‌ ಹತ್ಯೆಗೆ ಕಾರಣ ಅಂಶವನ್ನು ಉದಯವಾಣಿ ವರದಿಪಿಂದ ಬೆಳಕಿಗೆ ತರಲಾಗಿತ್ತು.

ವಿತರಣೆಗೆ ಕಾದಿದೆ ಅಕ್ಕಿ, ಗೋಧಿ :

ಜಿಲ್ಲೆಯಲ್ಲಿ ಲಕ್ಷ ಶಾಲಾ ಮಕ್ಕಳಿಗೆ ಎರಡನೇ ತ್ತೈಮಾಸಿಕದಲ್ಲಿ ವಿತರಿಸಲು 7,647 ಕ್ವಿಂಟಲ್‌ ಆಹಾರಧಾನ್ಯ ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿತ್ತು. ವರದಿ ನಂತರ ವಿತರಣೆಗೆ ಕ್ರಮಕೈಗೊಂಡಿತ್ತು.

2020 ರಲ್ಲಿ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ನಿಧನರಾದ ಗಣ್ಯರು  :

ಡಾ.ವಿ.ನಾಗರಾಜ್‌  :

ಬೆಂ.ಉತ್ತರ ವಿವಿ, ಕೋಲಾರತಾ.ಮಂಗಸಂದ್ರ ಸ್ನಾತಕೋತ್ತರಕೇಂದ್ರದ ಕನ್ನಡ ವಿಭಾಗ,ಸಂಯೋಜನಾಧಿಕಾರಿಡಾ.ವಿ.ನಾಗರಾಜ್‌ (54)ಉಸಿರಾಟದ ತೊಂದರೆಯಿಂದ ಫೆ.24 ರಂದು ನಿಧನರಾಗಿದ್ದರು.

ಯೋಧ ಪ್ರಶಾಂತ್‌  ;

ಬಂಗಾರಪೇಟೆ ತಾ.ಕಣೆಂಬೆಲೆ ವಾಸಿ ಜ.ಕಾಶ್ಮೀರದ ರಜೋರಿಯಲ್ಲಿ ಯೋಧರಾಗಿದ್ದ ಪ್ರಶಾಂತ್‌(27)ಕೊನೆಯುಸಿರೆಳೆದಿದ್ದರು. ಮದ್ರಾಸ್‌ ಎಂಆರ್‌ಸಿ 17ಬೆಟಾಲಿಯನ್‌ನಲ್ಲಿ ಸೇವೆ ಸ್ಲಲಿಸುತ್ತಿದ್ದರು.

ಬಿ.ಮುನಿಯಪ್ಪ : ಕೋಲಾರ ಜಿಲ್ಲಾ ಪರಿಷತ್‌ ಮೊದಲ ಉಪಾಧ್ಯಕ್ಷ ಕೆಂಬೋಡಿ ಗ್ರಾಮದ ಡಾ.ಬಿ.ಮುನಿಯಪ್ಪ(65) ಆಗಸ್ಟ್‌ 8ರಂದು ಜಾಲಪ್ಪ ಆಸ್ಪತ್ರೆಯಲ್ಲಿ ಕೊನೆಉಸಿರೆಳೆದಿದ್ದರು. 80ರ ದಶಕದಲ್ಲಿ ಜನತಾ ಪಕ್ಷದಿಂದ ಲೋಕಸಭಾ ಅಭ್ಯರ್ಥಿ ಆಗಿ ಪರಾಜಿತರಾಗಿದ್ದರು.

ಮದ್ದೇರಿಗೌಡ :

ಕೋಲಾರ ತಾ.ಹಿರಿಯ ರಾಜಕಾರಣಿ ಮದ್ದೇರಿ ರಾಮೇಗೌಡ ಜು.31ರಂದು ಕೊನೆಯುಸಿರೆಳೆದರು. ಭೈರೇಗೌಡರ ಬೆಂಬಲಿಗರಾಗಿದ್ದಇವರು ಗ್ರಾಪಂ ಅಧ್ಯಕ್ಷರಾಗಿ, ತಾಪಂ ಅಧ್ಯಕ್ಷರಾಗಿ, ಎರಡು ಬಾರಿ ಜಿಪಂ ಸದಸ್ಯರಾಗಿದ್ದರು.

ಸೈಯದ್‌ ಜಮೀರ್‌ ಪಾಷಾ :

ಕೋಲಾರ ಜಿಲ್ಲಾಧಿಕಾರಿಯಾಗಿದ್ದಸೈಯದ್‌ ಜಮೀರ್‌ ಪಾಷಾವರ್ಷಾಂತ್ಯದಲ್ಲಿ ಕೊನೆಯುಸಿರೆಳೆದರು.ಅವಿಭಜಿತ ಕೋಲಾರ ಜಿಲ್ಲೆಯ ಕಟ್ಟಕಡೆಯ ಐಎಎಸ್‌ ಅಧಿಕಾರಿ. 2018 ರಲ್ಲಿಕೋಲಾರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು.

ಟಾಪ್‌10 :  2020ರಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿ :

ಸುಧಾಕರ್‌ ಉಸ್ತುವಾರಿ ಸಚಿವ  ;

ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಗೆಲುವು ಸಾಧಿಸಿದ್ದ ಡಾ.ಸುಧಾಕರ್‌ ಕಾಂಗ್ರೆಸ್‌ ತೊರೆದುಬಿಜೆಪಿ ಸೇರ್ಪಡೆಯಾಗಿ ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರದಲ್ಲಿಆರೋಗ್ಯ ಮತ್ತು ಜಿಲ್ಲಾ ಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋಲಾರಕ್ಕೆ  ಉಗ್ರರ ನಂಟು :

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರ ಮೆಹಬೂಬ್‌ ಪಾಷಾನನ್ನು ಬಂಧಿಸಲಾಗಿದ್ದು, ಆತನಿಗೆ ಕೋಲಾರದಲ್ಲಿ ಆಶ್ರಯ ನೀಡಿದರೆನ್ನಲಾದ ಕೋಲಾರದ ಇಬ್ಬರು ಆರೋಪಿಗಳನ್ನು ಜ.13 ರಂದು ಚೆನ್ನೈನ ಕ್ರೈಂ ಬ್ರಾಂಚ್‌ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.ಕೋಲಾರದ ಪ್ರಶಾಂತ್‌ ನಗರದ ಮೊಹಮ್ಮದ್‌ ಜಹೀದ್‌, ಬೀಡಿಕಾಲೋನಿ ನಿವಾಸಿ ಸಲೀಂ ಖಾನ್‌, ಉಗ್ರ ಮೆಹಬೂಬ್‌ ಪಾಷಾ ಜೊತೆ ಸಂಪರ್ಕ ಹೊಂದಿದ್ದ ಸುಳಿವಿನ ಆರೋಪದಡಿ ಇಬ್ಬರನ್ನು ಬಂಧಿಸಿದ್ದರು.

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ  :

2019 ಹಾಗೂ 20ನೇ ಸಾಲಿನ ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು. ಮುಖ್ಯವಾಗಿ ಫ‌ಲಿತಾಂಶದ ಸಾಧನೆಗೆ ಜಿಲ್ಲಾಡಳಿತ ಕ್ರಮಗಳು ಹಾಗೂ ಅಂದಿನ ಜಿಪಂ ಸಿಇಒ ಆಗಿದ್ದ ಫೌಝಿಯಾ ತರುನ್ನುಮ್‌ ವಿಶೇಷ ಆಸಕ್ತಿ ಎಂದರೆ ತಪ್ಪಾಗಲಾರದು.

ಕಮಲ ಮುಡಿದ ನವೀನ್‌ :

2018ರ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‌ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವೀನ್‌ ಕಿರಣ್‌ ಕಾಂಗ್ರೆಸ್‌ ತೊರೆದು ಬಿಜೆಪಿಸೇರ್ಪಡೆಯಾದರೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ವಂಚಿತರಾಗಿದ್ದ ಶಿಡ್ಲಘಟ್ಟ ಮಾಜಿ ಶಾಸಕ ರಾಜಣ್ಣ ಸಹ ಬಿಜೆಪಿಗೆ ಸೇರ್ಪಡೆ.

ನಿಲ್ಲದ ವನ್ಯಜೀವಿಗಳ ದಾಳಿ :

ಮಾಲೂರು, ಬಂಗಾರಪೇಟೆ, ಕೋಲಾರ ತಾಲೂಕಿನ ಗಡಿ ಗ್ರಾಮಸ್ಥರನ್ನು ಕಾಡಿದ್ದು ಕಾಡಾನೆಗಳ ದಾಳಿ, ಚಿರತೆಗಳ ಹಾವಳಿ ಜೊತೆಗೆ ವಾಹನಗಳಿಗೆ ನಿಲುಕಿಸಾಯುವ ಜಿಂಕೆಗಳ ಸಾವು. 15ನೇ ಪೆಬ್ರವರಿ, ಸ್ಥಳೀಯ ಕೂರಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜಿಂಕೆ ಯೊಂದು ರಸ್ತೆ ದಾಟುವಾಗಿ ವಾಹನಕ್ಕೆ ಸಿಲುಕಿಮೃತಪಟ್ಟಿತ್ತು. ಅದೇ ರೀತಿ ಯಲ್ಲಿ ಮಾರ್ಚ್‌ 7ರಂದು ತಾಲೂಕಿನ ಯಶವಂತ ಪುರದಲ್ಲಿ ಗಂಡು ಜಿಂಕಿ ಅಪರಿಚಿತವಾಹನಕ್ಕೆ ಬಲಿಯಾಗಿತ್ತು.

ಜಿಲ್ಲೆಗೆ ಕಾಲಿಟ್ಟ ಕೋವಿಡ್‌ :

ಜಿಲ್ಲೆಯಲ್ಲಿ ಕೋವಿಡ್‌ ಸೀಸನ್‌ ಆರಂಭವಾಗಿ 48 ದಿನಗಳಿಂದಲೂ ಕಾಣಿಸಿಕೊಳ್ಳದ ಕೊರೊನಾ ಕೊನೆಗೂ ಜಿಲ್ಲೆಗೆ ಮೇ.12 ರಂದು ಕಾಲಿಟ್ಟು ಒಮ್ಮೆಗೆ ಐದು ಸೋಂಕಿತ ಪ್ರಕರಣ ಪತ್ತೆಯಾಗಿ ಇಡೀ ಜಿಲ್ಲೆಯನ್ನು ಆತಂಕದಲ್ಲಿ ಮುಳುಗಿಸಿತ್ತು. 48 ಕ್ಕೂ ಹೆಚ್ಚು ದಿನಗಳಿಂದ ಹಸಿರು ವಲಯದಲ್ಲಿ ಬೀಗುತ್ತಿದ್ದ ಕೋಲಾರ ಮೇ.12 ರ ಅಶುಭ ಮಂಗಳವಾರ ಒಮ್ಮೆಗೆ ಸೋಂಕಿತ ಜಿಲ್ಲೆಯಾಗಿ ಮಾರ್ಪಟ್ಟಿತು.

ತಹಶೀಲ್ದಾರ್‌ ಕೊಲೆ :

ಜಮೀನು ವಿವಾದದ ಹಿನ್ನೆಲೆಯಲ್ಲಿ ಸರ್ವೆ ಮಾಡಲು ಹೋಗಿದ್ದ ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ (55) ರನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದ ಘಟನೆ ಜೂನ್‌.9 ರಂದು ಬಂಗಾರಪೇಟೆ ತಾ.ಕಾಮಸಮುದ್ರ ಹೋಬಳಿಯ ಗಡಿಭಾಗದ ಚಿಕ್ಕ ಕಳವಂಚ ಗ್ರಾಮದಲ್ಲಿ ನಡೆದಿತ್ತು. ಆರೋಪಿ ತೊಪ್ಪನಹಳ್ಳಿ ಗ್ರಾಪಂ ಚಿಕ್ಕಕಳವಂಚಿ ಗ್ರಾಮದ ನಿವೃತ್ತ ಶಿಕ್ಷಕ ವೆಂಕಟಪತಿ ಅವರನ್ನು ಬಂಧಿಸಿದ್ದರು.

ಭಾರೀ ಪ್ರಮಾಣದ ಗಾಂಜಾ ವಶ :

ಕೆಜಿಎಫ್ನಲ್ಲಿ ಪೊಲೀಸರು ಕುಖ್ಯಾತ ರೌಡಿ ಸಹೋದರ ಪೌಳಿ ಸೇರಿದಂತೆ ಫ‌ಲರಾಜ್‌, ಜೆಸ್ಸಿ, ವಸಂತ, ಕಾರ್ತಿ ಹಲವರನ್ನು ಬಂಧಿಸಿ ಅವರು ನೀಡಿದ್ದ ಸುಳಿವಿನ ಮೇರೆಗೆ 2 ಕೋಟಿ ಮೌಲ್ಯದ ಗಾಂಜಾವನ್ನುವಶಪಡಿಸಿಕೊಂಡಿದ್ದರು. ಇದುವರೆಗೂ ಜಿಲ್ಲೆಯಲ್ಲಿ ಪೊಲೀಸರುವಶಪಡಿಸಿಕೊಂಡ ಅತಿ ಹೆಚ್ಚು ಪ್ರಮಾಣದ ಗಾಂಜಾ ಪ್ರಕರಣ ಇದಾಗಿ ರಾಜ್ಯದ ಗಮನ ಸೆಳೆಯಿತು.

ನಾಲ್ಕು ಗಂಟೆ ನಿಂತು ಪ್ರತಿಭಟನೆ

ಕೆಜಿಎಫ್‌ ಶಾಸಕಿ ರೂಪಕಲಾ ಸತತ ನಾಲ್ಕು ಗಂಟೆಗಳ ಕಾಲ ಡೀಸಿ ಕಚೇರಿ ಮುಂದೆ ಬ್ಯಾನರ್‌ ಹಿಡಿದು ಪ್ರತಿಭಟನೆ ನಡೆಸಿ ಕೆಜಿಎಫ್ ಅಶೋಕ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿದ ಘಟನೆ ಸೆ.19 ರಂದು ಜರುಗಿತು. ಕಾಮಗಾರಿ ಆರಂಭಿಸಲು ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು ವಿಧಾನಸಭೆಯ ಗಮನ ಸೆಳೆಯಿತು.

ವರ್ತೂರು ಪ್ರಕಾಶ್‌ ಅಪಹರಣ :

ಕೋಲಾರ ತಾಲೂಕಿನ ಬೆಗ್ಲಿ ತೋಟದ ಮನೆಯಿಂದ ಹೊರಟಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನು ಆರೇಳು ಮಂದಿ ಅಪಹರಣಕಾರರು ನವೆಂಬರ್‌ ಕೊನೆಯಲ್ಲಿ ಅಪಹರಿಸಿದ್ದರು. ಚಿತ್ರಹಿಂಸೆ ಕೊಟ್ಟು 48 ಲಕ್ಷರೂ.ವಸೂಲು ಮಾಡಿ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಪ್ರಕಾಶ್‌ಬೆಳ್ಳಂದೂರು ಠಾಣೆಯಲಿ ದೂರು ನೀಡಿದ್ದರು. ಆರೋಪಿಗಳು ಹಣಕ್ಕಾಗಿಯೇ ಆಪಹರಿಸಿದ್ದರು ಎಂಬುದನ್ನು ಐಜಿಪಿ ಸ್ಪಷ್ಟಪಡಿಸಿದ್ದರು.

ಕೋವಿಡ್‌ ಭೀತಿಯಿಂದ ಜನರು ಮುಕ್ತರಾಗಲಿ. ಲಸಿಕೆಎಲ್ಲರಿಗೂ ಸಿಗಲಿ. ರೈತರು,ಕಾರ್ಮಿಕರ ಜೀವನ ಸಹಜ ಸ್ಥಿತಿಗೆ ಬರುವಂತಾಗಲಿ.– ರೂಪಕಲಾ, ಶಾಸಕರು, ಕೆಜಿಎಫ್

2021ರಲ್ಲಿ ಮಾಲೂರು ಪಟ್ಟಣ ಮತ್ತು ತಾಲೂಕನ್ನುಸಂಪೂರ್ಣವಾಗಿ ಅಬಿವೃದ್ಧಿಪಡಿಸುವ ಕನಸಿದ್ದು, ಸಾಕಾರಕ್ಕೆ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. – ಕೆ.ವೈ.ನಂಜೇಗೌಡ, ಶಾಸಕರು. ಮಾಲೂರು

ಜಗತ್ತು 2021 ರಲ್ಲಿ ಕೋವಿಡ್‌ ದಿಂದ ಮುಕ್ತವಾಗಲಿ.ಅವಳಿ ಜಿಲ್ಲೆಯ ಹೈನುಗಾರರಿಗೆ, ರೈತಾಪಿ ವರ್ಗಕ್ಕೆ ಕೃಷಿ ಕೂಲಿ ಕಾರ್ಮಿಕರಿಗೆ ಹೊಸ ವರ್ಷ ಆಶಾದಾಯಕವಾಗಿರಲಿ. – ವಡಗೂರು ಹರೀಶ್‌, ನಿರ್ದೇಶಕರು, ಕೋಚಿಮುಲ್

ಬ್ಯಾಂಕಿಂಗ್‌ ಕ್ಷೇತ್ರಚೇತರಿಸಿಕೊಂಡು ಆರ್ಥಿಕವಾಗಿಪುನಶ್ಚೇತನ, ಸಾಲ ವಸೂಲಾತಿಚುರುಕುಗೊಳಿಸಲು ಹೊಸ ನೀತಿಗಳನ್ನು ರೂಪಿಸಿಅನುಷ್ಠಾನಗೊಳಿಸಲಿ. – ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌

ಜೆಡಿಎಸ್‌ ಮುಂದಿನಚುನಾವಣೆಗಳ ದೃಷ್ಟಿಯಿಂದರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೊಸಚೈತನ್ಯದಿಂದ ಹೊಸ ರೂಪದಲ್ಲಿ ಬಲಗೊಳ್ಳಬೇಕಿದೆ. – ವೆಂಕಟಶಿವಾರೆಡ್ಡಿ, ಅಧ್ಯಕ್ಷರು, ಜೆಡಿಎಸ್‌ ಕೋಲಾರ ಜಿಲ್ಲೆ

 

 

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next