ಕೋಲಾರ: ಸರ್ವಾಂಗೀಣ ಮಕ್ಕಳ ಆರೋಗ್ಯದ ದೃಷ್ಟಿಯಿಂದ 5ವರ್ಷದ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಕಡ್ಡಾಯವಾಗಿ ಹಾಕಿಸಲು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
Advertisement
ನಗರದಲ್ಲಿ ರೋಟರಿ ಸಂಸ್ಥೆ ಕೋಲಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಲ್ಸ್ ಪೋಲಿಯೋ 2024ರ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಏರ್ಪಡಿಸಿದ್ದ ವಲಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪಲ್ಸ್ ಪೋಲಿಯೋ ರಾಷ್ಟ್ರೀಯ ಲಸಿಕಾ ದಿನಗಳನ್ನು ನಿಗ ದಿಪಡಿಸಿ ಆ ಮೂಲಕ ಕಳೆದ 26 ವರ್ಷಗಳಿಂದ 0 ದಿಂದ 5 ವರ್ಷಗಳ ಒಳಗೆ ಇರುವ ಎಲ್ಲಾ ಮಕ್ಕಳಿಗೆ ಬಾಯಿ ಲಸಿಕೆಯಿಂದ ರಕ್ಷಣೆ ಕೊಡುವ ಕಾರ್ಯಕ್ರಮ ಪ್ರತಿವರ್ಷ ಹಮ್ಮಿಕೊಂಡಿದ್ದು, ಪೋಲಿಯೋವನ್ನು ನಮ್ಮ ದೇಶದಿಂದ ನಿಮೂರ್ಲನೆ ಮಾಡಲಾಗಿದೆ ಎಂದರು.
ಯಾವ ಮಾಹೆಯಲ್ಲಾದರೂ ವೈರಸ್ ನುಸುಳಬಹುದು. ಅದಕ್ಕಾಗಿ ನಾವು ಸದಾ ಸಿದ್ಧರಾಗಿರಬೇಕು ಎಂದು ತಿಳಿಸಿದರು. ಮಾ.3ಕ್ಕೆ ರಾಷ್ಟ್ರೀಯ ಪಲ್ಸ್ ಪೋಲಿಯೋ:
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ವಿಜಯ ಕುಮಾರಿ ಮಾತನಾಡಿ, ಪಲ್ಸ್ ಪೋಲಿಯೋವನ್ನು ಎಲ್ಲಾ ಪ್ರದೇಶದ ಎಲ್ಲಾ ಮಕ್ಕಳಿಗೂ ಸಹ ತಪ್ಪದೇ ನೀಡಲು ತಿಳಿಸಿದರು. ಮಕ್ಕಳ ಏಳಿಗೆಗಾಗಿ ಬಾಲ್ಯದಿಂದ ಹಿಡಿದು ಒಂದುವರೆ ವರ್ಷದವರೆಗೂ ಎಲ್ಲಾ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕೆಂದು ತಿಳಿಸಿದರು. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ವತಿಯಿಂದ ಡಾ. ಮಿಸ್ಬಾ ಹನಿ ಮಾತನಾಡಿ, ಪಿಪಿಟಿ ಮುಖಾಂತರ ರಾಜ್ಯದ ಪ್ರಸ್ತುತ ಅಂಕ ಅಂಶಗಳನ್ನು ಎಲ್ಲರ ಗಮನಕ್ಕೆ ತಂದರು. ರೋಟರಿ ಜಿಲ್ಲಾ ಪಲ್ಸ್ ಪೋಲಿಯೋ ಚೇರ್‌ಮನ್ ಶ್ರೀಕಾಂತ ಮಾ.3ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
Related Articles
ರೊ.ಕೆ.ಎನ್.ಪ್ರಕಾಶ್, ರೋಟರಿ ಕೆಜಿಎಫ್ ಅಧ್ಯಕ್ಷ ರೊ.ಅಭಿಷೇಕ್ ಕಾರ್ತಿಕ್, ರೋಟರಿ ಕೋಲಾರ ಲೇಕ್ ಸೈಟ್ ಅಧ್ಯಕ್ಷ ರೊ.
ರಾಮಕೃಷ್ಣೇಗೌಡ, ರೋಟರಿ ಬಂಗಾರಪೇಟೆ ಅಧ್ಯಕ್ಷ ರೊ.ಅಶ್ವಥ್ ಹಾಗೂ ರೋಟರಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಪೈಂಟರ್ ಬಷೀರ್ ಅಹಮದ್, ಬೆಂಗಳೂರಿನ ವಿವಿಧ ರೋಟರಿ ಅಮರನಾಥ್, ಶ್ರೀನಿವಾಸ್ ಇದ್ದರು.
Advertisement