ಮಾಸ್ತಿ: ಮಾಸ್ತಿ ಸೇರಿದಂತೆ ಗ್ರಾಮದ ಹೊರವಲ ಯದ ಕೆಲವು ಪ್ರದೇಶಗಳಲ್ಲಿ ಇತಿಹಾಸ ಸಾರು ವಂತಹ ಮಾಸ್ತಿ ಕಲ್ಲುಗಳು ಹಾಗೂ ವೀರಗಲ್ಲುಗಳು ಇಂದು ವಿನಾಶದ ಅಂಚಿಗೆ ಸಾಗುತ್ತಿದ್ದು, ವಿನಾಶದ ಅಂಚಿಗೆ ಮಾಸ್ತಿ ಕಲ್ಲುಗಳು ಹಾಗೂ ವೀರಗಲ್ಲುಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ.
ಮಾಸ್ತಿ ಸೇರಿದಂತೆ ಗ್ರಾಮದ ಹೊರವಲಯದ ಹಲವು ಪ್ರದೇಶಗಳಲ್ಲಿ ಗಣ ಇತಿಹಾಸ ಸಾರುವ ಪುರಾತನ ಕಾಲದ ಇತಿಹಾಸವುಳ್ಳ ಅದೆಷ್ಟೋ ಮಾಸ್ತಿ ಕಲ್ಲುಗಳು ಹಾಗೂ ವೀರಗಲ್ಲುಗಳಿದ್ದು, ಪ್ರಸ್ತುತ ಹತ್ತಾರು ಮಾಸ್ತಿ ಕಲ್ಲುಗಳು ಹಾಗೂ ವೀರಗಲ್ಲುಗಳು ಮಾತ್ರ ಕಾಣಸಿಗುತ್ತಿವೆ. ಇಂದು ಅವು ವಿನಾಶದ ಅಂಚಿಗೆ ಸಾಗುತ್ತವೆ.
ಇತಿಹಾಸ ಸಾರುವ ಮಾಸ್ತಿ ಕಲ್ಲು: ದೇಶ, ನಾಡು, ಕುಟುಂಬಕ್ಕಾಗಿ ಕೊನೆಗೆ ತನ್ನಪತಿಗಾಗಿ ಪ್ರಾಣ ನೀಡಿದ ವೀರರ ನೆನಪಿನಲ್ಲಿರು ವೀರಗಲ್ಲುಗಳು ಪವಿತ್ರ ಮಹಿಳೆಯರ ಮಹಾಸತಿಗಳ ಕಲ್ಲುಗಳು ಹಲವಾರು ಕಡೆ ಕಾಣಸಿಗುತ್ತವೆ. ಹಾಗೂ ಅನೇಕ ಕಡೆಗಳಲ್ಲಿ ರಾಜ, ಮಹಾರಾಜರ ಆಳ್ವಿಕೆಯಲ್ಲಿ ಕೆತ್ತಿಸಲಾದ ಶಾಸನ, ವೀರಗಲ್ಲೂ, ಮಾಸ್ತಿ ಕಲ್ಲು ಸೇರಿದಂತೆ ದೇವರ ಮೂರ್ತಿಗಳುಳ್ಳ ಕಲ್ಲುಗಳು ಇವೆ. ಅದರಂತೆಯೇ ಮಾಸ್ತಿ ಸೇರಿದಂತೆ ಗ್ರಾಮದ ಹಲವು ಕಡೆ ಕೆಲವ ಪ್ರದೇಶಗಳಲ್ಲಿ ಗಣ ಇತಿಹಾಸ ಸಾರುವ ಮಾಸ್ತಿ ಕಲ್ಲುಗಳು ಹಾಗೂ ವೀರಗಲ್ಲು ಗಳು ಪೊದೆಗಳಲ್ಲಿ ಹಾಗೂ ಮಣ್ಣಿನೊಳಗೆ ಮುಚ್ಚಿ ಹೋಗಿ ಹಾಳಾಗುತ್ತಿವೆ.
ದೇವರ ಕಲ್ಲುಗಳಿಗೆ ಪೂಜೆ: ಕೆಲವು ಕಡೆ ಹೊಲ, ಗದ್ದೆ, ಜಮೀನುಗಳಲ್ಲಿರುವ ವೀರಗಲ್ಲು ಹಾಗೂ ದೇವರ ಕಲ್ಲುಗಳಿಗೆ ಪೂಜೆ ಸಹ ಸಲ್ಲಿಸುತ್ತಿರುವುದು ಇಂದಿಗೂ ಕಂಡು ಬರುತ್ತಿದೆ. ಆದರೆ ಇಂತಹ ವೀರಗಲ್ಲು ಹಾಗೂ ಮಾಸ್ತಿ ಕಲ್ಲುಗಳ ರಕ್ಷಣೆಗೆ ಸಂಬಂಧ ಪಟ್ಟ ಇಲಾಖೆಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಇಂದು ಅವು ಸಂಪೂರ್ಣವಾಗಿ ಹಾಳಾಗುವ ಹಂತ ತಲುಪಿದ್ದು, ಇತಿಹಾಸ ತಜ್ಞರು ಇದರ ಬಗ್ಗೆ ಪರಿಶೀಲಿಸಿ, ತನಿಖೆ ನಡೆಸಬೇಕಾಗಿದೆ. ಸರ್ಕಾರದ ಪುರಾತತ್ವ ಇಲಾಖೆ ಇತ್ತ ಕಡೆ ಗಮನ ಹರಿಸಿ ವಿನಾಶದ ಅಂಚಿಗೆ ಸಾಗುತ್ತಿರುವ ಮಾಸ್ತಿ ಹಾಗೂ ವೀರಗಲ್ಲು ಗಳನ್ನು ರಕ್ಷಿಸಿದೆ.
ಮಾಸ್ತಿ ಭಾಗದಲ್ಲಿ ಇತಿಹಾಸ ಸಾರುವ ಪುರಾತನ ಕಾಲದ ಅದೆಷ್ಟೋ ಮಾಸ್ತಿ, ವೀರಗಲ್ಲು ಹಾಗೂ ವಿವಿಧ ದೇವರ ಮೂರ್ತಿಗಳುಳ್ಳ ವಿಗ್ರಹಗಳಿವೆ. ಆದರೆ ಪ್ರಸ್ತುತ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಿವೆ. ಇಂದು ಅವು ಹಾಳಾಗುತ್ತಿವೆ. ಇವುಗಳನ್ನು ಒಂದು ಕಡೆ
ಶೇಖರಣೆ ಮಾಡಿ, ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವುದು ನನ್ನ ಮಹ ದಾಸೆಯಾಗಿದೆ. ಸಂಭಂದಪಟ್ಟ ಇಲಾಖೆ
ಇದನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೂ ಉಳಿಸುವ ಅಗತ್ಯವಿದೆ.
●ಮಾಸ್ತಿ ಕೃಷ್ಣಪ್ಪ, ಸಾಹಿತಿ
*ಮಾಸ್ತಿ ಎಂ.ಮೂರ್ತಿ