Advertisement

ಕೋಲಾರ :  ಎಂ. ವಿ. ಕೃಷ್ಣಪ್ಪ ಪತ್ನಿ ಪ್ರಮೀಳಮ್ಮ ನಿಧನ

01:54 PM Jun 23, 2021 | Team Udayavani |

ಕೋಲಾರ :  ಹೈನೋದ್ಯಮದ ಪಿತಾಮಹ ಎಂದೇ ಖ್ಯಾತಿ ಪಡೆದು ಇಂದು ಲಕ್ಷಾಂತರ ರೈತರ ಜೀವನಕ್ಕೆ ದಾರಿ ದೀಪವಾಗಿರುವ ದಿವಂಗತ ಎಂ. ವಿ. ಕೃಷ್ಣಪ್ಪ ರವರ ಧರ್ಮಪತ್ನಿ ಹಾಗೂ ಕೋಲಾರ ಜಿಲ್ಲೆಯ ಪ್ರಭಾವಿ ಮುಖಂಡರಾದ ಶ್ರೀ ಅಶೋಕ್ ಕೃಷ್ಣಪ್ಪ ಮತ್ತು ಜಯಸಿಂಹ ಕೃಷ್ಣಪ್ಪ ರವರ ತಾಯಿ ಪ್ರಮೀಳಮ್ಮ ಕೃಷ್ಣಪ್ಪ (95) ವರ್ಷ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

Advertisement

ಕೇಂದ್ರ ಮತ್ತು ರಾಜ್ಯಸರ್ಕಾರಗಳಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಕೋಲಾರಜಿಲ್ಲೆಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂ. ವಿ. ಕೆ ರವರ ಸಾಧನೆಯಲ್ಲಿ ಮೃತ ಪತ್ನಿ ಪ್ರಮೀಳಮ್ಮ ರವರ ಪಾತ್ರವೂ ಇತ್ತು ಎಂದು ತಿಳಿಸಿದ್ದಾರೆ.

ಸ್ವಾತಂತ್ರ ಹೋರಾಟದಲ್ಲಿ ಗಂಡ ಕೃಷ್ಣಪ್ಪರವರ ಜೊತೆ ಬಾಗಿಯಾಗಿದ್ದ ಪ್ರಮೀಳಮ್ಮ ಹಲವು ಭಾರಿ ಜೈಲಿಗೂ ಹೋಗಿದ್ದರು ಇತ್ತೀಚಿನ ವರೆಗೂ ಅರೋಗ್ಯವಾಗಿಯೇ ಇದ್ದ ಪ್ರಮೀಳಮ್ಮ ಕೆಲವು ದಿನಗಳಿಂದ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾಗಿದ್ದು ಈ ದಿನ 23-06-21ರಂದು ಬೆಳಿಗ್ಗೆ ಬೆಂಗಳೂರು ಅವರ ಸ್ವಗೃಹದಲ್ಲಿ ನಿಧಾನರಾಗಿದ್ದಾರೆ.

ಇಂದು ಸಂಜೆ 4ಗಂಟೆಗೆ ಕೆಜಿಎಪ್ ತಾಲೂಕು ಬಂಗಾರುತಿರುಪತಿ (ಗುಟ್ಟಹಳ್ಳಿ ) ಬಳಿಯ ಅವರ ಸ್ವಂತ ತೋಟದ ಭೂಮಿಯಲ್ಲಿ ( ಗಂಡ ದಿವಂಗತ ಎಂ. ವಿ. ಕೃಷ್ಣಪ್ಪ ಸಮಾಧಿ ಪಕ್ಕದಲ್ಲೇ ) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕೋವಿಡ್ 19 ಹಿನ್ನಲೆಯಲ್ಲಿ ಎಲ್ಲರಿಗೂ ಮಾಹಿತಿ ನೀಡಲು ಸಾಧ್ಯವಾಗದ ಕಾರಣ ವಿಷಯ ತಿಳಿದವರು ತುಂಬಾ ಆಪ್ತರು,ಸಂಬಧಿಕರು,ಹಿತೈಷಿಗಳು, ಮತ್ತು ಅಭಿಮಾನಿಗಳು ಭಾಗವಹಿಸಲು ಸಾಧ್ಯವಾಗದಿದ್ದರೆ ಶ್ರದ್ದಾoಜಲಿ,ಸಂತಾಪಗಳನ್ನು ಸೂಚಿಸಬೇಕೆಂದು ಕುಟುಂಬದವರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next