Advertisement
ಸರ್ಕ್ಯೂಟ್ ಹೌಸ್ ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವೇ ಅಧಿಕಾರಕ್ಕೆ ಬರುತ್ತೇವೆ. ನಾನಂದರೆ ಬಿಜೆಪಿ, ಜೆಡಿಎಸ್ ಅವರಿಗೆ ಭಯ. ಹೀಗಾಗಿ ಆ ಪಕ್ಷದ ನಾಯಕರು ನನ್ನ ವಿರುದ್ಧ ಏನಾದರೂ ಹೇಳಿಕೆ ನೀಡುತ್ತಿರುತ್ತಾರೆ ಎಂದರು.
ಬಿಜೆಪಿವರಿಗೆ ನನ್ನನ್ನು ಕಂಡರೇ ಭಯ. ನಾನು ಎಲ್ಲಿ ನಿಂತರೂ ಗೆಲ್ಲುತ್ತೇನೆ. ಬಾದಾಮಿಯಲ್ಲಿ ನಿಂತರೂ ಗೆಲ್ಲುತ್ತೇನೆ, ಕೋಲಾರದಲ್ಲಿ ನಿಂತರೂ ಗೆಲುತ್ತೇನೆ. ಬಾದಾಮಿ ದೂರ ಆಗುತ್ತಿತ್ತು. ಕೋಲಾರ ಹತ್ತಿರ ಅಂತ ಅಲ್ಲಿರುವ ಕಾರ್ಯಕರ್ತರು ಕರೆದರು. ಅಲ್ಲಿ ನಿಲ್ಲುವುದಕ್ಕೆ ತೀರ್ಮಾನಿಸಿದ್ದೇನೆ. ಹೈಕಮಾಂಡ್ ತೀರ್ಮಾನ ಕೊಟ್ಟರೆ ಕೋಲಾರದಲ್ಲೇ ಸ್ಪರ್ಧೆ ಎಂದರು. ಪಾಪ ಬಾದಾಮಿ ಅವರು ನಿಮಗೆ ದೂರ ಆದರೆ ಹೆಲಿಕ್ಯಾಪ್ಟರ್ ಕೊಡಿಸುತ್ತೇನೆ ಅಂದರು. ಸದ್ಯಕ್ಕೆ ಕೋಲಾರವೇ ಫೈನಲ್.ನನ್ನ ಮಗ ವರುಣಾದಲ್ಲಿ ಗೆದ್ದಿದ್ದಾನೆ.ಆತ ನನಗೆ ವರುಣಾದಲ್ಲಿ ನಿಲ್ಲಲೂ ಹೇಳಿದ್ದಾನೆ.ಆದರೆ ನಾನು ಕೋಲಾರದಲ್ಲಿ ಸ್ಪರ್ಧೆಗೆ ತೀರ್ಮಾನಿಸಿದ್ದೇನೆ ಎಂದರು.
Related Articles
ನಮ್ಮ ಪಾರ್ಟಿಯಲ್ಲಿ ಟಿಕೆಟ್ ಕೇಳಲು ಅರ್ಹರು ಆಗಿರಬೇಕು. ಪಕ್ಷಕ್ಕೆ ನಿಷ್ಠರಾಗಿರಬೇಕು. ಯಾರು ಟಿಕೆಟ್ ಕೇಳಿದರೂ ತಪ್ಪೇನು ಇಲ್ಲ. ಸಿಂಧನೂರಿನಲ್ಲಿ ಮೂರು ಜನರು ಟಿಕೆಟ್ ಕೇಳುತ್ತಿದ್ದಾರೆ. ಕೊನೆಯದಾಗಿ ನಾವು ಸರ್ವೇ ಮಾಡಿಸಿದ್ದೇವೆ. ಯಾರು ಗೆಲ್ಲುತ್ತಾರೋ ಅವರಿಗೆ ಅಂತಿಮವಾಗಿ ಟಿಕೆಟ್ ಕೊಡುತ್ತೇವೆ. ರಾಯಚೂರು ಗ್ರಾಮೀಣದಲ್ಲಿ ಹಾಲಿ ಶಾಸಕರು ಇದ್ದಾರೆ. ಯಾರು ಗೆಲ್ಲುತ್ತಾರೋ ಅವರಿಗೆ ಕೊಡುತ್ತೇವೆ ಎಂದರು.
Advertisement
ಕುಮಾರಸ್ವಾಮಿಗೆ ನಾಚಿಕೆಯಾಗಬೇಕುಕಾಂಗ್ರೆಸ್ ಬಗ್ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಗೆ ಮುಸ್ಲಿಮರು ಮತ ಹಾಕಬೇಡಿ ಅನ್ನುವ ಅವರ ಹೇಳಿಕೆಯಲ್ಲಿ ಅರ್ಥವಿಲ್ಲ.ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯಾರು? ಮಿಸ್ಟರ್ ಕುಮಾರಸ್ವಾಮಿಯೇ ಕಾರಣ. ಯಡಿಯೂರಪ್ಪ ಜೊತೆಗೆ ಸೇರಿ ಸರ್ಕಾರ ಮಾಡಿದ್ದು ಯಾರು? ಕಾಂಗ್ರೆಸ್ ಬಿಜೆಪಿ ಬಿ ಟೀಮ್ ಎಂದು ಪ್ರಚಾರ ಮಾಡುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದರು. ರಾಯಚೂರಿನಲ್ಲಿ ಬಿಜೆಪಿ ಒಂದು ಸ್ಥಾನವೂ ಗೆಲ್ಲಲ್ಲ. ಅದಕ್ಕೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ಓಡಾಟ ಶುರು ಮಾಡಿದ್ದಾರೆ. ರಾಜ್ಯದಲ್ಲಿ 50-60ಸ್ಥಾನ ಗೆದ್ದರೆ ಹೆಚ್ಚು ಎಂದರು. ಅರಸಿಕೇರೆ ಶಾಸಕ ಶಿವಲಿಂಗೇಗೌಡರು 100ಕ್ಕೆ 100 ಪರ್ಸೆಂಟ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ.ನಿಮಗೆ ಅನುಮಾನ ಬೇಡ. ಸದನವಾದ ಬಳಿಕ ಯಾವಾಗದರೂ ಬರಬಹುದು ಎಂದರು. ದುಡ್ಡಿದೆ ಅಂತಾ ಹೊಸ ಪಕ್ಷ
ಕರ್ನಾಟಕದಲ್ಲಿ ಬಹಳ ಜನರು ಹೊಸ ಪಕ್ಷ ಕಟ್ಟಿದ್ದಾರೆ. ಅಭ್ಯರ್ಥಿಗಳನ್ನು ಹಾಕಿದ್ದಾರೆ, ಹೊಸ ಪಕ್ಷ ಕಟ್ಟಿದವರು ಯಾರು ಉಳಿದಿಲ್ಲ.ಪಾಪ ಜನಾರ್ದನ ರೆಡ್ಡಿ ಅವರು ದುಡ್ಡು ಇದೆ ಅಂತ ಹೊಸ ಪಕ್ಷ ಕಟ್ಟಿದ್ದಾರೆ. ಅವರ ಪಕ್ಷಕ್ಕೆ ನನ್ನದೇನು ತಕರಾರು ಇಲ್ಲ. ಶ್ರೀರಾಮುಲುನೂ ಒಂದು ಪಕ್ಷ ಕಟ್ಟಿದ್ದ. ಬಂಗಾರಪ್ಪನೂ ಒಂದು ಪಕ್ಷ ಕಟ್ಟಿದ್ದ. ಯಡಿಯೂರಪ್ಪನೂ ಒಂದು ಪಕ್ಷ ಕಟ್ಟಿದ್ದರು. ದೇವರಾಜ್ ಅರಸು ಒಂದು ಪಕ್ಷ ಕಟ್ಟಿದ್ದರು.ವಿಜಯ್ ಮಲ್ಯ ಪಕ್ಷ ಕಟ್ಟಿದ. ಪಾಪ ಹಾಗೇ ಜನಾರ್ದನ ರೆಡ್ಡಿ ಪಕ್ಷವೂ ಆಗಬಹುದು ಎಂದು ಕುಟುಕಿದರು.