Advertisement

ಕೋಲಾರ: ನೀರಿಗಾಗಿ ಹಾಹಾಕಾರ 

03:45 AM Jun 05, 2017 | Team Udayavani |

ಮಾರ್ಚ್‌ 3, 2016ರಂದು ಬೆಂಗಳೂರಿನ ಬಳ್ಳಾರಿರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ 10,000 ರೈತ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್‌ ಮಾಡಿದರು.

Advertisement

ಆ ಪ್ರತಿಭಟನೆಯ ಮುಂದುವರಿದ ಭಾಗವಾಗಿ 16 ಜೂನ್‌ 2016ರಿಂದ ನಾಗರಿಕರ ನಿರಂತರ ಧರಣಿ ಆರಂಭ – ಕೋಲಾರ ನಗರದ ಕಾಲೇಜ… ವೃತ್ತದಲ್ಲಿ – ತಮ್ಮ ಜಿÇÉೆಯ ನೀರಿನ ಕೊರತೆಗೆ ಸರಕಾರ ಶಾಶ್ವತ ಪರಿಹಾರ ಒದಗಿಸಬೇಕೆಂಬ ಬೇಡಿಕೆ ಮುಂದಿಟ್ಟರು.

ಏಕೆಂದರೆ, 2016ರಲ್ಲಿಯೂ ಕೋಲಾರದಲ್ಲಿ ಅತ್ಯಲ್ಪ ಮಳೆ. ಶೇಕಡಾ 50ರಷ್ಟು ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದರು. 

ಇದು ಕಳೆದ ಹತ್ತು ವರುಷಗಳಿಂದ ಕೋಲಾರದ ಜನರ ನೀರ ಪಾಡು. ನೀರಿಗಾಗಿ ಅಲ್ಲಿನ ಜನರು ಅಂತರ್ಜಲವನ್ನು ಮಿತಿಮೀರಿ ಸೆಳೆಯುವಂತಾಗಿದೆ. ಇದರಿಂದಾಗಿ, ಅಲ್ಲಿ ಅಂತರ್ಜಲದ ಮಟ್ಟ ವಿಪರೀತ ಕುಸಿದಿದೆ. 2006ರಲ್ಲಿ 49 ಅಡಿ ಆಳಕ್ಕಿದ್ದ ಅಂತರ್ಜಲದ ಮಟ್ಟ, 2017ರಲ್ಲಿ 202 ಅಡಿಗಳಿಗೆ ಕುಸಿದಿದೆ. ಇದು ಇಡೀ ಕರ್ನಾಟಕ ರಾಜ್ಯದÇÉೇ ಅತ್ಯಂತ ಕೆಳಮಟ್ಟ. ಕೋಲಾರ ಜಿÇÉೆಯ ಎಲ್ಲ ಐದು ತಾಲೂಕುಗಳಲ್ಲಿ ಅಂತರ್ಜಲದ ಬಳಕೆ ಮಿತಿಮೀರಿದೆ. ಮನೆಬಳಕೆಗಾಗಿ ಮತ್ತು ಕೃಷಿಗಾಗಿ ಮೇಲಕ್ಕೆ ಸೆಳೆಯಲು ಇನ್ನು ಅಂತರ್ಜಲವೇ ಇಲ್ಲ ಎಂಬಂತಾಗಿದೆ.

ಕರ್ನಾಟಕದ ಪೂರ್ವ ಗಡಿ ಜಿÇÉೆ ಕೋಲಾರದಲ್ಲಿ ನಿರಂತರ ನೀರಿನಾಸರೆಯಿಲ್ಲ. ಪಾಲಾರ್‌, ಪೊನ್ನೈಯಾರ್‌ ಮತ್ತು ಪೆನ್ನಾರ್‌ – ಈ ಮೂರು ನದಿಗಳು ಜಿÇÉೆಯಲ್ಲಿ ಹರಿಯುತ್ತವೆ.

Advertisement

ಆದರೆ ಮಳೆಗಾಲದ ಕೆಲವೇ ತಿಂಗಳುಗಳಲ್ಲಿ. ಕೋಲಾರ ಜಿÇÉೆಯಲ್ಲಿ ವಾರ್ಷಿಕ ಸರಾಸರಿ ಮಳೆ 748 ಮಿಮೀ (ಗಮನಿಸಿ: ಕರ್ನಾಟಕದ ಕರಾವಳಿಯಲ್ಲಿ ಇದು 3,797 ಮಿಮೀ.) ಆದರೆ ಮಳೆ ಎಂಬುದು ಕೋಲಾರದಲ್ಲಿ ತೀರಾ ಅನಿಶ್ಚಿತ. ಅಲ್ಲಿ 2005ರಲ್ಲಿ, 1,195 ಮಿಮೀ ಮಳೆ ಆಗಿದ್ದರೆ, 2016ರಲ್ಲಿ ಕೇವಲ 521 ಮಿಮೀ ಮಳೆಯಾಗಿದೆ. ಮಳೆಯೂ ಕಡಿಮೆ, ಜಲ ಮರುಪೂರಣದ ವ್ಯವಸ್ಥೆಗಳೂ ಕಡಿಮೆ ಎಂಬ ಪರಿಸ್ಥಿತಿಯಲ್ಲಿ 2,000ದಿಂದೀಚೆಗೆ ರೈತರು ಕೊಳವೆ ಬಾವಿಗಳನ್ನು ಕೊರೆಯ ತೊಡಗಿದರು. 

ಇದು ಯಾವ ಹಂತಕ್ಕೆ ತಲುಪಿದೆಯೆಂದರೆ, 2011ರಿಂದ 2015ರವರೆಗಿನ ಕೇವಲ ನಾಲ್ಕು ವರ್ಷಗಳಲ್ಲಿ ಕೋಲಾರ ಜಿÇÉೆಯ ಕೊಳವೆಬಾವಿಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಶೇಕಡಾ 64. ಕೇಂದ್ರ ಅಂತರ್ಜಲ ಮಂಡಲಿಯ ಅಂಕಿ ಸಂಖ್ಯೆಗಳ ಪ್ರಕಾರ ಕೋಲಾರದ ಕೊಳವೆಬಾವಿಗಳ ಸಂಖ್ಯೆ 84,287. ಇದು ಕರ್ನಾಟಕದ ಜಿÇÉೆಗಳಲ್ಲಿ ಅತ್ಯಧಿಕ.

ಆದರೆ, ನೀರಿಗಾಗಿ ಪ್ರತಿಭಟನೆಯ ಮುಂದಾಳುಗಳಲ್ಲಿ ಒಬ್ಬರಾದ ಹೊಳಲಿ ಪ್ರಕಾಶ ಹೇಳುವಂತೆ, ಈ ಮಾಹಿತಿ ಸರಿಯಲ್ಲ. ಕೋಲಾರದಲ್ಲಿ 1,25,000 ಕೊಳವೆಬಾವಿಗಳಿವೆ ಎಂಬುದು ಅವರ ಅಂದಾಜು. ನೀರಿನ ಕೊರತೆಯಿಂದಾಗಿ, ಪ್ರಕಾಶ್‌ ಸಹಿತ ಹಲವು ರೈತರು ಹೆಚ್ಚು ನೀರು ಬೇಕಾಗುವ ಭತ್ತ ಮತ್ತು ಕಬ್ಬು ಬೆಳೆಸುವುದನ್ನು ತೊರೆದು, ಕಡಿಮೆ ನೀರು ಸಾಕಾಗುವ ಹಿಪ್ಪುನೇರಳೆ, ಸಿರಿಧಾನ್ಯಗಳು ಹಾಗೂ ತರಕಾರಿಗಳನ್ನು ಬೆಳೆಯತೊಡಗಿ¨ªಾರೆ. 

ಕೋಲಾರ ಜಿÇÉೆಯ ಬಹುಪಾಲು ಜನರದು ಕೃಷಿ ಅವಲಂಬಿಸಿದ ಬದುಕು. ಅವರ ಸಂಕಟಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಅಂತರ್ಜಲದ ಮಟ್ಟ ವರುಷದಿಂದ ವರುಷಕ್ಕೆ ಕುಸಿಯುತ್ತಿದೆ. ಇದರಿಂದಾಗಿ ಕೊಳವೆಬಾವಿಗಳೂ ಬತ್ತಿ ಹೋಗುತ್ತಿವೆ. ಜಿÇÉಾಡಳಿತ 2017ರಲ್ಲಿ ಕೊರೆಸಿದ 1,700 ಕೊಳವೆಬಾವಿಗಳಲ್ಲಿ ಸುಮಾರು 500ರಲ್ಲಿ ನೀರೇ ಸಿಗಲಿಲ್ಲ ಎನ್ನುತ್ತಾರೆ ಐಬಿಎಂ ಉದ್ಯೋಗಿ ಜಲಕಂಠ. ಕೋಲಾರದ ಹಿರಿಯ ಭೂವಿಜ್ಞಾನಿ ಎಂ. ತಿಪ್ಪೇಸ್ವಾಮಿ ನೀಡುವ ಮಾಹಿತಿ ಹೀಗಿದೆ: ಜಿÇÉೆಯ ಶೇಕಡಾ 40ರಷ್ಟು (ಅಂದರೆ 84,287ರಲ್ಲಿ 33,715) ಕೊಳವೆಬಾವಿಗಳು ಬರಿದಾಗಿವೆ.

ಇದರಿಂದಾಗಿ ಜನರು ಇನ್ನಷ್ಟು ಆಳಕ್ಕೆ ಕೊಳವೆಬಾವಿ ಕೊರೆಸ ತೊಡಗಿದರು. ಇಸವಿ 2000ದಿಂದ 2002ರ ವರೆಗೆ 300 ಅಡಿ ಆಳಕ್ಕೆ ಕೊರೆಸುತ್ತಿದ್ದರೆ, ಈಗ 2017ರಲ್ಲಿ 1,800 ಅಡಿ ಆಳಕ್ಕೆ ಲಗ್ಗೆಯಿಡುತ್ತಿ¨ªಾರೆ! ಕೋಲಾರದ ಕೊಳವೆಬಾವಿಗಳ ಸರಾಸರಿ ಆಳ 1,290 ಅಡಿ. ಈ ಆಳಕ್ಕೆ ಒಂದು ಕೊಳವೆಬಾವಿ ಕೊರೆಸುವ ವೆಚ್ಚ ರೂ.6,88,000. ಈ ಲೆಕ್ಕಾಚಾರದಂತೆ ಬತ್ತಿಹೋಗಿರುವ 33,715 ಕೊಳವೆಬಾವಿಗಳಿಂದಾಗಿ ರೂ. 2,319 ಕೋಟಿ ಮಣ್ಣು ಪಾಲಾಗಿದೆ. 
 ಕೋಲಾರ ಜಿÇÉೆಯ ನೀರಿನ ಸಂಕಟಕ್ಕೆ ಕೊಳ್ಳಿಯಿಟ್ಟಿದ್ದು ನೀಲಗಿರಿ ತೋಪುಗಳು. 

ಪ್ರತಿಯೊಂದು ನೀಲಗಿರಿ ಮರ ದಿನಕ್ಕೆ 15 – 20 ಲೀಟರ್‌ ನೀರನ್ನು ನೆಲದಾಳದಿಂದ ಹೀರಿ ಎಲೆಗಳ ಮೂಲಕ ಆವಿಯಾಗಿಸುತ್ತದೆ. 1960ರ ದಶಕದಲ್ಲಿ ಅರಣ್ಯೀಕರಣದ ಹೆಸರಿನಲ್ಲಿ ಆಸ್ಟ್ರೇಲಿಯಾದ ಈ ಮರವನ್ನು ಕೋಲಾರಕ್ಕೆ ಪರಿಚಯಿಸಿದ್ದು ಅರಣ್ಯ ಇಲಾಖೆ. ಯಾವುದೇ ಪೋಷಣೆ ಅಗತ್ಯವಿಲ್ಲದ ನೀಲಗಿರಿ ಗಿಡಗಳು ಬೆಳೆದು ಏಳು ವರ್ಷಗಳಲ್ಲಿ ಕಟಾವಿಗೆ ತಯಾರು. ಇದನ್ನು ಬೆಳೆಸುವ ವೆಚ್ಚ ಹೆಕ್ಟೇರಿಗೆ ರೂ.8,800. ಇದರಿಂದ ಆದಾಯ ರೂ.40,000. ನೀಲಗಿರಿ ತೋಟಗಳು ಅಂತರ್ಜಲ ಕುಸಿತಕ್ಕೆ ಕಾರಣ ಎಂಬುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಅನಂತರ ಎಚ್ಚೆತ್ತುಕೊಂಡ ರಾಜ್ಯ ಸರಕಾರ, ಅರಣ್ಯ ಇಲಾಖೆಗೆ ಹೀಗೆಂದು ಆದೇಶ ನೀಡಿದೆ: ಬರಡು ಜಮೀನಿನಲ್ಲಿ ಮಾತ್ರ ನೀಲಗಿರಿ ಬೆಳೆಸಬೇಕು. ಆದರೆ, ಖಾಸಗಿ ಜಮೀನಿನಲ್ಲಿ ನೀಲಗಿರಿ ಬೆಳೆಸುವುದನ್ನು ನಿಷೇಧಿಸಲಾಗಿಲ್ಲ! 

ಜಿÇÉಾಡಳಿತ ಏನು ಮಾಡುತ್ತಿದೆ? 
2010ರಿಂದ 2016ರ ಅವಧಿಯಲ್ಲಿ ತೋಟಗಾರಿಕೆ ಇಲಾಖೆ 200 ರೈತರು ಕೃಷಿ ಹೊಂಡ ನಿರ್ಮಿಸಲು ನೆರವು ನೀಡಿದೆ; 20 ಸಮುದಾಯ ಕೃಷಿ ಹೊಂಡಗಳ ನಿರ್ಮಾಣಕ್ಕೂ ಸಹಾಯ ಮಾಡಿದೆ (ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಅನುಸಾರ). ಮೇವಿಲ್ಲದೆ ಸೊರಗಿರುವ ಸಾವಿರಾರು ಜಾನುವಾರುಗಳಿಗೆ ಈ ಬೇಸಿಗೆಯಲ್ಲಿ ವಾರಕ್ಕೆ ಎರಡು ಸಲ ಮೇವು ಒದಗಿಸಲು ಪಶುಸಂಗೋಪನಾ ಇಲಾಖೆ ಮಾಡಿರುವ ವ್ಯವಸ್ಥೆ ಏನೇನೂ ಸಾಲದಾಗಿದೆ. ಎತ್ತಿನ ಹೊಳೆ ಯೋಜನೆ ಮೂಲಕ ಪಶ್ಚಿಮ ಘಟ್ಟದಿಂದ ಕೋಲಾರಕ್ಕೆ ನೀರು ತರುವ ಪ್ರಯತ್ನ ನೆನೆಗುದಿಗೆ ಬಿದ್ದಿದೆ. 

 ಕೋಲಾರ ಜಿÇÉೆಯಲ್ಲಿ ಶತಮಾನಗಳಿಂದ ಜನರು ಬದುಕು ಸಾಗಿಸುತ್ತಿ¨ªಾರೆ. ಅಲ್ಲಿ ಪೂರ್ವಿಕರು ಮಳೆನೀರನ್ನು ಸರಣಿ-ಕೆರೆಗಳಲ್ಲಿ ಹಿಡಿದಿಟ್ಟು ನೀರಿನ ಬವಣೆಯಿಂದ ಪಾರಾಗುತ್ತಿದ್ದರು. ನಾವು ಇಂದು ಅಲ್ಲಿನ ಚರಿತ್ರೆಯಿಂದ ಪಾಠ ಕಲಿಯಬೇಕಾಗಿದೆ. ಅಲ್ಲಿನ ಜಮೀನಿಗೆ ಬೀಳುವ ಮಳೆಯನ್ನೆಲ್ಲ ಇಂಗಿಸಬೇಕಾಗಿದೆ. ಇದು, ಈ ವರುಷ ಉತ್ತಮ ಮಳೆಯಾಗುವ ಮುನ್ಸೂಚನೆಗಳ ಹಿನ್ನೆಲೆಯಲ್ಲಿ ತುರ್ತಾಗಿ ಆಗಬೇಕಾದ ಕೆಲಸ. ಜೊತೆಗೆ, ಹೆಚ್ಚು ನೀರು ಬೇಕಾಗುವ ಬೆಳೆಗಳ ಬದಲಾಗಿ ಕಡಿಮೆ ನೀರು ಸಾಕಾಗುವ ಬೆಳೆಗಳನ್ನು ಬೆಳೆಸಬೇಕಾಗಿದೆ. ಸಿರಿಧಾನ್ಯಗಳು ಕಿಲೋಕ್ಕೆ ರೂ.80ರಿಂದ ರೂ.120 ದರದಲ್ಲಿ ನಗರಗಳಲ್ಲಿ ಈಗ ಮಾರಾಟ ಆಗುತ್ತಿರುವ ಕಾರಣ, ಅವುಗಳ ಬೇಸಾಯ ಸೂಕ್ತ ಆಯ್ಕೆ. ಹಾಗೂ, ನೀರು ನುಂಗುವ ನೀಲಗಿರಿಯಂತಹ ಮರ ಬೆಳೆಸುವುದನ್ನು ತಾವಾಗಿಯೇ ತೊರೆಯಬೇಕಾಗಿದೆ. ಈ ಕ್ರಮಗಳನ್ನು ಅಳವಡಿಸಿದರೆ, ಮುಂದಿನ ಬೇಸಗೆಯಲ್ಲಿ ಕೋಲಾರದಲ್ಲಿ ನೀರಿಗಾಗಿ  ಹಾಹಾಕಾರ ಇಲ್ಲವಾದೀತು, ಅಲ್ಲವೇ? 

– ಅಡ್ಕೂರು ಕೃಷ್ಣ ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next