Advertisement

ಪ್ರವಾಹ ಸಂತ್ರಸ್ತರಿಗೆ ಕೋಲಾರದಿಂದ ಚಪಾತಿ!

03:15 PM Aug 12, 2019 | Naveen |

ಕೋಲಾರ: ರಾಜ್ಯದ ನೆರೆ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ನಗರದ ಜನತೆ ಸ್ವಯಂ ಪ್ರೇರಿತರಾಗಿ ಮುಂದಾಗಿದ್ದಾರೆ. ದೊಡ್ಡಪೇಟೆಯ ಶಾರದಾಂಬ ಛತ್ರದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಆರಂಭವಾಗಿರುವ ಈ ಕಾರ್ಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರಾಗಿ ಆಗಮಿಸಿ ದುಡಿಯುತ್ತಿದ್ದಾರೆ.

Advertisement

ನೆರೆ ಸಂತ್ರಸ್ತರಿಗಾಗಿ 10 ಸಾವಿರ ಚಪಾತಿ ಮತ್ತು ರೊಟ್ಟಿಗಳನ್ನು ತಯಾರಿಸುವ ಗುರಿ ಹೊಂದಲಾಗಿದ್ದು, ಭಾನುವಾರ ಮತ್ತು ಸೋಮವಾರ ಸಂಜೆ 4 ಗಂಟೆಯವರೆಗೂ ಈ ಕಾರ್ಯ ಮುಂದುವರಿಯಲಿದೆ. ಮಹಿಳೆಯರು ಹಿಟ್ಟನ್ನು ಕಲಿಸಿ ಲಟ್ಟಿಸಿ ಚಪಾತಿಗಳನ್ನು ಬೇಯಿಸುತ್ತಿದ್ದರೆ, ಮಕ್ಕಳು ಮತ್ತು ಯುವಕರು ಅವುಗಳನ್ನು ಆರಿಸಿ ಕೆಡದಂತೆ ಬೆಳ್ಳಿ ಲೇಪಿತ ಪೇಪರ್‌ ಮೂಲಕ ಪೊಟ್ಟಣ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇಂದು ಪೊಟ್ಟಣ ಕಟ್ಟುವ ಕಾರ್ಯ: ನಾಲ್ಕು ಚಪಾತಿ ಇರುವ ಪೊಟ್ಟಣ ಕಟ್ಟುತ್ತಿದ್ದು, ಇದರ ಜೊತೆಗೆ ಉಪ್ಪಿನಕಾಯಿ, ಜಾಮ್‌ ಮತ್ತು ನೀರಿನ ಬ್ಯಾಗ್‌ಗಳನ್ನು ಕಳುಹಿಸಲು ಸಂಗ್ರಹಿಸ ಲಾಗುತ್ತಿದೆ. ಭಾನುವಾರ ಇಡೀ ದಿನ ಚಪಾತಿ ತಯಾರಿಸುವ ಕಾರ್ಯ ನಡೆದಿದ್ದು, ಸೋಮವಾರ ಸಂಜೆ 4 ಗಂಟೆಯವರೆಗೂ ಸಾಧ್ಯವಾದಷ್ಟು ಆಹಾರ ಪೊಟ್ಟಣಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ.

ಮೆಚ್ಚುಗೆ: ನೆರೆ ಪೀಡಿತ ಪ್ರದೇಶಗಳಿಗೆ ಬರ ಪೀಡಿತ ಕೋಲಾರ ಜಿಲ್ಲೆಯಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಕಳುಹಿಸುವ ಕಾರ್ಯ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕಾರ್ಯಕ್ರಮದ ಉಸ್ತುವಾರಿಯನ್ನು ನಾಗರಾಜ್‌, ಎಸ್‌.ವಿ. ವಿಜಯಕುಮಾರ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘ ಮತ್ತು ವಾಸವಿ ಮಹಿಳಾ ಮಂಡಳಿಯ ಸದಸ್ಯೆಯರಾದಅರುಣಾ, ಕವಿತಾ, ದೀಪಾ, ಉಮಾ ಇತರರು ನೇತೃತ್ವ ವಹಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next