ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ 8 ಕೋವಿಡ್ 19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 74 ಕ್ಕೇರಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 42 ಆಗಿದ್ದು, ಈವರೆಗೂ 32 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ನಿನ್ನೆಯವರೆಗೂ ಜಿಲ್ಲೆಯಲ್ಲಿ 66 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರ 23 ವರ್ಷದ ಹೆಂಗಸು ಪಿ.9538, 44 ವರ್ಷದ ಮಹಿಳೆ ಪಿ.9539 ಸೋಂಕು ಪೀಡಿತರಾಗಿದ್ದು, ಇವರ ಸಂಪರ್ಕಕ್ಕೆ ಕಾರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಪಿ.9541 ಸಂಪರ್ಕದಲ್ಲಿದ್ದ 33 ವರ್ಷದ ಮಹಿಳೆ ಪಿ.9540 ಆಗಿ ಸೋಂಕಿತರಾಗಿದ್ದಾರೆ. ಪಿ.9541 25 ವರ್ಷದ ಮಹಿಳೆ ಪಿ.8810 ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಪಿ.9542 23 ವರ್ಷದ ಮಹಿಳೆ ಪಿ.9541 ಸಂಪರ್ಕದಿಂದ ಸೋಂಕಿತರಾಗಿದ್ದಾರೆ.
ಪಿ.9542 ಸಂಖ್ಯೆಯ 35 ವರ್ಷದ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ, ಪಿ.9544 ಸಂಖ್ಯೆ 40 ವರ್ಷದ ವ್ಯಕ್ತಿಯ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಾ ಸೋಂಕಿತರಾಗಿದ್ದಾರೆ. ಪಿ.9545 ಸಂಖ್ಯೆಯ 29 ವರ್ಷದ ಪುರುಷನ ಸಂಪರ್ಕವನ್ನು ತನಿಖೆ ನಡೆಸಲಾಗುತ್ತಿದೆ. ಈ ಎಲ್ಲಾ ಎಂಟು ಮಂದಿ ಸೋಂಕಿತರನ್ನು ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಕೋಲಾರ ಜಿಲ್ಲೆಯಿಂದ ಯಾವ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿಲ್ಲ ಹಾಗೂ ಯಾವುದೇ ಸೋಂಕಿತರು ಸಾವನ್ನಪ್ಪಿಲ.
ಕೋವಿಡ್ 19 ಸೋಂಕು; 2 ಗ್ರಾಮ ಸೀಲ್‌ಡೌನ್
ಮುಳಬಾಗಿಲು: ತಾಲೂಕಿನ ಆವಣಿ ಹೋಬಳಿ ಬಂಡಹಳ್ಳಿ ಮತ್ತು ಭಟ್ಲಭಾವನಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ತಲಾ ಒಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಕೋಲಾ ರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಡಹಳ್ಳಿ ಗ್ರಾಮದ 35 ವರ್ಷದ ಗಾರೆ ಮೇಸ್ತ್ರಿ ಇತ್ತೀಚಿಗೆ ಆಂಧ್ರದ ವಿ.ಕೋಟೆಗೆಹೋಗಿ ಬಂದ ಹಿನ್ನೆಲೆಯಲ್ಲಿ ಆತನಿಗೆ ಸೋಂಕು ದೃಢಪಟ್ಟಿದೆ.
ಅದೇ ರೀತಿ ಭಟ್ಲಭಾ ವನಹಳ್ಳಿ ಗ್ರಾಮದ 35 ವರ್ಷದ ಮಹಿಳೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಕೋವಿಡ್ 19 ಪಾಸಿಟೀವ್ ಬಂದಿದೆ. ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಕೂಡಲೇ ಎರಡು ಗ್ರಾಮಗಳಿಗೆ ತೆರಳಿ ಸೀಲ್‌ಡೌನ್ ಮಾಡಿ, ಸೋಂಕು ನಿವಾರಕ ಔಷಧಿ ಸಿಂಪಡಿಸಿದರು.