Advertisement

ಕೋಲಕುಂದಾ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಪಾಟೀಲ

10:14 AM Jan 05, 2018 | Team Udayavani |

ಸೇಡಂ: ತಾಲೂಕಿನ ಕೋಲಕುಂದಾ ಜಿಪಂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧವಾಗಿರುವುದಾಗಿ ವೈದ್ಯಕೀಯ ಶಿಕ್ಷಣ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. ತಾಲೂಕಿನ ಕೋಲಕುಂದಾ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಲೋಕೋಪಯೋಗಿ ಇಲಾಖೆ, ಎಚ್‌ಕೆಆರ್‌ಡಿಬಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

Advertisement

ಸೇಡಂ ತಾಲುಕಿನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇ ಮುಂದಿನ ದಿಕ್ಸೂಚಿಯಾಗಿದೆ. ಹೈದ್ರಾಬಾದ ಕರ್ನಾಟಕ
ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೇಲೆ ಹೆಚ್ಚಿನ ಅಭಿವೃದ್ಧಿಗಳು ನಡೆಯುತ್ತಿವೆ. ಗ್ರಾಮದ ಕಿರಿಯ ಮತ್ತು
ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಕೆ 42 ಲಕ್ಷ ರೂ. ಒದಗಿಸುವುದಾಗಿ ಭರವಸೆ ನೀಡಿದರು.

ಸರ್ವ ಜನಾಂಗಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊಸ ಯೋಜನೆ ರೂಪಿಸುತ್ತಿದ್ದು, ರಾಜ್ಯ
ಸರ್ಕಾರದ ಅಭಿವೃದ್ಧಿ ಕಾರ್ಯದಿಂದಲೇ ಮುಂದೆ ಜನ ಬೆಂಬಲಿಸಲಿದ್ದಾರೆ. ಜನಪ್ರತಿನಿಧಿ ಹೇಗಿರಬೇಕು ಎಂಬ ಭಾವನೆ ಜನರೇ ತೀರ್ಮಾನಿಸಬೇಕು ಎಂದು ಹೇಳಿದರು.

ವೆಂಕಟರೆಡ್ಡಿ ಪಾಟೀಲ, ಸಿದ್ಧಣ್ಣಗೌಡ ಪಾಟೀಲ, ಜೈಪಾಲರೆಡ್ಡಿ ಮೋತಕಪಲ್ಲಿ, ಚಂದ್ರಮ್ಮ ಸಾಬಯ್ಯ, ತಾಪಂ ಸದಸ್ಯ ಮಲ್ಲಿಕಾರ್ಜುನರೆಡ್ಡಿ, ಶ್ರೀನಿವಾಸರೆಡ್ಡಿ ಶಕ್ಲಾಸಪಲ್ಲಿ, ಸತೀಶರೆಡ್ಡಿ ರಂಜೋಳ, ಶಂಕರ ಭೂಪಾಲ, ಗುರುನಾಥರೆಡ್ಡಿ,
ವೆಂಕಟರಾಮರೆಡ್ಡಿ ಕಡತಾಲ, ಶ್ರೀನಿವಾಸರೆಡ್ಡಿ ಪಾಟೀಲ, ಉಮಾರೆಡ್ಡಿ ಹಂದರಕಿ, ಲಕ್ಷ್ಮೀಕಾಂತ ಕುಲಕರ್ಣಿ, ರಾಜಶೇಖರ ಪಾಟೀಲ, ಸೈಯ್ಯದ್‌ ನಾಜಿಮೋದ್ದಿನ್‌, ಮಹಾಂತಯ್ಯ ಸ್ವಾಮಿ, ವಿಜಯ ದಶರಥ ಸಂಗನ, ಗುರುರಾಜ ಜೋಶಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next