Advertisement

‘ರಾಜ್ಯದಲೇ ಮಾದರಿ ಕಾರ್ಯ’

06:05 AM Mar 09, 2019 | Team Udayavani |

ವೇಣೂರು : ಸರಕಾರಿ ಶಾಲೆ ಉಳಿಸಿ-ಬೆಳೆಸಿ ಸಮಿತಿ ಸರಕಾರಿ ಶಾಲೆಗಳ ಪುನರುಜ್ಜೀವನಕ್ಕೆ ಪಣ ತೊಟ್ಟಿದೆ. ಇದಕ್ಕೆ ಊರವರೂ ಸ್ಪಂದಿಸಬೇಕು. ಕೂಕ್ರಬೆಟ್ಟು ಪರಿಸರದ ಹೆತ್ತವರು ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದಾರೆ. ಮುಚ್ಚುವ ಹಂತದಲ್ಲಿದ್ದ ಇಲ್ಲಿನ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ ಪುನಶ್ಚೇತನ ನೀಡಿರುವುದು ರಾಜ್ಯಕ್ಕೇ ಮಾದರಿ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಸರಕಾರಿ ಶಾಲೆ ಉಳಿಸಿ-ಬೆಳೆಸಿ ಸಮಿತಿ ಸಹಭಾಗಿತ್ವದಲ್ಲಿ ಮರೋಡಿ ಗ್ರಾಮದ ಕೂಕ್ರಬೆಟ್ಟು ಸ.ಹಿ.ಪ್ರಾ. ಶಾಲೆಯಲ್ಲಿ ಶಾಲಾಭಿವೃದ್ಧಿ-ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘವು ಆರಂಭಿಸಿರುವ ಆಂಗ್ಲ ಪೂರ್ವ ಪ್ರಾಥಮಿಕ (ಎಲ್‌.ಕೆ.ಜಿ., ಯು.ಕೆ.ಜಿ.) ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರಸ್ತುತ ತಾ| ನಲ್ಲಿ ಶಾಲೆಗಳ ಹಳೆ ಕಟ್ಟಡಗಳ ಮೇಲೆ ಇನ್ನೊಂದು ಅಂತಸ್ತನ್ನು ಕಟ್ಟುವ ಅವಕಾಶ ಇಲ್ಲದಿರುವುದು ಸರಕಾರಿ ಶಾಲೆಗಳ ಅಭಿವೃದ್ಧಿಗೆ ತೊಡಕುಂಟಾಗಿದೆ ಎಂದರು.

ಸರಕಾರಿ ಶಾಲೆ ಉಳಿಸಿ-ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್‌ ಅಂಚನ್‌ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಿದ್ದೇವೆ. ತಾಲೂಕಿನಲ್ಲಿ ಐದು ಶಾಲೆಗಳು ಮಾದರಿ ಶಾಲೆಗಳಾಗಿ ತಲೆ ಎತ್ತಲಿವೆ. ಅದರಲ್ಲಿ ಕೂಕ್ರಬೆಟ್ಟು ಶಾಲೆಯೂ ಒಂದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಸ್ಥಾನೀಯ ಅಧ್ಯಕ್ಷ ಜಯಂತ ಕೋಟ್ಯಾನ್‌ ಮಾತನಾಡಿ, 16 ಮಕ್ಕಳಿದ್ದ ಈ ಶಾಲೆಯಲ್ಲಿ ಈಗ 80 ವಿದ್ಯಾರ್ಥಿಗಳ ನೋಂದಣಿಯಾಗಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ವನಿತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್‌, ಸಿಆರ್‌ಪಿ ಸಂತೋಷ್‌ ಕುಮಾರ್‌, ಕೊಕ್ರಾಡಿ ಸ.ಪ್ರಾ. ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಭಟ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್‌ ಹಾರೊದ್ದು ಉಪಸ್ಥಿತರಿದ್ದರು.

Advertisement

 ಸಮ್ಮಾನ
ಶಾಲೆಯ ಅಭಿವೃದ್ಧಿಗಾಗಿ ಎಂ.ಎಸ್‌.ಪೂಜಾರಿ ಮತ್ತು ಸತೀಶ್‌ ಪೂಜಾರಿ ತಲಾ ರೂ. 1 ಲಕ್ಷ ನೀಡಿದ್ದು, ಈ ಪ್ರಯುಕ್ತ ಅವರ ತಂದೆ ಗೋಪು ಪೂಜಾರಿ ಉಚ್ಚಾರು ಅವರನ್ನು ಸಮ್ಮಾನಿಸಲಾಯಿತು. ವಿವಿಧ ರೀತಿಯ ಸಹಕಾರ ನೀಡಿದವರನ್ನು ಗೌರವಿಸಲಾಯಿತು.ಶಾಲೆಯ ಮುಖ್ಯ ಶಿಕ್ಷಕಿ ಸುಫಲಾ ಸ್ವಾಗತಿಸಿ, ಪ್ರಸ್ತಾವಿಸಿದರು. ಸರಕಾರಿ ಶಾಲೆ ಉಳಿಸಿ-ಬೆಳೆಸಿ ಸಮಿತಿ ಸದಸ್ಯ ಯಶೋಧರ ಬಂಗೇರ ವಂದಿಸಿದರು. ಶಿಕ್ಷಕಿಯರಾದ ನುಸ್ರತ್‌ ಹಾಗೂ ಹರ್ಷಲಾ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ ಉಚ್ಚಾರು ಮತ್ತಿತರರು ಸಹಕರಿಸಿದರು.

ಹಿರಿಯರಿಂದ ಶಾಲೆ
ಊರಿನ ಹಿರಿಯರು ಮಕ್ಕಳಿಗೆ ಶಿಕ್ಷಣ ಬೇಕು ಎಂದು ಯಾರನ್ನೋ ಕಾಡಿ, ಬೇಡಿ ಗ್ರಾಮ ಗ್ರಾಮಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದ್ದಾರೆ. ಅಂತಹ ಶಾಲೆಯಲ್ಲಿ ಕಲಿತ ನಾವು ಮಾತ್ರ ನಮ್ಮ ಮಕ್ಕಳನ್ನು ಬೇರೆಲ್ಲೋ ಶಾಲೆಗೆ ಕಳುಹಿಸುತ್ತಿದ್ದೇವೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಚ್ಚಿ ಹೋಗುವ ಹಂತಕ್ಕೆ ಬಂದು ತಲುಪಿವೆ.
– ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next