Advertisement

ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿ ಹಕ್ಕಿ ಜ್ವರದ ಆತಂಕ ಬೇಡ

12:07 PM Jan 09, 2021 | Team Udayavani |

ಭಾರತೀನಗರ: ಇಲ್ಲಿಗೆ ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಹೆಜ್ಜಾರ್ಲೆ (ಪೆಲಿಕಾನ್‌) ಹಕ್ಕಿಗಳ ಸಾವು
ಮತ್ತೆ ಪುನಾರಂಭಗೊಂಡಿದ್ದು ಹಕ್ಕಿಜ್ವರದಿಂದಲೇ ಹೆಜ್ಜಾರ್ಲೆಗಳು ಸಾವನ್ನಪ್ಪಿರುವ ಕುರಿತು ಸ್ಪಷ್ಟವಾಗಿ ಇನ್ನೂ ತಿಳಿದು ಬಂದಿಲ್ಲ. ಈಗಾಗಲೇ ಹಕ್ಕಿಗಳ ಕಳೇಬರವನ್ನು ಪರೀಕ್ಷೆಗೆ ರವಾನಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.

Advertisement

ಆತಂಕ ಸೃಷ್ಟಿ: ಈಗಾಗಲೇ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮಕ್ಕೆ 120 ಪೆಲಿಕಾನ್‌ ಹಕ್ಕಿಗಳು ಬಂದಿದ್ದು, ಇವುಗಳು ಈಗಾಗಲೇ
ಮೊಟ್ಟೆ ಇಟ್ಟು ಮರಿಮಾಡಿವೆ. ಆದರೆ, ಮರಿಗಳ ಲೆಕ್ಕ ಇನ್ನೂ ಸಿಕ್ಕಿಲ್ಲ. ಈ ಹಕ್ಕಿಗಳನ್ನು ನೋಡಲು ದೇಶ-ವಿದೇಶಗಳಿಂದ
ಪಕ್ಷಿ ಪ್ರಿಯರು ಆಗಮಿಸುತ್ತಿದ್ದಾರೆ. ಆದರೆ, ಹಕ್ಕಿಗಳ ಸಾವು ಪಕ್ಷಿಪ್ರಿಯರಿಗೆ ಆತಂಕ ಸೃಷ್ಟಿಸಿದೆ.

ಹಕ್ಕಿ ಜ್ವರ ಇಲ್ಲ: ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್‌ ಪಕ್ಷಿಧಾಮಕ್ಕೆ ಭೇಟಿ ನೀಡಿ ಹಕ್ಕಿ ಜ್ವರದ ಲಕ್ಷಣಗಳ ಬಗ್ಗೆ ಸಾರ್ವಜನಿರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕೂಳಗೆರೆ ಆರೋಗ್ಯಾಧಿಕಾರಿ ಡಾ.ಸತೀಶ್‌, ಪಶುವೈದ್ಯಾಧಿಕಾರಿ ಡಾ.ಸತೀಶ್‌, ಆರೋಗ್ಯ ಇಲಾಖೆ ಸಿಬ್ಬಂದಿ ವಿಜಯ್‌ಕುಮಾರ್‌, ಶಾಂಭವಿ, ಆಶಾಕಾರ್ಯಕರ್ತೆಯರು, ಹೆಜ್ಜಾರ್ಲೆ ಬಳಗದ ಅಧ್ಯಕ್ಷ ನಿಂಗೇಗೌಡ, ಗ್ರಾಪಂ ಸದಸ್ಯ ಕೆಂಪರಾಜು, ದೇವರಾಜು, ರಾಜಣ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಡಿವೈಎಸ್ಪಿ ರವಿಶಂಕರ್‌ಗೆ ರಾಷ್ಟ್ರಪತಿ ಪದಕ

ಹಕ್ಕಿಗಳ ಚಲನ-ವಲನಗಳ ವೀಕ್ಷಣೆ: ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ.ಆರ್‌.ಮಂಜುನಾಥ್‌, ಸಹಾಯಕ ನಿರ್ದೇಶಕರಾದ ಹನುಮೇಗೌಡ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಕೃಷ್ಣಪ್ಪ, ಡಾ.ಗೋವಿಂದ್‌ ಅವರು ಹಕ್ಕಿಗಳ ಚಲನ-ವಲನಗಳನ್ನು ವೀಕ್ಷಣೆ ಮಾಡಿದರು. ಹಕ್ಕಿ ಜ್ವರದ ಸೂಕ್ಷ್ಮತೆ ಬಗ್ಗೆಯೂ ಪರೀಕ್ಷಿಸಿದರು. ಯಾವುದೇ ರೀತಿಯ ಜ್ವರದ ಲಕ್ಷಣ ಕಂಡುಬಂದಿಲ್ಲ.

Advertisement

ಜಂತು ಹುಳುಗಳಿಂದ ಹೆಜ್ಜಾರ್ಲೆ ಸಾವು
ಡಿ.26ರ 2020 ರಂದು ಮೃತಪಟ್ಟ ಪೆಲಿಕಾನ್‌ ಹಕ್ಕಿಯ ಕಳೆ ಬರಹ ಮಾದರಿ ಪರೀಕ್ಷೆಗೆ ಬನ್ನೇರುಘಟ್ಟದ ಪ್ರಯೋಗಾಲಯಕ್ಕೆ
ಕಳುಹಿಸಲಾಗಿತ್ತು. ಪಕ್ಷಿಯ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು ಸಾವಿಗೆ ಜಂತು ಹುಳುಗಳ ಬಾಧೆಯೇ ಕಾರಣ ಎಂದು ವರದಿ ಬಂದಿದೆ. ಜ.1 ಮತ್ತು 5 ರಂದು ಮರಣ ಹೊಂದಿದ ಪೆಲಿಕಾನ್‌ ಹಕ್ಕಿಗಳ ಅಂಗಾಂಗ ಮಾದರಿಯನ್ನು ಉತ್ತರಪ್ರದೇಶದ
ಐವಿಆರ್‌ಐ (ಇಂಡಿಯನ್‌ ವೆಟ ರ್ನರಿ ರೀಸರ್ಚ್‌ ಇನ್ಸ್‌ ಟಿಟ್ಯೂಟ್‌) ಸಂಸ್ಥೆಗೆ ಕಳುಹಿಸಿದ್ದು ವರದಿಯ ನಿರೀಕ್ಷೆಯ ಲ್ಲಿದ್ದೇವೆಂದು
ಪಶುವೈದ್ಯಾಧಿಕಾರಿ ಡಾ.ಸತೀಶ್‌ ತಿಳಿಸಿದರು.

– ಅಣ್ಣೂರು ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next