Advertisement

ಪೊಲೀಸ್‌ ಠಾಣೆಯಲ್ಲಿದೆ ಕೊಹ್ಲಿಯ ಮೊದಲ “ಆಡಿ’ಕಾರು!

10:39 PM Dec 12, 2020 | mahesh |

ಮುಂಬಯಿ: ವಿರಾಟ್‌ ಕೊಹ್ಲಿ ಅವರ ಕಾರಿನ ಕ್ರೇಜ್‌ ವಿಪರೀತ. ಅವರಿಗೆ ಲಕ್ಸುರಿ ಕಾರುಗಳ ಗೀಳು. ಖ್ಯಾತ ಕಾರು ಕಂಪೆನಿ “ಆಡಿ ಇಂಡಿಯಾ’ದ ರಾಯಭಾರಿಯೂ ಹೌದು. ನೂತನ “ಆಡಿ’ ಕಾರುಗಳು ಬಿಡುಗಡೆಯಾದೊಡನೆ ಅದು ಕೊಹ್ಲಿ ಸಂಗ್ರಹವನ್ನು ಸೇರಿಕೊಳ್ಳುತ್ತದೆ. ಆಗ ಅವರು ಹಳೆಯ ಕಾರನ್ನು ಮಾರಾಟ ಮಾಡುತ್ತಾರೆ.

Advertisement

ಇದು ಕೊಹ್ಲಿ ಅವರ ಮೊದಲ “ಆಡಿ ಆರ್‌8′ ಕಾರಿನ ಸ್ವಾರಸ್ಯಕರ ಕತೆ. ಇದನ್ನವರು 2012ರಲ್ಲಿ ಖರೀದಿಸಿ ದ್ದರು. ಇದೀಗ ಮುಂಬಯಿಯ ಪೊಲೀಸ್‌ ಠಾಣೆಯೊಂದರ ಎದುರು ಧೂಳು ಹಾಗೂ ತುಕ್ಕು ಹಿಡಿದು ನಿಂತಿದೆ!

ಗರ್ಲ್ಫ್ರೆಂಡ್‌ಗೆ ಗಿಫ್ಟ್!
2016ರಲ್ಲಿ ಹೊಸ ಮಾಡೆಲ್‌ “ಆಡಿ’ ಕಾರು ಖರೀದಿಸಿದೊಡನೆ ಕೊಹ್ಲಿಯ “ಆಡಿ ಆರ್‌8′ ಕಾರನ್ನು ಸಾಗರ್‌ ಠಕ್ಕರ್‌ ಎಂಬವರು 2.5 ಕೋಟಿ ರೂ.ಗೆ ಖರೀದಿಸಿದ್ದರು. ಇದನ್ನು ಗೆಳತಿಗೆ ಉಡುಗೊರೆ ನೀಡುವುದು ಠಕ್ಕರ್‌ ಉದ್ದೇಶವಾಗಿತ್ತು. ಬಳಿಕ ಠಕ್ಕರ್‌ ಅಕ್ರಮ ವ್ಯವಹಾರವೊಂದನ್ನು ನಡೆಸಿ ಅಡಗಿ ಕುಳಿತರು. ಪೊಲೀಸರು ಬಂದು ಅವರ ಆಸ್ತಿ ಜಪ್ತಿ ಮಾಡುವಾಗ ಈ ಕಾರನ್ನೂ ಸೀಝ್ ಮಾಡಿ ಕೊಂಡೊಯ್ದರು. ಅಲ್ಲಿಂದ ಈ ಕಾರು ಮುಂಬಯಿಯ ಪೊಲೀಸ್‌ ಠಾಣಾ ಗ್ರೌಂಡ್‌ನ‌ಲ್ಲೇ ಉಳಿದುಕೊಂಡಿದೆ. ಅದೃಷ್ಟವಶಾತ್‌ ಈ ಕಾರಿನ ದಾಖಲೆಪತ್ರಗಳನ್ನೆಲ್ಲ ಕೊಹ್ಲಿ ಮೊದಲೇ ಕ್ರಮಬದ್ಧವಾಗಿ ಹಸ್ತಾಂತರಿಸಿದ್ದರು.

ಮೊದಲ “ಆಡಿ’ ಕಾರು ಇದಾದ್ದರಿಂದ ಇದು ಕೊಹ್ಲಿ ಅವರಿಗೆ ಬಹಳ ಅಚ್ಚುಮೆಚ್ಚಿನದ್ದಾಗಿತ್ತು. ಇದರ ಮುಂದೆ ನಿಂತು ಕೊಹ್ಲಿ ಅದೆಷ್ಟೋ ಫೋಟೊಗಳನ್ನು ತೆಗೆಸಿಕೊಂಡಿದ್ದರು. ಈಗ ಇದರ ಸ್ಥಿತಿ ಕಂಡರೆ ಕೊಹ್ಲಿ ನೊಂದುಕೊಳ್ಳುವುದು ಖಂಡಿತ!

Advertisement

Udayavani is now on Telegram. Click here to join our channel and stay updated with the latest news.

Next