ಕೋಲ್ಕತ್ತಾ: ಆಂದ್ರೆ ರಸೆಲ್ ಕೆರಿಬಿಯನ್ ನಾಡಿನ ದೈತ್ಯ ಪ್ರತಿಭೆ. ಅದ್ಣುತ ಆಲ್ ರೌಂಡರ್. ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವಂತಹ ಬ್ಯಾಟಿಂಗ್ ಇವರಲ್ಲಿದೆ. ಐಪಿಎಲ್ ನಲ್ಲಿ ಕೋಲ್ಕತ್ತಾ ಪರವಾಗಿ ಅದೆಷ್ಟೋ ಪಂದ್ಯಗಳನ್ನು ರಸೆಲ್ ಏಕಾಂಗಿಯಾಗಿ ಗೆಲುವು ತಂದಿತ್ತಿದ್ದಾರೆ.
ಟಿವಿ ಪ್ರೆಸೆಂಟರ್ ಸಂಜನಾ ಗಣೇಶನ್ ಜೊತೆಗೆ ಮಾತುಕತೆಯಲ್ಲಿ ರಸೆಲ್ ತನ್ನ ಸ್ಪೋಟಕ ಇನ್ನಿಂಗ್ಸ್ ಒಂದರ ಹಿಂದಿನ ಕಥೆ ಬಿಚ್ಚಿಟ್ಟಿದ್ದಾರೆ.
2019ರ ಐಪಿಎಲ್ ಪಂದ್ಯ. ಆರ್ ಸಿ ಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು 205 ರನ್ ಗಳಿಸಿತ್ತು. ಕೆಕೆಆರ್ ತಂಡಕ್ಕೆ ಕೊನೆಯ 16 ಎಸೆತದಲ್ಲಿ 52 ಅಗತ್ಯವಿತ್ತು. ನಂತರ ನಡೆದಿದ್ದು ರಸೆಲ್ ಶೋ !
“ನಾಯಕ ದಿನೇಶ್ ಕಾರ್ತಿಕ್ ಒಂದು ಬೌಂಡರಿ ಬಾರಿಸಿ ಔಟಾದರು, ಬಹುಶಃ ಕಾರ್ತಿಕ್ ಕ್ಯಾಚನ್ನು ಕೊಹ್ಲಿ ಹಿಡಿದರು. ಕ್ಯಾಚ್ ಹಿಡಿದ ಸಂಭ್ರಮದಲ್ಲಿ ನಮ್ಮ ಸಪೋರ್ಟರ್ ಗಳು , ಆಟಗಾರರು ಕುಳಿತಿದ್ದ ಕಡೆ ನೋಡಿ ಕಮ್ ಆನ್ ಎಂದು ಕೂಗಿದರು. ಇದು ನನಗೆ ಕೆರಳಸಿತ್ತು.
ಇಲ್ಲಿಗೆ ಮುಗಿಯಬಾರದು ಎಂದು ಅನಿಸಿತ್ತು. ಬ್ಯಾಇಂಗ್ ಮಾಡಲು ಗಿಲ್ ಬಂದಿದ್ದ. ನನಗೆ ಸ್ಟ್ರೈಕ್ ಕೊಡು ಎಂದೆ. ಯಾವುದೇ ಬೌಲರ್ ಬಂದರು ಬಾರಿಸಲು ಸಿದ್ದನಿದ್ದ ಎಂದು ರಸೆಲ್ ಹೇಳಿದರು.
ಅಂದು ರಸೆಲ್ ಕೇವಲ 13 ಎಸೆತದಲ್ಲಿ 48 ರನ್ ಬಾರಿಸಿದ್ದರು. ಅದರಲ್ಲೂ ಕೊನೆಯ 9 ಎಸೆತಗಳಲ್ಲಿ 6,6,6,1,6,6,6,4,6 ಬಾರಿಸಿದ್ದರು. ಕೆಕೆಆರ್ 5 ಎಸೆತ ಬಾಕಿ ಇರುವಂತೆ ಜಯ ಗಳಿಸಿತ್ತು.