Advertisement

ಕೊಹ್ಲಿ ಶತಕ: ಬಾಂಗ್ಲಾಗೆ ಕಠಿಣ ಸವಾಲು ನೀಡಿದ ಭಾರತ

09:49 AM Nov 24, 2019 | keerthan |

ಕೋಲ್ಕತ್ತಾ: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಭಾರತ ತಂಡ ಭಾರಿ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ 347 ರನ್ ಗಳಿಸಿದ ಭಾರತ 241 ರನ್ ಮುನ್ನಡೆಯಲ್ಲಿದೆ.

Advertisement

ಬಾಂಗ್ಲಾದ ಮೊದಲ ಇನ್ನಿಂಗ್ಸ್ ಮೊತ್ತ 106 ಹಿಂದೆ ಹಾಕಿದ ಭಾರತ ಕೊಹ್ಲಿ ಶತಕದ ನೆರವಿನಿಂದ 347 ರನ್ ಗಳಿಸಿ ಡಿಕ್ಲೇರ್ ಮಾಡಿತು. ಭಾರತದ ಪರ ನಾಯಕ ಕೊಹ್ಲಿ136, ಚೆತೇಶ್ವರ್ ಪೂಜಾರ 55, ರಹಾನೆ 51 ರನ್ ಗಳಿಸಿದರು. ಅಂತಿಮವಾಗಿ ಭಾರತ ಕಡೇಯ 42 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿತು.

ಅಲ್ ಅಮೀನ್ ಮತ್ತು ಅಬಾದತ್ ಹುಸೈನ್ ತಲಾ ಮೂರು ವಿಕೆಟ್ ಪಡೆದರೆ, ಅಬು ಜಯೇದ್ ಒಂದು ವಿಕೆಟ್ ಪಡೆದರು.

241 ರನ್ ಹಿನ್ನಡೆಯಲ್ಲಿರುವ ಬಾಂಗ್ಲಾ ಮತ್ತೊಂದು ಸೋಲನುಭವಿಸುವ ಆತಂಕದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next