Advertisement
ಇವರಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರು “ಸರ್ ಗ್ಯಾರ್‌ಫೀಲ್ಡ್ ಸೋಬರ್ ಟ್ರೋಫಿ’ಗಾಗಿ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಮತ್ತು ಟ್ರ್ಯಾವಿಸ್ ಹೆಡ್ ಅವರೊಂದಿಗೆ ಸ್ಪರ್ಧೆಗೆ ಇಳಿಯಲಿದ್ದಾರೆ.ಆರ್. ಅಶ್ವಿನ್ ವರ್ಷದ ಟೆಸ್ಟ್ ಕ್ರಿಕೆಟರ್ ಸ್ಪರ್ಧೆಯಲ್ಲಿದ್ದಾರೆ. ಇಲ್ಲಿಯೂ ಟ್ರ್ಯಾವಿಸ್ ಹೆಡ್ ರೇಸ್‌ನಲ್ಲಿದ್ದಾರೆ. ಜತೆಗೆ ಆಸೀಸ್ ಆರಂಭಕಾರ ಉಸ್ಮಾನ್ ಖ್ವಾಜಾ, ಇಂಗ್ಲೆಂಡ್‌ನ ಜೋ ರೂಟ್ ಕೂಡ ಇದ್ದಾರೆ.
ವಿರಾಟ್ ಕೊಹ್ಲಿ 2023ರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ 2,048 ರನ್ ಬಾರಿಸಿದ್ದಾರೆ (35 ಪಂದ್ಯ). 50ನೇ ಏಕದಿನ ಶತಕ ಬಾರಿಸಿದ್ದು ಕೊಹ್ಲಿ ಅವರ ಪ್ರಚಂಡ ಸಾಹಸಕ್ಕೆ ಸಾಕ್ಷಿ.ರವೀಂದ್ರ ಜಡೇಜ 35 ಪಂದ್ಯಗಳಿಂದ 613 ರನ್ ಜತೆಗೆ 66 ವಿಕೆಟ್ ಸಂಪಾದಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ 22 ವಿಕೆಟ್ ಉರುಳಿಸಿದ ಸಾಧನೆ ಇವರದ್ದಾಗಿದೆ. ಆರ್. ಅಶ್ವಿನ್ ಕಳೆದ ವರ್ಷದ ಅಗ್ರಮಾನ್ಯ ಟೆಸ್ಟ್ ಬೌಲರ್ ಆಗಿ ಮೂಡಿಬಂದಿದ್ದಾರೆ, 17.02ರ ಸರಾಸರಿಯಲ್ಲಿ ಸರ್ವಾಧಿಕ 41 ವಿಕೆಟ್ ಕೆಡವಿದ ಹಿರಿಮೆ ಇವರದಾಗಿದೆ. ಇನ್ನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು 4 ಸಲ “5 ಪ್ಲಸ್’ ವಿಕೆಟ್ ಉರುಳಿಸಿದ್ದಾರೆ.
Related Articles
ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಟ್ರ್ಯಾವಿಸ್ ಹೆಡ್ 31 ಪಂದ್ಯಗಳನ್ನಾಡಿದ್ದು, 1,698 ರನ್ ಸಂಪಾದಿಸಿದ್ದಾರೆ.
Advertisement
ವನಿತಾ ವಿಭಾಗ“ರಶೆಲ್ ಹೇವೊ ಫ್ಲಿಂಟ್ ಟ್ರೋಫಿ’ಗಾಗಿ ನಡೆಯುವ ಐಸಿಸಿ ವರ್ಷದ ವನಿತಾ ಆಟಗಾರ್ತಿ ಪ್ರಶಸ್ತಿ ರೇಸ್‌ನಲ್ಲಿ ಭಾರತೀಯರ್ಯಾರೂ ಕಾಣಿಸಿಕೊಂಡಿಲ್ಲ. ಇಲ್ಲಿರುವವರೆಂದರೆ ಚಾಮರಿ ಅತಪಟ್ಟು (ಶ್ರೀಲಂಕಾ), ಆ್ಯಶ್ಲಿ ಗಾರ್ಡನರ್, ಬೆತ್ ಮೂನಿ (ಆಸ್ಟ್ರೇಲಿಯ) ಮತ್ತು ನ್ಯಾಟ್ ಸ್ಕಿವರ್ ಬ್ರಂಟ್ (ಇಂಗ್ಲೆಂಡ್).