Advertisement

ಕೊಹ್ಲಿ ಅಪಾಯಕಾರಿ: ಟ್ರೆಂಟ್‌ ಬೌಲ್ಟ್

01:41 AM May 31, 2019 | Team Udayavani |

ಲಂಡನ್‌: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್‌ ಟೂರ್ನಿಯ ಅತ್ಯಂತ ಅಪಾಯಕಾರಿ ಆಟಗಾರರಾಗಿದ್ದು, ಅವರನ್ನು ಆರಂಭದಲ್ಲೇ ಕಟ್ಟಿ ಹಾಕಬೇಕು ಇಲ್ಲವಾದಲ್ಲಿ ಅವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ನ್ಯೂಜಿಲ್ಯಾಂಡ್‌ನ‌ ವೇಗಿ ಟ್ರೆಂಟ್ ಬೌಲ್ಟ್ಅಭಿಪ್ರಾಯಪಟ್ಟಿದ್ದಾರೆ.

Advertisement

ಸುದ್ದಿಮಾದ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಬೌಲ್ಟ್ ‘ವಿರಾಟ್ ಕೊಹ್ಲಿ ಎದುರು ಆಕ್ರಮಣಕಾರಿ ಬೌಲಿಂಗ್‌ ಮಾಡುವುದು ಅನಿವಾರ್ಯ, ಇಲ್ಲವಾದಲ್ಲಿ ಪಂದ್ಯದ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಆದ್ದರಿಂದ ಅವರ ವಿಕೆಟ್ ಬೇಗನೆ ಕಬಳಿಸುವುದು ಉತ್ತಮ ಎಂದರು. ಒಂದು ವೇಳೆ ಕೊಹ್ಲಿ ವಿಕೆಟ್ ಬೇಗನೆ ಕೀಳಲು ವಿಫ‌ಲವಾದರೆ ಮತ್ತೆ ಅವರನ್ನು ತೆಡಯಲು ಯಾರಿಂದಲೂ ಸಾಧ್ಯವಿಲ್ಲ ಆದ್ದರಿಂದ ಬೌಲರ್‌ಗಳು ಕೊಹ್ಲಿ ವಿಕೆಟ್ ಆರಂಭದಲ್ಲೆ ಉರುಳಿಸುವ ಯೋಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next