Advertisement

ಇನ್ನೊಂದು ಶತಕ ಬಾರಿಸಿದರೆ ನಾಯಕನಾಗಿ ಕೊಹ್ಲಿ ವಿಶ್ವದಾಖಲೆ

08:56 PM Feb 03, 2021 | Team Udayavani |

ಚೆನ್ನೈ: ಇಂಗ್ಲೆಂಡ್‌-ಭಾರತದ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ವಿಶ್ವವಿಖ್ಯಾತ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಹೆಗಲಿಗೆ ಮತ್ತೆ ನಾಯಕತ್ವದ ಹೊಣೆಗಾರಿಕೆ ಏರಿದೆ. ನಾಯಕನಾಗಿ ಅವರೀಗ ವಿಶ್ವದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ.

Advertisement

ಇನ್ನೊಂದೇ ಒಂದು ಶತಕ ಗಳಿಸಿದರೆ, ನಾಯಕನಾಗಿ ಗರಿಷ್ಠ 42ನೇ ಶತಕ ಗಳಿಸಲಿದ್ದಾರೆ. ಇದು ವಿಶ್ವದಾಖಲೆಯಾಗಲಿದೆ. ಪ್ರಸ್ತುತ 41 ಶತಕ ಬಾರಿಸಿರುವ ಕೊಹ್ಲಿ, ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಜೊತೆಗೆ ಸಮಬಲ ಸಾಧಿಸಿದ್ದಾರೆ. ನಾಯಕನಾಗಿ ಒಟ್ಟು 33 ಶತಕ ಬಾರಿಸಿರುವ ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ರೈತರ ಹೆಸರಿನಲ್ಲಿ ಎಡಪಂಥೀಯ ದಲ್ಲಾಳಿಗಳ ಪ್ರತಿಭಟನೆ: ನಳಿನ್‍ಕುಮಾರ್ ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next