Advertisement

ಕೊಹ್ಲಿ: ಸಾವಿರ ರನ್‌ ಗುರಿ

08:40 AM Aug 23, 2017 | Harsha Rao |

ಹೊಸದಿಲ್ಲಿ: ಪ್ರಚಂಡ ಫಾರ್ಮ್ನಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮುಂದೆ ಈ ವರ್ಷದ ಏಕದಿನ ಪಂದ್ಯಗಳಲ್ಲಿ ಸರ್ವಾಧಿಕ ರನ್‌ ದಾಖಲಿಸುವ ಜತೆಗೆ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಸಾವಿರ ರನ್‌ ಪೇರಿಸುವ ಮಾರ್ಗ ತೆರೆದುಕೊಂಡಿದೆ.

Advertisement

ಸದ್ಯ ವಿರಾಟ್‌ ಕೊಹ್ಲಿ ಈ ವರ್ಷದ 14 ಪಂದ್ಯಗಳಿಂದ 769 ರನ್‌ ಪೇರಿಸಿ ತೃತೀಯ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್‌ ಅವರಿಗೆ ಅಗ್ರಸ್ಥಾನ. ಅವರು 16 ಪಂದ್ಯಗಳನ್ನಾಡಿದ್ದು, 814 ರನ್‌ ಗಳಿಸಿದ್ದಾರೆ. ಜೋ ರೂಟ್‌ 14 ಪಂದ್ಯಗಳಿಂದ 785 ರನ್‌ ಹೊಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ನಡುವಿನ ಅಂತರ ಕೇವಲ 45 ರನ್‌ ಮಾತ್ರ. ಭಾರತವಿನ್ನು ಶ್ರೀಲಂಕಾ ಸರಣಿಯಲ್ಲಿ 4 ಪಂದ್ಯಗಳನ್ನು ಆಡಬೇಕಿದೆ. ಅಷ್ಟರಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೆ ನೆಗೆಯುವುದರಲ್ಲಿ ಅನುಮಾನವಿಲ್ಲ. 

ಲಂಕಾ ಸರಣಿಯ 4 ಪಂದ್ಯಗಳೂ ಸೇರಿದಂತೆ ಭಾರತವಿನ್ನು ಈ ವರ್ಷ 11 ಏಕದಿನ ಪಂದ್ಯಗಳನ್ನಾಡಲಿದೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡಿಗೆ ಹೋಲಿ ಸಿದರೆ ಭಾರತದ ಮುಂದಿರುವ ಏಕದಿನ ಪಂದ್ಯಗಳ ಸಂಖ್ಯೆ ಆಧಿಕ. ಹೀಗಾಗಿ ಕೊಹ್ಲಿ ಮುಂದೆ ಸಾವಿರ ರನ್‌ ಪೂರೈಸುವ ಅವಕಾಶ ಧಾರಾಳವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next