Advertisement

ನೊಬೆಲ್‌ ವಿಜೇತ,ಯುಎನ್‌ ಮಾಜಿ ಕಾರ್ಯದರ್ಶಿ ಕೊಫಿ ಅನ್ನಾನ್‌ ನಿಧನ

03:55 PM Aug 18, 2018 | |

ಜಿನೇವಾ: ನೊಬೆಲ್‌ ಪ್ರಶಸ್ತಿ ವಿಜೇತ,ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೊಫಿ ಅನ್ನಾನ್‌ ಅವರು ಶನಿವಾರ ಸ್ವಿಟ್ಝರ್‌ಲ್ಯಾಂಡ್‌ನ‌ ಜಿನೇವಾದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. 

Advertisement

ಘಾನಾ ದೇಶದ ರಾಜತಂತ್ರಜ್ಞರಾಗಿದ್ದ ಕೊಫಿ ಅವರಿಗೆ 2001 ರಲ್ಲಿ ನೊಬೆಲ್‌ ಶಾಂತಿ ಪುರಸ್ಕಾರ ಲಭಿಸಿತ್ತು. 

ಕೊಫಿ ಅವರು ವಿಶ್ವಸಂಸ್ಥೆಯ ಮೊದಲ ಕಪ್ಪು ವರ್ಣೀಯ ಪ್ರಧಾನ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಸಿರಿಯಾ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿಯೂ ಕೊಫಿ ಕೆಲಸ ನಿರ್ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next