Advertisement
ಯಾವುದೀ ಕಂಪನಿ? 1994ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೊಯೆನಿಗ್ಸೆಗ್ ಕಂಪನಿ, ಮುಖ್ಯವಾಗಿ ನ್ಪೋರ್ಟ್ಸ್ ಕಾರುಗಳನ್ನು ತಯಾರಿಸುತ್ತದೆ. ಅತ್ಯಾಧುನಿಕವಾದ, ಹಗುರವಾಗಿರುವ ಈ ಕಾರುಗಳ ಬೆಲೆ ಅಂದಾಜು 21 ಕೋಟಿ ರೂ.ಗಳಷ್ಟಿರುತ್ತದೆ! ಹಾಗಾಗಿ, ಈ ಕಾರುಗಳು ಅತಿ ಶ್ರೀಮಂತರಿಗಷ್ಟೇ ಸೀಮಿತ ಎನ್ನುವಂತಾಗಿವೆ. ಆದರೆ, ತಮ್ಮ ಕಂಪನಿಯ ಕಾರುಗಳನ್ನು ಎಲ್ಲಾ ವರ್ಗದವರಿಗೂ ಇಷ್ಟವಾಗುವಂತೆ ಮಾಡಲು ನಿರ್ಧರಿಸಿರುವ ಕಂಪನಿಯ ಮಾಲೀಕ ಕ್ರಿಶ್ಚಿಯನ್ ವೊನ್ ಕೊಯೆನಿಗ್ಸೆಗ್, ಜ್ವಾಲಾಮುಖೀ ಇಂಧನದ ಜೊತೆಗೆ ಹೆಜ್ಜೆಯಿಡಲು ತೀರ್ಮಾನಿಸಿದ್ದಾರೆ.
ಈ ತಂತ್ರಜ್ಞಾನ ಆವಿಷ್ಕರಿಸಿದ್ದು ಐಸ್‌ಲ್ಯಾಂಡ್‌ನಲ್ಲಿ. ಭಾಗಶಃ ಸಕ್ರಿಯವಾಗಿರುವ ಅಗ್ನಿಪರ್ವತಗಳಿಂದ ನಿರಂತರವಾಗಿ ಇಂಗಾಲದ ಡೈಆಕ್ಸೆ„ಡ್ ಅನಿಲ ಹೊರಬರುತ್ತಿರುತ್ತದೆ. ಆ ಅನಿಲವನ್ನು ಸಂಗ್ರಹಿಸಿ, ವಿವಿಧ ತಂತ್ರಜ್ಞಾನಗಳಿಂದ ಅದನ್ನು ಮಿಥೈಲ್ ಆಲ್ಕೋಹಾಲ್ ಆಗಿ ಪರಿವರ್ತಿಸಲಾಗುತ್ತದೆ. ಆ ಮಿಥೈಲ್ ಆಲ್ಕೋಹಾಲ್ ಅನ್ನೇ ಕಾರುಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಈ ರೀತಿ, ಇಂಗಾಲದ ಡೈ ಆಕ್ಸೆ„ಡ್‌ನಿಂದ ಮಿಥೈಲ್ ಆಲ್ಕೋಹಾಲ್‌ಗೆ ಪರಿವರ್ತಿತಗೊಂಡ ಇಂಧನವು ಪರಿಸರ ಸ್ನೇಹಿ ಎಂದು ಪರಿಗಣಿಸಲ್ಪಟ್ಟಿದೆ. ಮಾತ್ರವಲ್ಲ, ಇತರ ಪರಿಸರ ಸ್ನೇಹಿ ಇಂಧನಗಳಿಗೆ ಹೋಲಿಸಿದೆ ಇದರಿಂದ ಹೊರಬರುವ ಇಂಗಾಲ ಸಂಬಂಧಿತ ಕಣಗಳ ಪ್ರಮಾಣ ಶೂನ್ಯ ಎಂದು ಹೇಳಲಾಗಿದೆ. ಹಾಗಾಗಿ, ಇದನ್ನು ಝೀರೋ ಪೊಲ್ಯೂಟೆಂಟ್ ಎಂದೂ ಪರಿಗಣಿಸಲಾಗಿದೆ.