ಕುಂದಾಪುರ: ಕಳೆದ 40 ವಾರ ಗಳಿಂದ ಸಮಾನ ಮನಸ್ಕ 70-80 ಮಂದಿ ತಂಡದಿಂದ ಕಾರ್ಯಾಚರಿಸಲ್ಪಡುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಇವರ ಸ್ವತ್ಛತಾ ಅಭಿಯಾನಕ್ಕೆ ಈ ಬಾರಿ ಪೊಲೀಸರೂ ಕೈ ಜೋಡಿಸಿದ್ದಾರೆ. ಲಾಠಿ ಹಿಡಿದು ಕಳ್ಳರ ಸದೆಬಡಿಯುವ ಮೂಲಕ ಸಮಾಜದ ರಕ್ಷಣೆ ಮಾಡುವ ಪೊಲೀಸರು ಇಲ್ಲಿ ಕೈಗವಸು ಧರಿಸಿ ತ್ಯಾಜ್ಯ ಹೆಕ್ಕಿ ಪರಿಸರ ರಕ್ಷಣೆಗೂ ಮುಂದಾಗಿದ್ದಾರೆ. ಎಎಸ್‌ಪಿ ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ ಪೊಲೀಸರು ಸ್ವತ್ಛತೆ ನಡೆಸಿದರೆ ಎಎಸ್‌ಪಿ ಅವರ ಪತ್ನಿಯೂ ಸೇವಾಕಾರ್ಯದಲ್ಲಿ ಭಾಗಿಯಾದರು.
ಪ್ರತಿ ರವಿವಾರದಂದು ವಿವಿಧೆಡೆ ಸ್ವತ್ಛತಾ ಕಾರ್ಯ ಮಾಡುತ್ತ ಬಂದಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಜತೆಗೆ ಕುಂದಾಪುರ ಎಎಸ್ಪಿ ಕಚೇರಿ, ವೃತ್ತ ನಿರೀಕ್ಷಕರ ಕಚೇರಿ, ಕುಂದಾಪುರ ನಗರ ಠಾಣೆ, ಸಂಚಾರಿ ಠಾಣೆ, ಕುಂದಾಪುರ ಗ್ರಾಮಾಂತರ, ಅಮಾಸೆಬೈಲು, ಕೊಲ್ಲೂರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಯ ಅಧಿ ಕಾರಿಗಳು, 30ಕ್ಕೂ ಅಧಿ ಕ ಸಿಬಂದಿ ಜತೆಗೂಡಿದ್ದು 100ಕ್ಕೂ ಅ ಧಿಕ ಜನರಿಂದ ಬೀಚ್ ಬಳಿ ಸ್ವತ್ಛತಾ ಕೆಲಸ ನಡೆಯಿತು.
ಸ್ವತ್ಛತಾ ಕಾರ್ಯ ನಡೆಸಿದ ಸ್ವಯಂ ಸೇವಕರಿಗೆ ಸಿಕ್ಕಿದ್ದು ಒಂದೂವರೆ ಲೋಡಿಗೂ ಅಧಿ ಕ ತ್ಯಾಜ್ಯ. ಅದರಲ್ಲೂ ಸಿಂಹಪಾಲು ಬೀರ್ ಬಾಟಲಿ, ಚಪ್ಪಲಿ, ಪ್ಲಾಸ್ಟಿಕ್ ತ್ಯಾಜ್ಯ. ಅದನ್ನು ಪುರಸಭೆಗೆ ಹಸ್ತಾಂತರಿಸಲಾಯಿತು.
ವಕೀಲರು, ವೈದ್ಯರು, ವಿವಿಧ ಕಂಪೆನಿಗಳ ಉದ್ಯೋಗಿಗಳು ಪ್ರತಿ ವಾರ ಭಾಗವಹಿಸುವ ಈ ಸ್ವತ್ಛತಾ ಕಾರ್ಯದಲ್ಲಿ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಎಎಸ್ಪಿ ಅವರ ಪತ್ನಿ ಅನಂತಾ, ಸಿಪಿಐ ಮಂಜಪ್ಪ ಡಿ.ಆರ್., ನೇತೃತ್ವದಲ್ಲಿ ವಿವಿಧ ಪೊಲೀಸ್ ಠಾಣೆ ಸಿಬಂದಿ, ಕೊಲ್ಲೂರು ಠಾಣೆ ಪಿಎಸ್‌ಐ ಶಿವಕುಮಾರ್, ಎಎಸ್‌ಐ ಗೋವಿಂದ ರಾಜು, ರೆಡ್ ಕ್ರಾಸ್ ಸಂಸ್ಥೆಯ ವೈ. ಶಿವರಾಮ ಶೆಟ್ಟಿ, ಐಎಂಎ ಮಂಗಳೂರಿನ ಕಾರ್ಯದರ್ಶಿ ಡಾ| ರಶ್ಮೀ ಕುಂದಾಪುರ, ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್ ಬಂಗೇರ, ಸಮಾಜ ಸೇವಕ ಗಣೇಶ್ ಪುತ್ರನ್, ಕೋಟ ಗೀತಾನಂದ ಫೌಂಡೇಶನ್‌ನ ರವಿಕಿರಣ್, ಎಫ್‌ಎಸ್‌ಎಲ್ ಸಂಸ್ಥೆಯ ದಿನೇಶ ಸಾರಂಗ, ಅಡಿಟರ್ ಅರುಣ್ ಕುಮಾರ್, ಬ್ಯಾಂಕ್ ಮೆನೇಜರ್ ಶಶಿಧರ್ ಎಚ್.ಎಸ್., ಎಂಜಿನಿಯರ್ ಕೌಶಿಕ್ ಯಡಿಯಾಳ, ನಿಸರ್ಗ ಗೆಳೆಯರು ಸಿದ್ದಾಪುರದ ಪದಾಧಿ ಕಾರಿಗಳು, ರೀಪ್ ವಾಚ್ ಸಂಸ್ಥೆಯವರು, ಅಮಲ ಭಾರತ ಅಭಿಯಾನದ ಸದಸ್ಯರು ಕುಂದಾಪುರ ಕೋಡಿಯ ಸೀ ವಾಕ್ ಬಳಿಯ ಸಮುದ್ರ ಕಿನಾರೆ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಮಾದರಿಯಾದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆ
ಸದಾ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರೋ ಪೊಲೀಸರು ವಾರಕ್ಕೊಮ್ಮೆ ಇಂತಹ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಕೆಲಸದ ಮೇಲೆ ಇನ್ನಷ್ಟು ಏಕಾಗ್ರತೆ ಹೆಚ್ಚಲಿದೆ. ಮಾತ್ರವಲ್ಲದೆ ಸಾರ್ವಜನಿಕರೊಂದಿಗೆ ಕೆಲಸ ಮಾಡಿದಾಗ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಇನ್ನಷ್ಟು ಬಲ ಬರುತ್ತದೆ.
– ಹರಿರಾಮ್ ಶಂಕರ್ , ಎಎಸ್ಪಿ , ಕುಂದಾಪುರ