Advertisement

ಕೊಡಿನೀರು: ಬೈಕ್‌ಗಳ ಮುಖಾಮುಖೀ ಢಿಕ್ಕಿ; ವಿದ್ಯಾರ್ಥಿ ಸಾವು

03:17 PM Dec 03, 2017 | Team Udayavani |

ಸವಣೂರು: ಪುತ್ತೂರು- ಕಾಣಿಯೂರು ಮುಖ್ಯರಸ್ತೆಯ ಕೊಡಿನೀರು ಸಮೀಪ ಪಾಪೆತ್ತಡ್ಕ ಎಂಬಲ್ಲಿ ಬೈಕ್‌ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ಯೋರ್ವ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಕುದ್ಮಾರು ಗ್ರಾಮದ ಅನ್ಯಾಡಿ ಸುಲೈಮಾನ್‌ಅವರ ಪುತ್ರ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಅನಝ್ (17) ಮೃತಪಟ್ಟ ವಿದ್ಯಾರ್ಥಿ. ಹಿಂಬದಿ ಸವಾರ, ಅನಝ್ ಸಹಪಾಠಿ ಸವಣೂರಿನ ಅಬ್ದುಲ್‌ ರಹಮಾನ್‌ ಆಸೀಫ್‌ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪುತ್ತೂರಿನಿಂದ ಬರೆಪ್ಪಾಡಿಗೆ ಹೋಗುತ್ತಿದ್ದ ಪ್ಲಾಟಿನಂ ಬೈಕ್‌ ಮತ್ತು ಎದುರುಗಡೆಯಿಂದ ಬರುತ್ತಿದ್ದ ಅಪಾಚಿ ಬೈಕ್‌ ನಡುವೆ ಮುಖಾ ಮುಖೀ ಢಿಕ್ಕಿಯಾಗಿದ್ದು, ಬಸ್‌ ಅನ್ನು ಓವರ್‌ ಟೇಕ್‌ ಮಾಡುವ ಸಂದರ್ಭ ಈ ದುರ್ಘ‌ಟನೆ ಸಂಭವಿಸಿದೆ ಎನ್ನಲಾಗಿದೆ. ಮೃತಪಟ್ಟ ವಿದ್ಯಾರ್ಥಿ ತಂದೆ, ತಾಯಿ, ಇಬ್ಬರು ಸಹೋ ದರಿಯರನ್ನು ಅಗಲಿದ್ದಾನೆ.

ಇನ್ನೊಂದು ಬೈಕ್‌ನಲ್ಲಿದ್ದ   ಸವಾರ ಚಾರ್ವಾಕ ಗ್ರಾಮದ ಕೊಪ್ಪ ನಿವಾಸಿ ವಿಶ್ವನಾಥ, ಸಹಸವಾರ ಅಶೋಕ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಸಂಸ್ಥೆಯ ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ  ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ  ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅದೇ ರೀತಿ ಕುದ್ಮಾರು ಗ್ರಾಮದ ಕೂರ ಮಸೀದಿಯಲ್ಲಿ ನಡೆಯಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನೂ ರದ್ದುಪಡಿಸಲಾಗಿದೆ. ಆಸ್ಪತ್ರೆಗೆ ಖಾಝಿ ಭೇಟಿ ದ.ಕ. ಖಾಝಿ ಅಸ್ಸಯ್ಯದ್‌ ಫಝಲ್‌ ಕೋಯಮ್ಮ ತಂಙಳ್‌ ಆಸ್ಪತ್ರೆಗೆ ಭೇಟಿ ನೀಡಿ ಕೂರ ಮಸೀದಿ ಕಾರ್ಯದರ್ಶಿ, ಮೃತನ ತಂದೆ ಸುಲೈಮಾನ್‌ ಅವರಿಗೆ ಸಾಂತ್ವನ ಹೇಳಿದರು. 

Advertisement

ಸಂಭ್ರಮದಲ್ಲಿದ್ದ  ಅನಝ್ ಮದ್ರಸದ ಪರೀಕ್ಷೆಯೊಂದರಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಕೂರ ಮಸೀದಿಯಲ್ಲಿ ಈದ್‌ ಮಿಲಾದ್‌ ಅಂಗವಾಗಿ ಶನಿವಾರ ನಡೆಯುವ ಸಮಾರಂಭದಲ್ಲಿ ಅನಝ್ನನ್ನು ಗೌರವಿಸುವ
ಕಾರ್ಯಕ್ರಮವಿತ್ತು. ಹೀಗಾಗಿ ಕಾರ್ಯಕ್ರಮದ ಫೋಟೋ ಕ್ಲಿಕ್ಕಿಸಲೆಂದು ಗೆಳೆಯನ ಕೆಮರ ಪಡೆಯಲು ಮುಕ್ವೆಗೆ ಬಂದಿದ್ದ ಅನಝ್ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ.

ಕುಡಿಯಲು ನೀರು ಕೇಳಿದ್ದ ಅಪಘಾತವಾದ ತತ್‌ಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅಲ್ಲಿದ್ದವರ ಸಹಕಾರದೊಂದಿಗೆ ತನ್ನ ಕಾರಿನಲ್ಲಿ ಅನಝ್ನನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಿದರು. ಈ ವೇಳೆ ಕಾರಿನಲ್ಲಿ ನೀರು ಬೇಕೆಂದು ಕೇಳಿ ನೀರು ಕುಡಿದಿದ್ದ. ಆದರೂ ಆಸ್ಪತ್ರೆಗೆ ತಲುಪುವ ವೇಳೆ ಅನಝ್ ಕೊನೆಯುಸಿರೆಳೆದ. 

Advertisement

Udayavani is now on Telegram. Click here to join our channel and stay updated with the latest news.

Next