Advertisement

ಕೋಡಿಂಬಾಳ: ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಭೇಟಿ

12:26 AM Jun 28, 2019 | mahesh |

ಕಡಬ: ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದ ಕಡಬ ತಾಲೂಕಿನ ಕೋಡಿಂಬಾಳದ ಕುಕ್ಕೆರೆಬೆಟ್ಟು ನಿವಾಸಿ ವೀಣಾ ಅವರ ಮನೆಗೆ ಹಾಗೂ ಕೋಡಿಂ ಬಾಳ ಪ್ರದೇಶಕ್ಕೆ ಆರೋಗ್ಯ ಇಲಾಖಾ ಜಿಲ್ಲಾ ಸರ್ವೇಕ್ಷಣ ಪ್ರಭಾರ ಅಧಿಕಾರಿ ಡಾ| ನವೀನ್‌ಚಂದ್ರ, ಇತರ ಅಧಿಕಾರಿಗಳು ಗುರುವಾರ ಭೇಟಿ ನೀಡಿದರು.

Advertisement

ಕೋಡಿಂಬಾಳ ಗ್ರಾಮದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ, ನೆಲ್ಲಿಪಡ್ಡು, ಕುಕ್ಕೆರೆಬೆಟ್ಟು ಪ್ರದೇಶಗಳ 50 ಮನೆಗಳಲ್ಲಿ ಬಹುತೇಕ ಎಲ್ಲರೂ ಜ್ವರದ ಬಾಧೆಗೆ ಒಳಗಾಗಿದ್ದಾರೆ. ಹಲವರು ಚಿಕಿತ್ಸೆ ಪಡೆದು ಗುಣಮುಖರಾದರೆ ಇನ್ನೂ ಹಲವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ ಜ್ವರದ ತೀವ್ರತೆ ಹೆಚ್ಚಾಗಿರುವುದರಿಂದ ಗುರುವಾರ ಈ ಭಾಗದ ಬಹುತೇಕ ಮನೆಗಳಿಗೆ ತೆರಳಿದ ಅಧಿಕಾರಿಗಳು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.

ಡಾ| ನವೀನ್‌ಚಂದ್ರ ಮಾತನಾಡಿ, ಕೋಡಿಂಬಾಳ ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಯಲ್ಲಿ ಗ್ರಾಮದ ಮಡ್ಯಡ್ಕ ಶಾಲೆಯಲ್ಲಿ ತಾತ್ಕಾಲಿಕ ಪರಿವೀಕ್ಷಣ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿ ಓರ್ವ ಬಿಎಎಂಎಸ್‌ ವೈದ್ಯರು ಹಾಗೂ ಓರ್ವ ಶುಶ್ರೂಷಕಿ ಕಾರ್ಯ ನಿರ್ವಹಿಸಲಿದ್ದಾರೆ. ಜ್ವರ ಬಾಧಿತರು ಇಲ್ಲಿ ಬಂದು ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆಯಬಹುದು, ರಕ್ತದ ಪ್ಲೇಟ್ಲೆಟ್ ತಪಾಸಣೆಗೆ ಅಲ್ಲಿ ಅವಕಾಶವಿರುವುದಿಲ್ಲ. ಈ ಭಾಗದ ಮನೆಗಳಿಗೆ ನಿರಂತರ ಮೂರು ದಿನಗಳ ಕಾಲ ಫಾಗಿಂಗ್‌ ಮಾಡಲು ಸೂಚಿಸಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತೀ ದಿನ ಜ್ವರ ಪೀಡಿತರ ಮನೆಗೆ ತೆರಳಿ ವರದಿ ನೀಡು ವಂತೆಯೂ ಸೂಚಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಸೋಂಕು ರೋಗಗಳ ತಜ್ಞೆ ಡಾ| ಶಿಲ್ಪಾ, ಜಿಲ್ಲಾ ರೋಗಗಳ ವಾಹಕ ನಿಯಂತ್ರಾಧಿಕಾರಿ ಡಾ| ಅರುಣ್‌ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಆಶೋಕ್‌, ಪುತ್ತೂರು ತಾಲೂಕು ಆರೋಗ್ಯ ನಿರೀಕ್ಷಕ ರವಿಚಂದ್ರ, ತಾ.ಪಂ. ಸದಸ್ಯ ಫ‌ಝಲ್ ಕೋಡಿಂಬಾಳ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಸದಸ್ಯ ನಾರಾಯಣ ಪೂಜಾರಿ, ಸಾಮಾಜಿಕ ಕಾರ್ಯಕರ್ತ ರಘುನಾಥ ಕೊಠಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next