Advertisement
ಕೆಲ ದಿನಗಳ ಹಿಂದೆ ಅಕ್ರಮ ಮರಳುಗಾರಿಕೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದ ಅಕ್ರಮ ಮರಳು ದಂಧೆಕೋರರು ಆ ಬಳಿಕವೂ ಯಾವುದೇ ತೊಡಕಿಲ್ಲದೆ ತಮ್ಮ ದಂಧೆಯನ್ನು ಮುಂದುವರಿಸಿದ್ದಾರೆ. ಮಂಗಳವಾರ ಬೆಳಗ್ಗಿನಿಂದಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸುದ್ದಿ ತಿಳಿದ ಪತ್ರಕರ್ತರು ಸ್ಥಳಕ್ಕೆ ತೆರಳಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇನ್ಯದಲ್ಲಿ ಮರಳು ತೆಗೆಯಲು ಪಿಡಬುÉ Âಡಿ ಮೂಲಕ ಅನುಮತಿ ಪಡೆದುಕೊಂಡ ಗುತ್ತಿಗೆದಾರರ 1 ಲಾರಿಯನ್ನು ಸಾಗಾಟ ಅನುಮತಿ ಪತ್ರ ಇರಿಸಿಕೊಂಡಿಲ್ಲದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
Related Articles
ಕೋರಿಯಾರ್ ಮೂಲಕ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆಯವರು, ಕಂದಾಯ ಇಲಾಖೆಯವರು ಈ ಕುರಿತು ತಲೆಕೆಡಿಸಿಕೊಂಡಿಲ್ಲ. ಇಲ್ಲಿ ರಾತ್ರಿ ಹಗಲೆನ್ನದೆ ಪಿಕ್‌ಪ್, ಮಿನಿ ಲಾರಿ ಸೇರಿದಂತೆ ಸುಮಾರು 25ರಿಂದ 30 ವಾಹನಗಳಲ್ಲಿ ಮರಳು ಸಾಗಿಸಿ ಜನರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
Advertisement
ಸರಕಾರದ ಅವೈಜ್ಞಾನಿಕ ಮರಳು ನೀತಿಯಿಂದಾಗಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದ್ದು, ಜನರಿಗೆ ಮಾತ್ರ ಮರಳು ಚಿನ್ನದಂತಾಗಿದೆ.
ಅಕ್ರಮಕ್ಕೆ ಸಹಕರಿಸುತ್ತಿರುವ ಕೆಲವು ಇಲಾಖೆಗಳವರು ಹಾಗೂ ಮಧ್ಯವರ್ತಿ ಗಳು ಹಣ ಲೂಟಿ ಹೊಡೆಯುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕಾದವರು ಕಣ್ಮುಚ್ಚಿ ಕುಳಿತಿದ್ದಾರೆ.