Advertisement

ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಕೋಡಿ ಮಠದ ಶ್ರೀಗಳು

08:51 PM Jun 18, 2024 | Team Udayavani |

ಚಿಕ್ಕಬಳ್ಳಾಪುರ: ಮನುಷ್ಯ ಯಾವಾಗ ಸಹನೆ, ನೆಮ್ಮದಿ ಕಳೆದುಕೊಳ್ಳುತ್ತಾನೋ ಆಗ ಸುಲಭವಾಗಿ ಕೋಪಕ್ಕೆ ತುತ್ತಾಗುತ್ತಾನೆ. ಆಗ ಅವಘಡಗಳು ಎದುರಾಗುತ್ತೇವೆಂದು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಮಾಡಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಪರೋಕ್ಷವಾಗಿ ಕೋಡಿ ಮಠದ ಶ್ರೀಗಳು ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಮಂಗಳವಾರ ಮಧ್ಯಾಹ್ನ ಇಲ್ಲಿನ ತಾಪಂ ಮಾಜಿ ಅಧ್ಯಕ್ಷ ಗೆರಗಿರೆಡ್ಡಿ ಮನೆಗೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪರ ದೇಶದಲ್ಲಿ ಮಳೆ ವಿಪರೀತ ಆಗುತ್ತದೆ. ರಾಷ್ಟ್ರಗಳು ಮುಳಗುತ್ತೇವೆ. ಬಾಂಬ್‌ಗಳು ಸ್ಪೋಟವಾಗುತ್ತವೆ. ಜನ ಜಂಗುಳಿ ಹೆಚ್ಚಾಗುತ್ತದೆ. ಯುದ್ಧ ಭೀತಿಯಿದೆ. ಇಬ್ಬರು ಪ್ರಧಾನಿಗಳು ಸಾಯುತ್ತಾರೆಂದು ಹೇಳಿದ್ದೆ. ಅದೆಲ್ಲಾ ನಡೆದು ಹೋಗಿದೆ. ಅದು ಇನ್ನೂ ಮುಂದುವರೆಯುತ್ತದೆ ಎಂದರು.

ದೊಡ್ಡ ದೊಡ್ಡ ಜನಗಳಿಗೆ ಅಘಾತ ಇದೆ ಎಂದು ನಾನು ಈ ಹಿಂದೆಯೆ ಹೇಳಿದ್ದೆ ಅದೆಲ್ಲಾ ನಡೆಯುತ್ತಿದೆ. ಇನ್ನೂ ನಡೆಯುತ್ತದೆ. ಕರೆಯದೇ ಬರುವುದು ಕೋಪ. ತಕ್ಷಣ ಕೋಪವನ್ನು ಮನುಷ್ಯನ ನಿಯಂತ್ರಿಸಿಕೊಳ್ಳಬೇಕೆಂದರು. ಮನುಷ್ಯ ತನ್ನ ಹುಟ್ಟುನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಮಾನವ ಜನ್ಮ ಶ್ರೇಷ್ಠವಾದದು. ಅನೇಕ ಜೀವರಾಶಿಗಳ ಬಳಿಕ ಮನುಷ್ಯನಿಗೆ ಈ ಜನ್ಮ ಸಿಕ್ಕಿದೆ. ಮನುಷ್ಯನಿಗೆ ಇದು ಕಡೆ ಜನ್ಮ, ಮಾನವ ಜನ್ಮಕ್ಕೆ ಬಂದ ಮೇಲೆ ದೇವರು ಕೋಪ, ಆಸೆ, ದುಃಖ ಇಟ್ಟಿದ್ದಾನೆ. ಮನುಷ್ಯನ ಜನ್ಮ ದೊಡ್ಡದು ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಹಲವು ಘಟನೆಗಳಿಂದ ನಾವು ಟಿವಿ ನೋಡಲಿಕ್ಕೆ ಆಗುವುದಿಲ್ಲ. ಇವು ಇನ್ನೂ ಹೆಚ್ಚಾಗುತ್ತದೆ. ಮನುಷ್ಯನ ಶಾಂತಿ, ನೆಮ್ಮದಿ, ಶಿಸ್ತು ಬದ್ದ ಜೀವನ ಇದ್ದರೆ ಏನು ಆಗುವುದಿಲ್ಲ ಎಂದು ಕೋಡಿಮಠದ ಶ್ರೀಗಳು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next