Advertisement
ದೇಗುಲದ ಒಳಪೌಳಿಯಲ್ಲಿ ನ. 18ರಂದು ರಂಗೋತ್ಸವ, ಸಿಂಹವಾನೋತ್ಸವದಲ್ಲಿ ಉತ್ಸವ ಮೂರ್ತಿ, ದೇವರ ಪಲ್ಲಕಿಯ ಪ್ರದ ಕ್ಷಿ ಣೆ ಯನ್ನು ಒಳಸುತ್ತಿನಲ್ಲಿ ಚೆಂಡೆ-ವಾದ್ಯ ಗಳೊಡನೆ ಸಾಂಪ್ರ ದಾಯಿಕ, ಶಾಸ್ತ್ರೋಕ್ತವಾಗಿ ನಡೆಸಲಾಯಿತು.
Related Articles
Advertisement
400 ವರ್ಷಗಳ ಶಿಥಿಲಗೊಂಡ ಗರ್ಭಗುಡಿಯ ಮಾಡನ್ನು ಹೊಸತಾಗಿ ತಾಮ್ರದ ಹೊದಿಕೆಯೊಂದಿಗೆ ನಿರ್ಮಿಸಲಾಗಿದೆ. 60 ವರ್ಷಗಳ ಹಿಂದಿನ ಕಾಂಕ್ರೀಟ್ ಛಾವಡಿಯನ್ನು ತೆರ ವು ಗೊ ಳಿ ಸಿ ಎಡನಾಳಿ ಮಾಡನ್ನು ನೂತನ ತಾಮ್ರದ ಹೊದಿಕೆಯೊಂದಿಗೆ ರಚಿಸಲಾಗಿದೆ. ಗರ್ಭಗುಡಿಯ ಮೇಲಿನ ಶಿಥಿಲಗೊಂಡ ಗೋಡೆಯನ್ನು ತೆರ ವು ಮಾಡಿ ಹೊಸ ದಾಗಿ ಗೋಡೆ ಹಾಗೂ ಮುಚ್ಚಿಗೆಗಳನ್ನು ನಿರ್ಮಿಸಲಾ ಗಿ ದೆ. ಶಿಲಾ ಮಾಡಿನ ಮೇಲೆ ಸಂಪೂರ್ಣ ಸಿಮೆಂಟ್ ಗಾರೆ ಹಾಕಲಾಗಿದೆ. ಗರ್ಭಗುಡಿಯ ಮೇಲಿನ ಗೋಡೆಯ ಹೊರಸುತ್ತಿನಲ್ಲಿ ಹೊಸತಾಗಿ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. ತೀರ್ಥ ಮಂಟಪ ವನ್ನು ತಾಮ್ರದ ಹೊದಿಕೆಯೊಂದಿಗೆ ಹೊಸತಾಗಿ ನಿರ್ಮಿಸಲಾಗಿದೆ. ಗರ್ಭಗುಡಿಯ ಮೇಲಿನ ಹೊರಗಿನ ಗೋಡೆಯ ಸುತ್ತ ನಾಲ್ಕು ಸಿಂಹ ಹಾಗೂ 36 ಚಾರುಗೂಟ ನಿರ್ಮಿಸಲಾಗಿದೆ. ನೂತನ ಧ್ವಜ ಮರ ಕೆತ್ತನೆ, ಶಿಲಾಪೀಠ, ಕಂಚಿನ ಪದ್ಮಪೀಠ, ಎರಕದ ಅಷ್ಟದಿಕಾ³ಲಕರು, ಧ್ವಜಮರಕ್ಕೆ ತಾಮ್ರದ ಕವಚದ ಕೆಲಸ ಸಂಪೂರ್ಣವಾಗಿದೆ. ಬ್ರಹ್ಮ ಅಶ್ವತ್ಥ ಕಟ್ಟೆಯಲ್ಲಿ ನಾಗಶಿಲೆಯ ಪುನರ್ ಪ್ರತಿಷ್ಠೆಯಾಗಿದೆ. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎನ್. ಕೃಷ್ಣಮೂರ್ತಿ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ ಹಾಗೂ ಸದಸ್ಯರ ಮುತುವರ್ಜಿಯಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ.
ಮದ್ಯ ಮಾರಾಟ ನಿಷೇಧ:
ಕೋಟೇಶ್ವರ, ಹಂಗಳೂರು ಹಾಗೂ ಗೋಪಾಡಿ ವ್ಯಾಪ್ತಿಯ ಎಲ್ಲ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್, ರೆಸ್ಟೋರೆಂಟ್ ಹಾಗೂ ವೈನ್ ಶಾಪ್‌ಗ್ಳಲ್ಲಿ ಮದ್ಯಮಾರಾಟವನ್ನು ನ.18ರ ಬೆಳಗ್ಗೆ 6ರಿಂದ 19ರ ರಾತ್ರಿ 12ರ ವರೆಗೆ ನಿಷೇಧಿಸುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶಿಸಿದ್ದಾರೆ.
ಜನಮನ ಸೂರೆಗೊಂಡ ತಟ್ಟಿರಾಯ :
ಕೊಡಿಹಬ್ಬ ಹಾಗೂ ವಿಶೇಷ ಸಂದರ್ಭ ಗಳಲ್ಲಿ ಉತ್ಸವ ಮೂರ್ತಿಯೊಡನೆ ಸಾಗುವ ಇಲ್ಲಿನ ಎರಡು ಬೃಹತ್ ತಟ್ಟಿರಾಯ ವಿಶೇಷ ಆಕರ್ಷಣೆಯಾಗಿದೆ. ದೇಗುಲದ ಕೊಡಿಹಬ್ಬ ಸಹಿತ ಕಟ್ಟೆಪೂಜೆ ಕಾರ್ಯಕ್ರಮಗಳಲ್ಲಿ ತಟ್ಟಿರಾಯನಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪುರಾತನ ಪರಂಪರೆಗೆ ಇದೊಂದು ಪ್ರತೀಕವಾಗಿದೆ. ವಿವಿಧ ದೇಗುಲಗಳ ಧಾರ್ಮಿಕ ಆಚರಣೆಗಳಲ್ಲಿ ಇಲ್ಲಿನ ತಟ್ಟಿರಾಯರನ್ನು ಬಳಸಲಾಗುತ್ತದೆ. ಐತಿಹಾಸಿಕ ಹಿನ್ನೆಲೆಯಲ್ಲಿ ತಟ್ಟಿರಾಯನ ವರ್ಣನೆ ಇದ್ದು, ಅದರ ಬಳಕೆಯನ್ನು ಸಂಪ್ರದಾಯಕ್ಕೆ ಲೋಪವಾಗದಂತೆ ಕೋಟಿಲಿಂಗೇಶ್ವರ ದೇಗುಲದಲ್ಲಿ ಧಾರ್ಮಿಕ ಶ್ರದ್ಧೆಯೊಡನೆ ಬಳಸಲಾಗುತ್ತಿದೆ.
ಇಂದು ಕೊಡಿಹಬ್ಬ :
ಶ್ರೀ ಕೋಟಿಲಿಂಗೇಶ್ವರ ದೇಗುಲದಲ್ಲಿ ನ. 19ರಂದು ನಡೆಯಲಿರುವ ರಥೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬ್ರಹ್ಮರಥವನ್ನು ಅಲಂಕರಿ ಸಲಾಗಿದೆ. ಪಟ್ಟಾಭಿ ರಾಮಚಂದ್ರ ದೇಗುಲದ ಶ್ರೀ ರಾಮ ಸೇವಾ ಸಂಘದಿಂದ ಬ್ರಹ್ಮರಥಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಮಿತ್ರದಳ ಕೋಟೇಶ್ವರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಾತ್ರೆ ದಿನ ಶ್ರೀ ದೇವರು ಹಾಗೂ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ತಂತ್ರಿ ಪ್ರಸನ್ನ ಕುಮಾರ್ ಐತಾಳ್, ಕಾರ್ಯ ನಿರ್ವಹಣಾಧಿ ಕಾರಿ ಗಣೇಶ ಗೌಡ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಕೊಡಿಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಏರ್ಪಡಿಸಿದ್ದಾರೆ.