Advertisement
ದೋಣಿ ದುರಂತದಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರಾದ ನಾಗ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ್ ಖಾರ್ವಿ ಹಾಗೂ ಮಂಜುನಾಥ್ ಖಾರ್ವಿ ಅವರು ಸಾವನ್ನಪ್ಪಿದ್ದಾರೆ.
Related Articles
Advertisement
ಈ ಶೋಧಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಪೊಲೀಸರು ಇಂದು ಬೆಳಿಗ್ಗೆಯಿಂದಲೇ ತಮ್ಮನ್ನು ತೊಡಗಿಸಿಕೊಂಡಿದ್ದರು.
ಘಟನೆಯ ವಿವರ:‘ಸಾಗರ್ ಶ್ರೀ’ ಹೆಸರಿನ ನಾಡದೋಣಿಯೊಂದು ಮೀನುಗಾರಿಕೆ ಮುಗಿಸಿಕೊಂಡು ರವಿವಾರ ಅಪರಾಹ್ನ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಸಮೀಪ ಸಮುದ್ರ ತೀರದಲ್ಲಿ ಬ್ರೇಕ್ ವಾಟರ್ ಗೆ ಢಿಕ್ಕಿ ಹೊಡೆದು ಮುಳುಗಿತ್ತು. ಈ ದೋಣಿಯಲ್ಲಿ 12 ಜನ ಮೀನುಗಾರರಿದ್ದರು. ದುರ್ಘಟನೆ ಸಂಭವಿಸಿದ ತಕ್ಷಣ 8 ಮಂದಿ ಅದೃಷ್ಟವಶಾತ್ ಈಜಿ ದಡಸೇರುವಲ್ಲಿ ಸಫಲರಾಗಿದ್ದರು. ಆದರೆ, ಉಪ್ಪುಂದ ಗ್ರಾಮದ ಕರ್ಕಿಕಳಿ ನಿವಾಸಿಗಳಾದ ಬಿ. ನಾಗ, ಲಕ್ಷ್ಮಣ, ಶೇಖರ ಜಿ., ಮಂಜುನಾಥ ಎಂಬ ನಾಲ್ವರು ದುರದೃಷ್ಟವಶಾತ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಈ ದುರ್ಘಟನೆಯಲ್ಲಿ, ಉಪ್ಪುಂದ ಗ್ರಾಮದ ಜನತಾ ಕಾಲನಿಯ ನಿತ್ಯಾನಂದ, ಮಹಾಬಲ, ಫಿಶರೀಸ್ ಕಾಲನಿಯ ಚಂದ್ರ, ಕರ್ಕಿಕಳಿಯ ಸತೀಶ್, ಅಣ್ಣಪ್ಪ, ವೆಂಕಟರಮಣ, ಜನಾರ್ಧನ ಮತ್ತು ಚಂದ್ರಶೇಖರ ಅವರು ಜೀವಸಹಿತ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.