ನಾಪತ್ತೆಯಾದವರನ್ನು ಉಪ್ಪುಂದ ಕರ್ಕಿಕಳಿ ನಿವಾಸಿಗಳಾದ ಬಿ. ನಾಗ (46) ಲಕ್ಷ್ಮಣ (34) ಮಂಜುನಾಥ (38) ಹಾಗೂ ಇನ್ನೋರ್ವ ಉಪ್ಪುಂದ ಕರ್ಕಿಕಳಿ ಫಿಶರೀಸ್ ಕಾಲೋನಿಯ ಗಂಜೇರಿ ನಿವಾಸಿ ಶೇಖರ ( 35 ) ಎನ್ನಲಾಗಿದೆ.
Advertisement
ದೋಣಿಯಲ್ಲಿ ಒಟ್ಟು ಹನ್ನೆರಡು ಮಂದಿ ಮೀನುಗಾರರು ಇದ್ದು ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಪರಿಣಾಮ ನಾಲ್ಕು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದೆ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.