Advertisement

ಸಂಭ್ರಮದ ರಥೋತ್ಸವ; ಇಂದು ತೆಪ್ಪೋತ್ಸವ

12:30 AM Jan 24, 2019 | |

ಮಲ್ಪೆ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಾರ್ಷಿಕ ಮಹಾರಥೋತ್ಸವವು ಬುಧವಾರ ನಡೆಯಿತು. ಮಧ್ಯಾಹ್ನ ದೇವರ ಉತ್ಸವ ಮೂರ್ತಿಯ ರಥಾರೋಹಣ ನಡೆದ ಬಳಿಕ ಮಹಾ ಅನ್ನಸಂತರ್ಪಣೆ ಜರಗಿತು. ರಾತ್ರಿ ಮಹಾರಥೋತ್ಸವ, ದರ್ಶನ ಸೇವೆ, ತೊಟ್ಟಿಲು ಉತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರಗಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

Advertisement

ಪ್ರಧಾನ ತಂತ್ರಿ ವೇ| ಮೂ| ಹಯವದನ ತಂತ್ರಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಸದಸ್ಯರಾದ ಜನಾರ್ದನ ಕೊಡವೂರು, ಅಡಿಗ ಕೃಷ್ಣಮೂರ್ತಿ ಭಟ್, ರಾಜ ಸೇರಿಗಾರ್‌, ಭಾಸ್ಕರ ಪಾಲನ್‌ ಬಾಚನಬೈಲು, ಚಂದ್ರಕಾಂತ್‌ ಪುತ್ರನ್‌, ಬಾಬ, ಸುಧಾ ಎನ್‌. ಶೆಟ್ಟಿ, ಬೇಬಿ ಎಸ್‌. ಮೆಂಡನ್‌, ಭಕ್ತವೃಂದದ ಅಧ್ಯಕ್ಷ ರವಿರಾಜ್‌ ಹೆಗ್ಡೆ, ಪ್ರಮುಖರಾದ ಅಗ್ರಹಾರ ಭಾಸ್ಕರ ಭಟ್, ಲಕ್ಷ್ಮೀನಾರಾಯಣ ಭಟ್, ಕೃಷ್ಣ ಐತಾಳ್‌, ರಾಮ ಐತಾಳ, ಶ್ರೀಕಾಂತ್‌ ಬಾಯರಿ, ಟಿ. ರಾಘವೇಂದ್ರ ರಾವ್‌, ಸಾಧು ಸಾಲ್ಯಾನ್‌, ಆನಂದ ಪಿ. ಸುವರ್ಣ, ನಾಗರಾಜ್‌ ಸುವರ್ಣ, ಸುಧಾಕರ ಎ. ಕುಂದರ್‌, ಕಾಂತಪ್ಪ ಕರ್ಕೇರ, ಶೇಷಪ್ಪ ಕುಂದರ್‌, ಪ್ರಕಾಶ್‌ ಕರ್ಕೇರ, ಶಿವಪ್ಪ ಟಿ. ಕಾಂಚನ್‌, ಹರೀಶ್‌ ಜಿ. ಕೋಟ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

ಜ. 26: ಢಕ್ಕೆಬಲಿ
ಗುರುವಾರ ಬೆಳಗ್ಗೆ ಕವಾಟೋದ್ಘಾಟನೆ, ತುಲಭಾರ ಸೇವೆ, ಮಧ್ಯಾಹ್ನ ಕಟ್ಟೆಪೂಜೆ, ಸಂಜೆ ತೆಪ್ಪೋತ್ಸವ ಜರಗಲಿದೆ. ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆ, ಮಹಾ ಮಂತ್ರಾಕ್ಷತೆ, ಜ. 26ರಂದು ಬೆಳಗ್ಗೆ ನಾಗಬನದಲ್ಲಿ ಆಶ್ಲೇಷಾ ಬಲಿ, ರಾತ್ರಿ 

Advertisement

Udayavani is now on Telegram. Click here to join our channel and stay updated with the latest news.

Next