ಪುತ್ತೂರಿನ ಈಶ್ವರಮಂಗಲದ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ಶಿಕ್ಷಕಿ ಸವಿತಾ ಕೋಡಂದೂರು ಮತ್ತು ಅವರ ಪುತ್ರಿ ಕು| ಸಿಂಚನ ಲಕ್ಷ್ಮೀ ಕೋಡಂದೂರು ನಡೆಸಿಕೊಟ್ಟ ಸಂಗೀತ ಕಛೇರಿ ಮನಸೂರೆಗೊಂಡಿತು.
ಅಮ್ಮ ಆನಂದದಾಯಿನಿ ಪದ ವರ್ಣ ಗಂಭೀರ ನಾಟ ರಾಗದಲ್ಲಿ ಶ್ರುತಿ ಸೇರಿ ಆನಂದಿಸಿದ ಸುಮಧರ ಸಂಜೆಯ ಹಾಡು ಮಧುರ ಅನುಭವ ನೀಡಿತು. ಈ ತಾಯಿ-ಮಗಳ ಜೋಡಿ ಜೀವ ವೀಣೆಯಂತೆ ಮಿಡಿವ ರಾಗಗಳೆರಡು ರಾಗ ಒಂದೇ ಭಾವ ಜೀವ ಎಂಬಂತೆ ಹಾಡಿದರು.
ಯುವ ಪ್ರತಿಭೆ ಅಭಿಲಾಷ್ ಕಾಣದ ಕಡಲಿಗೆ, ಕೋಡಗನ ಕೋಳಿ ನುಂಗಿತಾ, ತರವಲ್ಲ ತಗಿ ನಿನ್ನ ಮುಂತಾದ ಭಾವಗೀತೆ, ಭಕ್ತಿ ಗೀತೆ, ಜಾನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು.ಕು| ಸಿಂಚನ ಲಕ್ಷ್ಮೀ ಜಬ್ ದೀಪ್, ದುಡ್ಡು ಕೊಟ್ಟರೆ, ಕಲ್ಲ ಕೇರಿ, ಜಲ್ಲೆಕಬ್ಬು, ಆಟ ಹುಡುಗಾಟವೋ, ಮುಂತಾದ ಹಾಡುಗಳನ್ನು ಹಾಡಿದರು.
ಹಾಡು ಹಳೆಯಾದದರೇನು ಭಾವ ನವನವೀನ ಎಂಬಂತೆ ಗಣೇಶ್ ಸುಳ್ಯ ಹಳೆಯ ಮರೆಯಲಾರದ ಹಾಡುಗಳಾದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಸಿನಿಮಾ ನಟರ ಮಾತಿನ ಅನುಕರಣೆ, ಮಿಮಿಕ್ರಿಗಳೊಂದಿಗೆ ರಂಜಿಸಿದರು. ಎಂದರೋ ಮಹಾನುಭಾವಲೋ, ಪವನತನಯ, ಎಲ್ಲಾನು ಬಲ್ಲೆ, ಗರುಡ ಗಮನ, ಮಧ್ಯಮ ರಾಗದಲ್ಲಿ ಒಲವೇ ತುಂಬಿದ ಕಂಠ ಮುದ ನೀಡಿತು. ಹಿಮ್ಮೇಳದಲ್ಲಿ ಕೀ ಬೋರ್ಡ್ ವಾದಕರಾಗಿ ಪ್ರಸಾದ್ ವರ್ಮ ವಿಟ್ಲ, ರಿದಮ್ ಪ್ಯಾಡ್‌ನಲ್ಲಿ ಸಚಿನ್ ಪುತ್ತೂರು, ತಬಲಾದಲ್ಲಿ ಸುಮನ್ ದೇವಾಡಿಗ ಸಾಥ್ ನೀಡಿದರು.
ಸೌಮ್ಯ ಕುಮಾರ್