Advertisement
ಗೋಣಿಕೊಪ್ಪಲು ಕಳತ್ಮಾಡ್ ಲಯನ್ಸ್ ಪ್ರೌಢಶಾಲೆಯ ದ್ಯಾರ್ಥಿನಿ ಜಾಗೃತಿ ಸುಬ್ಬಯ್ಯ ಹಾಗೂ ಸೋಮವಾರಪೇಟೆಯ ಸೇಂಟ್ ಜೋಸೆಫ್ ಶಾಲೆಯ ಶ್ರಾವಣಿ 616 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ಈ ಬಾರಿ ಶೇ. 78.81 ಫಲಿತಾಂಶ ಗಳಿಸಿರುವ ಕೊಡಗು ಜಿಲ್ಲೆ 2018ರಲ್ಲಿ ಶೇ. 80.68 ರಷ್ಟು ಸಾಧನೆ ಮಾಡಿತ್ತು.
ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಎಂ.ಜಾಗೃತಿ ಸುಬ್ಬಯ್ಯ 616, ಸೋಮವಾರಪೇಟೆ ಸಂತ ಜೋಸೆಫರ ಪ್ರೌಢ ಶಾಲೆಯ ಎಂ.ಯು.ಶ್ರಾವಣಿ 616, ಶನಿವಾರಸಂತೆಯ ಸೇಕ್ರೇಡ್ ಹಾರ್ಟ್ ಪ್ರೌಢ ಶಾಲೆಯ ಎ.ಎಚ್.ಕವನ 615, ಬಿ.ಅಪೇûಾ 612, ಚೌಡ್ಲು ಸಾಂಧೀಪನಿ ಪ್ರೌಢ ಶಾಲೆಯ ಎಚ್.ಕೆ.ಚಿನ್ಮು 612, ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಎ.ಅನನ್ಯ 612, ಕುಶಾಲನಗರ ಫಾತಿಮಾ ಪ್ರೌಢ ಶಾಲೆಯ ಡಿ.ಆರ್.ಶಿವಾನಿ ಮತ್ತು ಎನ್.ಡಿ.ರ್ಹಣಿ 612, ಮಡಿಕೇರಿಯ ಸಂತ ಜೋಸೆಫರ ಪ್ರೌಢ ಶಾಲೆಯ ಪಿ.ಎಲ್.ಮೌನ ಮತ್ತು ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಪಿ.ಅನನ್ಯ ಅಕ್ಕಮ್ಮ ಅವರು ತಲಾ 611 ಅಂಕ ಪಡೆದಿದ್ದಾರೆ.
Related Articles
Advertisement
ಸರ್ಕಾರಿ ಶಾಲೆಗಳ ಫಲಿತಾಂಶ ಶೇ 72.54, ಅನುದಾನಿತ ಶಾಲೆಗಳ ಫಲಿತಾಂಶ ಶೇ 74.28, ಅನುದಾನ ರತ ಶಾಲೆಗಳ ಫಲಿತಾಂಶ ಶೇ 87.64 ಆಗಿದೆ. ಜಿಲ್ಲೆಯಲ್ಲಿ 47 ಸರ್ಕಾರಿ ಪ್ರೌಢಶಾಲೆಗಳಿದ್ದು, 48 ಅನುದಾನಿತ ಶಾಲೆಗಳಿದ್ದರೆ, ಅನುದಾನ ರಹಿತ ಶಾಲೆಗಳ ಸಂಖ್ಯೆ 67 ಆಗಿದೆ. 6,444 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 5,087 ಮಂದಿ ತೇರ್ಗಡೆ ಹೊಂದಿದ್ದಾರೆ.
ಹಿನ್ನಡೆಗೆ ಕಾರಣ :ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭಸಿದ ಅತಿವೃr ಹಾನಿ ಸಂದರ್ಭ ನೀಡಿದ ರಜೆಗಳಿಂದಾಗಿ ಫಲಿತಾಂಶದಲ್ಲಿ ಹಿನ್ನಡೆಯಾಗಿರಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಚ್ಚಾಡೊ ಅಭಿಪ್ರಾಯಪಟ್ಟಿದ್ದಾರೆ. ಶೇ. 100 ಫಲಿತಾಂಶ
ಜಿಲ್ಲೆಯಲ್ಲಿ ಒಟ್ಟು 20 ಶಾಲೆಗಳು ಶೇಕಡ 100 ಫಲಿತಾಂಶ ಪಡೆದು ಕೊಂಡಿದ್ದು, ಈ ಪೈಕಿ 7 ಸರಕಾರಿ ಶಾಲೆಗಳು, 3 ಅನುದಾನಿತ ಹಾಗೂ 10 ಅನುದಾನ ರತ ಶಾಲೆಗಳು ಸೇರಿವೆ. ಕನ್ನಡ ಮಾದ್ಯಮದಲ್ಲಿ ಶೇಕಡ 69.26 ಹಾಗೂ ಆಂಗ್ಲ ಮಾದ್ಯಮದಲ್ಲಿ ಶೇ.89.05 ಫಲಿತಾಂಶ ದಾಖಲಾಗಿದೆ. ರಾಜಪೇಟೆ ತಾಲೂಕಿನಲ್ಲಿ ಶೇ. 84.64, ಮಡಿಕೇರಿ 73.58 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 68.12ರಷ್ಟು ಫಲಿತಾಂಶ ಕಂಡು ಬಂದಿದೆ.