Advertisement
ವೀರಾಜಪೇಟೆಯ ಪಾಲಿಬೆಟ್ಟ ನಿವಾಸಿ ಮತ್ತು ಸಮುದಾಯ ಆರೋಗ್ಯ ಕೇಂದ್ರ, ಪಾಲಿಬೆಟ್ಟದಲ್ಲಿ ಆರೋಗ್ಯ ಕಾರ್ಯಕರ್ತ ಆಗಿದ್ದ (ಗ್ರೂಪ್ ಡಿ ನೌಕರ) 45 ವರ್ಷದ ಪುರುಷ ಮೃತ ಪಟ್ಟವರು. ಅವರು ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ಮಡಿಕೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು. 29 ರಂದು ರಾತ್ರಿ ಮೃತಪಟ್ಟಿದ್ದು, ಕೋವಿಡ್ ದೃಢಪಟ್ಟಿದೆ. ಮತ್ತೂಂದು ಪ್ರಕರಣದಲ್ಲಿ ಬುಧವಾರ ರಾತ್ರಿ ಮಡಿಕೇರಿಯ ಆಜಾದ್ ನಗರದ 54 ವರ್ಷದ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.