Advertisement

ಕೊಡಗು ಜಿಲ್ಲೆ : 12 ಮಂದಿ ಪಾಸಿಟಿವ್‌

08:49 AM Jul 03, 2020 | mahesh |

ಮಡಿಕೇರಿ: ಕೊಡಗಿನಲ್ಲಿ ಗುರುವಾರ 12 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. ಗೋಣಿಕೊಪ್ಪ ಕೆಇಬಿ ರಸ್ತೆಯ ಮಹಿಳೆ, 4 ತಿಂಗಳ ಮಗು, 4, 8 ವರ್ಷದ ಬಾಲಕಿಯರಲ್ಲಿ ಸೋಂಕು ದೃಢಪಟ್ಟಿದೆ. ಮಡಿಕೇರಿಯ ನವೋದಯ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಪ್ರದೇಶದ ವ್ಯಕ್ತಿ, ರಾಜಸ್ಥಾನದ ವ್ಯಕ್ತಿ, ಇಬ್ಬರು ಮಹಿಳೆಯರು, ಮಡಿಕೇರಿಯಲ್ಲಿ ವಾಸವಿರುವ ಪಂಜಾಬ್‌ನ 16 ವರ್ಷದ ಬಾಲಕಿಯಲ್ಲಿ ಸೋಂಕು ಕಂಡು ಬಂದಿದೆ. ಮಡಿಕೇರಿ ನಗರದ ಡೈರಿ ಫಾರಂ ಬಡಾವಣೆಯ ಆರೋಗ್ಯ ಕಾರ್ಯಕರ್ತರೊಬ್ಬರ 16 ವರ್ಷದ ಮಗನಿಗೆ ಸೋಂಕು ದೃಢಪಟ್ಟಿದೆ.  ನಗರದ ಚಾಮುಂಡೇಶ್ವರಿ ನಗರದ ನಿವಾಸಿಯಾ ಗಿರುವ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಹಾಗೂ ಮಡಿಕೇರಿ ತಾಲ್ಲೂಕು ಹೆಬ್ಬೆಟ್ಟಗೇರಿ ಗ್ರಾಮದ 48 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ತಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next