Advertisement

ಇವರೇ ಕೊಡಚಾದ್ರಿಗರು

12:31 PM Apr 29, 2017 | Team Udayavani |

 ಕೊಡಚಾದ್ರಿ ಶಿಖರ ಮುಟ್ಟುವ ಹೊತ್ತಿಗೆ ಎದೆ ಬಡಿ ಏರುತ್ತದೆ. ಏಕೆಂದರೆ ಇಲ್ಲಿನ ರಸ್ತೆಗಳೇ ಹಾಗೇ. ಬಳುಕುತ್ತಾ ಸಾಗುವ ರಸ್ತೆಯಲ್ಲಿ ಭಯಾನಕ ತಿರುವುಗಳು. ಸ್ಟೇರಿಂಗ್‌ ಸರಕ್ಕನೆ ತಿರುಗಿಸಿದರೆ ಕೆಳಗೆ ಪ್ರಪಾತ ದರ್ಶನ. ಇಲ್ಲಿ ವಾಹನ ಚಲಾಯಿಸುವುದಕ್ಕೂ ಎಂಟೆದೆ ಬೇಕು.  ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡುವಂತೆ ಜೀಪುಗಳನ್ನು ಬಿಡುವ ಇಲ್ಲಿನ ಚಾಲಕರ ಬದುಕು ಹೇಗಿದೆ ಗೊತ್ತಾ?

Advertisement

  ಕೊಡಚಾದ್ರಿ ಗಿರಿಶೃಂಗವನ್ನು ತಲುಪಬೇಕು, ಅಲ್ಲಿನ ಚುಮುಚುಮು ಚಳಿಯ ಇಬ್ಬನಿ ಹನಿಗಳಿಂದ ತೋಯ್ದು ಹುಲ್ಲು-ಗರಿಕೆಯ ಹಾಸಿಗೆಯಂತೆ ಕಂಗೊಳಿಸುವ ಕಾಲುದಾರಿಯಲ್ಲಿ ಇಡೀ ಜಗತ್ತನ್ನೇ ಮರೆಯುತ್ತಾ ಸಾಗಬೇಕೆನ್ನುವುದು ಎಲ್ಲಾ ಪ್ರವಾಸಿಗರ ಕನಸೇನೋ ಹೌದು. ಆದರೆ ಇದರ ಶೃಂಗವನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಇದು ಹೇಳಿಕೇಳಿ ಮಲೆನಾಡು ಮತ್ತು ಪಶ್ವಿ‌ಮಘಟ್ಟಗಳ ಶ್ರೇಣಿಯಲ್ಲಿದೆ.  ಕೊಡಚಾದ್ರಿಗಿರಿಯ ಪ್ರಯಾಣದಲ್ಲಿ ನಿಟ್ಟೂರು ಎಂಬ ಪ್ರದೇಶವು ಕೇಂದ್ರ ಸ್ಥಾನವಾಗಿ ಗುರುತಿಸಿಕೊಳ್ಳುತ್ತದೆ. ತೀರ್ಥಹಳ್ಳಿ ಹೊಸನಗರ ಮೂಲಕ ಕೊಲ್ಲೂರಿಗೆ ಸಾಗುವ ದಾರಿ ಮಧ್ಯೆನಿಟ್ಟೂರು ಎಂಬಲ್ಲಿ ಎಡಗಡೆ ಹಾಗೂ ಕೊಲ್ಲೂರು ಹೊಸನಗರ ರಸ್ತೆಯಲ್ಲಿ ಸಾಗುವ ದಾರಿಯಲ್ಲಿ 32 ಕೀ.ಮೀ ಸಾಗುತ್ತಿದ್ದಂತೆ ನಿಟ್ಟೂರಿನಲ್ಲಿ ಬಲತಿರುವು ಮೂಲಕ ಕಚ್ಚಾ ಮಣ್ಣಿನರಸ್ತೆಯಲ್ಲಿ ಸಾಗಬೇಕು.

ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕೀ.ಮೀ ಕಡು ಕಚ್ಚಾ ರಸ್ತೆ ಇದು. ಟಾರುಗೀರು ಏನೂ ಇಲ್ಲ.  ಸಾಮಾನ್ಯ ಕಾರುಗಳನ್ನು ಈ ರಸ್ತೆ ಬಿಟ್ಟುಕೊಳ್ಳುವುದಿಲ್ಲ. ಅಪಾಯಕಾರಿ ಮತ್ತು ಏರು ತಗ್ಗುಗಳಿಂದ ಕೂಡಿದಕಚ್ಛಾ ರಸ್ತೆಯೇಇದಕ್ಕೆ ಪ್ರಮುಖಕಾರಣ. ನಿಟ್ಟೂರಿನಿಂದ ಸುಮಾರುಒಂದೂವರೆ ಕಿ.ಮೀ ಸಾಗುತ್ತಿದ್ದಂತೆ ಅರಣ್ಯಇಲಾಖೆಯಗೇಟ್‌ ಸಿಗುತ್ತದೆ. ಇಲ್ಲಿ ಪ್ರತೀ ವಾಹನಕ್ಕೆ ರೂ.100 ಪ್ರವೇಶ ಶುಲ್ಕವನ್ನು ಪಾವತಿಸಿ ರಶೀದಿ ಪಡೆದುಕೊಂಡು ಪ್ರಯಾಣಿಸಬೇಕು.

 ಇವರೇ ಇಲ್ಲಿನ ಸಂಪರ್ಕ ಸೇತುಗಳು
 ಕೊಡಚಾದ್ರಿಗೆ ಸಾಗುವ ದಾರಿ ಹಾಗೂ ಪ್ರಯಾಣವೇ ಅತ್ಯಂತ ಸವಾಲಿನಿಂದ ಕೂಡಿದೆ ಎನ್ನಬಹುದು. ಏಕೆಂದರೆ ಸಾಮಾನ್ಯಚಾಲಕರು ವಾಹನಗಳನ್ನು ಚಲಾಯಿಸಲಾರದ ರಸ್ತೆಗಳೇ ಇದಕ್ಕೆ ಕಾರಣ. ಸುಮಾರು 12 ಕೀ.ಮೀ ದೂರದ ರಸ್ತೆಯನ್ನು ದಟ್ಟಾರಣ್ಯದ ನಡುವೆ ನಡೆದುಕೊಂಡು ಸಾಗಬೇಕು. ಇಲ್ಲವಾದಲ್ಲಿ ಸಿಂಗಲ್‌ ರೈಡಿಂಗ್‌ ಮೂಲಕ ಬೈಕ್‌ಗಳಲ್ಲಿ ಬಹು ಎಚ್ಚರಿಕೆಯಿಂದ ತಲುಪಬೇಕು. ಇವೆರಡನ್ನು ಬಿಟ್ಟರೆ ಈ ರಸ್ತೆಯಲ್ಲಿ ಕೇವಲ ಜೀಪ್‌ಗ್ಳಷ್ಟೇ ಸಂಚರಿಸಬಹುದು. ಇಂತಹ ಸವಾಲಿನ ರಸ್ತೆಯ ಮೂಲಕ ಪ್ರವಾಸಿಗರನ್ನು ಗಿರಿಯ ತುತ್ತತುದಿಗೆ ತಲುಪಿಸುವ ಸಂಪರ್ಕ ಸೇತುಗಳೇ ಇಲ್ಲಿನ ಬಾಡಿಗೆ ಜೀಪ್‌ಗ್ಳ ಚಾಲಕರು. ಇವರನ್ನು ಡರ್ಟ್‌ಟ್ರ್ಯಾಕ್‌ ಚಾಲಕರು ಅನ್ನುಬಹುದು. ಗಟ್ಟಿಗುಂಡಿಗೆಯ ಇವರು ಯಾವುದೇ ರ್ಯಾಲಿಗಳಲ್ಲಿ ವಾಹನ ಚಲಾಯಿಸುವ ಸಾಹಸಿ ಚಾಲಕರಿಗಿಂತ ಕಡಿಮೆಯಿಲ್ಲವಾಗಿದ್ದು, ಇವರೇ ಇಲ್ಲಿನ ರಿಯಲ್‌ ಹೀರೊಗಳು. ಸಮುದ್ರ ಮಟ್ಟಕ್ಕಿಂತ 1,343 ಮೀಟರ್‌ಎತ್ತರದ ಈ ಶಿಖರದ ಮೇಲ್ಭಾಗದವರೆಗೆ ರಸ್ತೆ ನಿರ್ಮಿಸಿರುವುದೇ ಒಂದು ಸಾಹಸಗಾಥೆ. ಇಂತಹದ ಪರ್ವತದ ತುದಿಗೆ ಅರಣ್ಯ ಇಲಾಖೆ ರಸ್ತೆ ನಿರ್ಮಿಸಿ, ಅದರ ಮೂಲಕ ಸಂಪರ್ಕ ಸಾಧಿಸಿರುವುದು ನಿಜಕ್ಕೂ ಅದ್ಭುತವೇ ಸರಿ. ಪ್ರಕೃತಿಯ ರಮಣೀಯ ಸೌಂದರ್ಯವನ್ನು ಸವಿಯುವುದರ ಹಿಂದೆ ಪ್ರಾಣವನ್ನೇ ಪಣವಾಗಿಡುವಂತಹ ಅಪಾಯವೂ ಇಲ್ಲಿದೆ. ಇಂತಹ ರಸ್ತೆಯಲ್ಲಿ ಪ್ರಕೃತಿಯ ಸೌಂದ‌ರ್ಯವನ್ನು ಸವಿಯಲು ಬರುವ ಪ್ರವಾಸಿಗರನ್ನು ಹೊತ್ತೂಯ್ಯುತ್ತಾ, ನಿತ್ಯ ಸಾವಿನೊಂದಿಗೆ ಸರಸವಾಡುವವರು ಇಲ್ಲಿರುವ ಸುಮಾರು 40 ಮಂದಿ ಸಾಹಸಿ ಜೀಪ್‌ಚಾಲಕರು.  ಒಟ್ಟು 120 ಜೀಪ್‌ಗ್ಳು ಕೊಲ್ಲೂರಿನಿಂದ ನಿತ್ಯ ಪ್ರಯಾಣಿಕರನ್ನು ಹೊತ್ತುಕೊಡಚಾದ್ರಿಯ ಶಿಖರಕ್ಕೆ ಸಾಗುತ್ತವೆ.  ಬಹುತೇಕ ಮಂದಿ ಮಾಲೀಕರ ಜೀಪ್‌ಗ್ಳಿಗೆ ಚಾಲಕರಾಗಿ ಟ್ರಿಪ್‌ಒಂದಕ್ಕೆ 600ರೂ. ರಂತೆ ದುಡಿಯುತ್ತಾರೆ. ವಿಶೇಷ ಸಂದರ್ಭಗಳಲ್ಲಿ ದಿನದಲ್ಲಿ ಸುಮಾರು ಎರಡು ಟ್ರಿಪ್‌ಗ್ಳನ್ನು ಪೂರೈಸುತ್ತಾರೆ. 

 ಮಳೆಗಾಲದಲ್ಲಿ ಅತ್ಯಂತಕಡಿದಾದ ಜಾರುವ ರಸ್ತೆಗಳಲ್ಲಿ ಪ್ರಯಾಣಿಕರನ್ನು ಹೊತ್ತ ಜೀಪ್‌ಗ್ಳನ್ನು ಈ ಚಾಲಕರು ಯಾವುದೇ ಅಳುಕಿಲ್ಲದೇ ಚಲಾಯಿಸುವುದು ಎದೆ ಢವ್‌ ಎನಿಸುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ ತಿಂಗಳವರೆಗೂ ಜಡಿಮಳೆ.  ಈ ಸಂದಭೂìದಲ್ಲೂ ಹೈವೇನಲ್ಲಿ ಓಡಿಸದಂತೆ ನಿರಾಯಸವಾಗಿ ಚಲಾಯಿಸುತ್ತಾರೆ. 

Advertisement

ನವೆಂಬರ್‌, ಡಿಸೆಂಬರ್‌ನಲ್ಲಿ ಪರದಯಂತೆ ಅಡ್ಡಗಟ್ಟುವ ದಟ್ಟ ಮಂಜಿದ್ದರೂ, ಎದುರುಗಡೆ ಎರಡರಿಂದ ಮೂರು ಅಡಿ ಯಾರೂ ಕಾಣಿಸದೇ ಇದ್ದರೂ, ಕಡಿದಾದ ಹಿಮ ತಿರುವು ಹಾಗೂ ಪ್ರಪಾತಗಳ ಅಂಚಿನ ರಸ್ತೆಗಳಲ್ಲಿ ಯಾವುದೇ ಅಳುಕಿಲ್ಲದೆ ಜೀಪು ಓಡಿಸುತ್ತಾರೆ.  ಕೇವಲ ಎರಡು ಚಕ್ರಕ್ಕೆ ಎಂಜಿನ್‌ ಸಂಪರ್ಕವಿರುವ ಜೀಪ್‌ಅನ್ನು ಚಲಾಯಿಸುತ್ತಾರೆ. 

 ಇಲ್ಲಿ ಗಮನಿಸಬೇಕಾದದ್ದು. ಟೂ ವೀಲ್‌ ವಾಹನವೆಂದರೆ ವಾಹನದ ಎಂಜಿನ್‌ ಸಂರ್ಪಕ ಕೇವಲ ಮುಂದಿನ ಚಕ್ರಗಳಿಗಷ್ಟೇ ಇದ್ದು, ಹಿಂದಿನ ಚಕ್ರಗಳು ಮುಂದಿನ ಚಕ್ರಗಳನ್ನು ಅನುಸರಿಸಿಕೊಂಡು ಚಲಿಸುತ್ತವೆ. ಆದರೆ 4 ವೀಲ್‌ ವಾಹನಗಳು ಹೆಚ್ಚು ಬಲಶಾಲಿಯಾಗಿದ್ದು, ವಾಹನದ ಎಂಜಿನ್‌ನ ಸಂಪರ್ಕ ನಾಲ್ಕೂ ಚಕ್ರಗಳಿಗಿರುತ್ತದೆ. ಎಂಥ ಕಠಿಣ ರಸ್ತೆಗಳಲ್ಲಿಯೂ ಸ್ವಲ್ಪವೂಜಾರದಂತೆ ಚಾಲಕ ವಾಹನವನ್ನುಚಲಾಯಿಸಿದಂತೆಯೇ ಚಲಿಸುತ್ತದೆ. ಇವುಗಳನ್ನು ವಿಶೇಷವಾಗಿ ಸೈನ್ಯದಲ್ಲಿ ಮತ್ತು ಡರ್ಟ್‌ ರೇಸ್‌ಗಳಲ್ಲಿ ಬಳಸುತ್ತಾರೆ. 
ಕರ್ನಾಟಕರಾಜ್ಯ ನೋಂದಣಿಯ ಎಲ್ಲಾ ವಾಹನಗಳು ಕೊಡಚಾದ್ರಿಯ ಶೃಂಗಕ್ಕೆ ಹೋಗಲು ಅನುಮತಿ ಇದೆ. ಆದರೆ ಇಲ್ಲಿನ ಕಡಿದಾದ ಏರು ತಗ್ಗುಗಳ ರಸ್ತೆ, ಅಪಾಯಕಾರಿ ತಿರುವುಗಳು, ಪ್ರಪಾತಗಳು, ಕಿರುದಾದ ರಸ್ತೆಗಳಿಂದಾಗಿ ಸ್ವಂತ ವಾಹನದಲ್ಲಿ ಬರುವುದಿಲ್ಲ. 

ಇಲ್ಲಿನ ರಸ್ತೆಗಳಲ್ಲಿ ಓಡಾಡುವ ಅಷ್ಟೂ ವಾಹನಗಳ ಪೈಕಿ ಶೇ.90 ರಿಂದ 95 ರಷ್ಟು ಮಹಿಂದ್ರಾ ಜೀಪ್‌ಗ್ಳೇ ಆಗಿವೆ.  ಅವುಗಳಲ್ಲಿ ಕಮಾಂಡರ್‌ ಮಾದರಿಯ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸುವ ಜೀಪ್‌ಗ್ಳೂ ಈ ರಸ್ತೆಯಲ್ಲಿ ಓಡಾಟ ನಡೆಸುವುದು ಅದ್ಭುತವೇ ಸರಿ. ಸಾಮಾನ್ಯ ಜೀಪ್‌ನಲ್ಲಿ 8 ರಿಂದ 9 ಮಂದಿ, ಕಮಾಂಡರ್‌  ಜೀಪ್‌ನಲ್ಲಿ 10 ರಿಂದ 12 ಮಂದಿಯನ್ನು ಸಾಗಿಸಲಾಗುತ್ತದೆ. ಎಂಟು ಮಂದಿಯ ತಂಡವೊಂದಕ್ಕೆ 2,800ರೂ. ಪ್ರಯಾಣ ಶುಲ್ಕ.  ಎಂಟಕ್ಕಿಂತ ಹೆಚ್ಚಿನಪ್ರಯಾಣಿಕರಿದ್ದಲ್ಲಿ ಪ್ರತಿಯೊಬ್ಬರಿಗೂತಲಾ ರೂ.350/-ರಂತೆ ಹೆಚ್ಚುವರಿಯಾಗಿದರವನ್ನು ವಿಧಿಸಲಾಗುತ್ತದೆೆ. ತಂಡವೊಂದರಲ್ಲಿ ಕೇವಲ ಎರಡು ಅಥವಾ ಮೂರು ಮಂದಿ ಇದ್ದು, ಬಾಡಿಗೆಗೆ ಗೊತ್ತುಪಡಿಸಿಕೊಂಡು ತೆರಳುವುದಾದರೆ ರೂ.2,800/- ಪಾವತಿಸಿ ಹಾಗೂ ಹಂಚಿಕೆಯೊಂದಿಗೆ ತೆರಳುವುದಾದರೆ ಜೀಪ್‌ಗೆ ಕನಿಷ್ಠ 8 ಜನತುಂಬುವವರೆಗೂ ಕಾಯಬೇಕಾಗುತ್ತದೆ. ಕೊಲ್ಲೂರು ಒಂದರಿಂದಲೇ ಸುಮಾರು 120 ಜೀಪ್‌ಗ್ಳು ಗಿರಿಯೆಡೆಗೆ ಸಾಗುತ್ತವೆ. ಪ್ರತೀ ಜೀಪ್‌ಗ್ಳಿಗೂ ಸರದಿಯ ನಂಬರ್‌ಅನ್ನು ನೀಡಲಾಗುತ್ತದೆ.  ಇಲ್ಲಿನ ಚಾಲಕರಲ್ಲಿ ಬಹುತೇಕರು ಕೊಲ್ಲೂರು ದೇವಾಲಯದಲಿ Éಒಂದಲ್ಲ ಒಂದು ಸೇವೆ ಮಾಡುತ್ತಿರುತ್ತಾರೆ.  ಟ್ರಿಪ್‌ ಇಲ್ಲದ ಅವಧಿಯಲ್ಲಿದೇವಾಲಯದಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ. 

 ಜೀಪ್‌ಗ್ಳು ಕೊಲ್ಲೂರು, ನಿಟ್ಟೂರು ಮತ್ತು ಹೊಸನಗರದಿಂದ ಪ್ರವಾಸಿಗರನ್ನು ಹೊತ್ತುಕೊಂಡು ಕೊಡಚಾದ್ರಿಯ ದೇವಸ್ಥಾನದವರೆಗೂ ಸಾಗುತ್ತವೆ. ಇಲ್ಲಿ ಪ್ರಯಾಣಿಕರನ್ನು ಇಳಿಸಿದ ನಂತರ ಜೀಪ್‌ಗ್ಳು ಎರಡರಿಂದ ಎರಡೂವರೆ ಗಂಟೆಗಳ ಸಮಯ ವಾಪಸ್ಸು ಪ್ರಯಾಣಿಕರನ್ನು ಹೊತ್ತೂಯ್ಯಲು ಕಾಯುತ್ತವೆ. ಇಲ್ಲಿಚಾರಣಿಗರುರಾತ್ರಿಯ ಹೊತ್ತುಕ್ಯಾಂಪ್‌ಪೈರ್‌ ಹಾಕಿಕೊಂಡು ಅಥವಾ ಅರಣ್ಯಇಲಾಖೆಯು 8 ಕೊಠಡಿಗಳನ್ನು ನಿರ್ಮಿಸಿದ್ದು ಈ ನಿರೀಕ್ಷಣಾಮಂದಿರಗಳಲ್ಲಿ ‌ುುಂಗಡ ಗೊತ್ತುಪಡಿಸಿಕೊಂಡೂ ಉಳಿದುಕೊಳ್ಳಬಹುದು.

ಆದರೆ ಯಾವುದೇ ಕಾರಣಕ್ಕೂ ಜೀಪ್‌ಗ್ಳು ರಾತ್ರಿಯ ಹೊತ್ತುಗಿರಿಯಲ್ಲಿ ಉಳಿದುಕೊಳ್ಳುವಂತಿಲ್ಲ. ಜೀಪ್‌ಗ್ಳು ಮುನ್ನಾ ದಿನವೇ ರಾತ್ರಿ ಉಳಿದುಕೊಳ್ಳುವ ಪ್ರವಾಸಿಗರನ್ನು ಬಿಟ್ಟು, ಮಾರನೇ ದಿನ ನಿರ್ದಿಷ್ಟ ಅವಧಿಗೆ ವಾಪಸ್ಸು ಪ್ರಯಾಣಿಕರನ್ನುಕರೆದೊಯ್ಯಲು ಬರುತ್ತವೆ. ರಾತ್ರಿ ಉಳಿದುಕೊಳ್ಳುವವರು ಮುಂಚಿತವಾಗಿ ತಿಳಿಸಿದರೆ ಸಸ್ಯಹಾರಿಊಟದ ವ್ಯವಸ್ಥೆ ಇರುತ್ತದೆ. 

ಇಲ್ಲಿ ಹೆಚ್ಚಿನ ಕಡೆಯಲ್ಲಾ ಮೊಬೈಲ್‌ ನೆಟ್‌ವರ್ಕ್‌ಗಳು ಅಲ್ಪಸ್ವಲ್ಪ ಸಿಗುವುದರಿಂದ ಸಂಪರ್ಕಕ್ಕೇನು ಅಷ್ಟೊಂದು ತೊಂದರೆಯಾಗಲಾರದು.

ಇಲ್ಲಿ ಕೊಡಚಾದ್ರಿಜೀಪು ಚಾಲಕ ಮತ್ತು ಮಾಲೀಕರ ಸಂಘವೂ ಇದೆ. ಚಾಲಕ ಮತ್ತು ಮಾಲೀಕರ ನಡುವೆ ಹೊಂದಾಣಿಕೆ ಇದೆ. ಬೆಳಗ್ಗೆ 6ರಿಂದ ಸಂಜೆ 6.30ಕ್ಕೆ ಸೇವೆ ಇರುತ್ತದೆ.

 ಕಡಿದಾದ, ಕೆಸರು ಧೂಳು, ಕಲ್ಲು ಕಂದಕಗಳಿಂದ ಕೂಡಿದ ರಸ್ತೆಗಳಲ್ಲಿ ಈ ಜೀಪ್‌ಗ್ಳು ಚಲಿಸುವುದರಿಂದ ನಾಲ್ಕು ಹೊಸ ಚಕ್ರಗಳ ಆಯಸ್ಸು ಕೇವಲ ಆರು ತಿಂಗಳು ಮಾತ್ರ. ಅಂದರೆ ಇಲ್ಲಿನ ರಸ್ತೆಗಳ ಸ್ವರೂಪ ಹೇಗಿರಬಹುದು ಅಂದಾಜಿಸಿ. ಇಷ್ಟೇ ಅಲ್ಲ ಚಕ್ರದ ಬೇರಿಂಗ್‌ಗಳೂ ಸವೆದು ಹೋಗುತ್ತವೆ. ಜೀಪ್‌ಗ್ಳು ಒಂದು ಬಾರಿ ಹೋಗಿ ಬರಲುಸರಾಸರಿ 600ರೂ. ಡೀಸೆಲ್‌ ಕುಡಿಯುತ್ತದೆ.  ಬಹಳಷ್ಟು ಏರು ಮತ್ತು ಕಡಿದಾದ ರಸ್ತೆಯಲ್ಲೂ ಇಲ್ಲಿನ ಜೀಪ್‌ಗ್ಳು ರೇಸ್‌ನ ಕಾರ್‌ಗಳಂತೆ ಬಹಳ ವೇಗವಾಗಿ ಒಂದರ ಹಿಂದೊಂದು ಧೂಳೆಬ್ಬಿಸುತ್ತಾ ಕೆಸರು ನೀರನ್ನು ರಾಚಿತ್ತಾಸಂಚರಿಸುವುದರಿಂದ ಪ್ರವಾಸಿಗರಿಗೆ  ಪ್ರಯಾಣದ ಜೊತೆಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತವೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳು ಕಾಣೆಯಾಗುತ್ತವೆ. ರಸ್ತೆಯ ತುಂಬ ಬರೀ ನೀರು. ದಾರಿ ಹುಡುಕುವುದೇ ದೊಡ್ಡ ತಲೆನೋವು. 

 ಮಳೆಗಾಲ ಮುಗಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಜೆ.ಸಿ.ಬಿ ಮೂಲಕ ಮಣ್ಣನು ಎತ್ತಿ ರಸ್ತೆ ನಿರ್ಮಿಸುತ್ತದೆ. ಇದರಿಂದ ಜೀಪ್‌ಗ್ಳ ಹಾದಿ ಸುಗಮ.  ಕರ್ನಾಟಕರಾಜ್ಯದ ಪ್ರಸಿದ್ಧ ಗಿರಿಶಿಖರಗಳ ಪ್ರವಾಸೋದ್ಯಮಗಳ ಪೈಕಿ ಕೊಡಗಿನ ಮಾಂದಾಲ್‌ ಪಟ್ಟಿಯನ್ನು ಹೊರತುಪಡಿಸಿದರೆ (ಇಲ್ಲಿ ರಸ್ತೆಗಳು ಅಷ್ಟೊಂದುಕಡಿದಾಗಿಲ್ಲ) ಅತ್ಯಂತದುರ್ಗಮ ಪ್ರದೇಶದ ಕೊಡಚಾದ್ರಿ.  ಈ ಚಾಲಕರು ತೋರುವಧೈರ್ಯ ಹಾಗೂ ಸಾಹಸ ಎಂತಹ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ರ್ಯಾಲಿಗಳಲ್ಲಿ ಭಾಗವಹಿಸುವ ಚಾಲಕರಿಗಿಂತ ಕಮ್ಮಿಯೇನೂ ಇಲ್ಲ ಎನ್ನಬಹುದು. ಇಲ್ಲಿನ ರಸ್ತೆಯಲ್ಲಿ ವಾಹನ ಚಲಾಯಿಸುವುದರಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಅದೆಷ್ಟೋ ಜೀಪ್‌ ಚಾಲಕರು ಇಲ್ಲಿದ್ದಾರೆ. 

 ಅನುಭವವೇ ಜೀವನ 
  ಜೀಪ್‌ ಕ್ಲೀನರ್‌ಗಳಾಗಿ ಆಮೇಲೆ ಚಾಲಕರಾಗುವುದು. ನೇರವಾಗಿ ಚಾಲಕರಾಗುವವರು ಕಡಿಮೆ. ದಿನಕ್ಕೆ 25 ಕಿ.ಮೀ ಕಚ್ಛಾ ರಸ್ತೆಯಲ್ಲಿ ವಾಹನ ಚಲಾಯಿಸುವುದು ಚಾಲೆಂಜ್‌.  ಎರಡು ಟ್ರಿಪ್‌ ಅಂದರೆ 50 ಕಿ.ಮೀಯಾಗುತ್ತದೆ.  ಮಳೆಗಾಲದಲ್ಲಿ, ರಸ್ತೆ ಹದಗೆಟ್ಟಾಗ ಪ್ರವಾಸಿಗರು ಇರುವುದಿಲ್ಲ.  ಇಂಥ ಸಮಯದಲ್ಲಿ ಚಾಲಕರು ದೇವಾಲಯದಲ್ಲಿ, ಅಂಗಡಿ ಮಳಿಗೆ ಇನ್ನೊಂದಷ್ಟು ಜನ ಕೃಷಿಯಲ್ಲಿ ತೊಡಗಿ ಕೊಳ್ಳುತ್ತಾರೆ.  ಕೊಡಚಾದ್ರಿ ಮಾತ್ರವಲ್ಲ. ಶಬರಿ ಮಲೆಗು ಕೂಡ ಇವರ ಜೀಪು ಚಲಾಯಿಸುತ್ತಾರೆ. ಬೆಟ್ಟ ಏರುವಾಗ, ಇಳಿಯುವಾಗ, ಬಳಕುವ ರಸ್ತೆಗಳಲ್ಲಿ,  ತಿರುವುಗಳಲ್ಲಿ  ಪ್ರಪಾತವನ್ನು ತೋರಿಸುತ್ತಾ ಜೀಪು ಚಲಾಯಿಸುವಾಗ ಇವರು ಥೇಟ್‌ ಹೀರೋ ರೀತಿ ಕಂಡರೆ ಆಶ್ಚರ್ಯ ಪಡಬೇಕಿಲ್ಲ. 

 ಸಂತೋಷರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next