Advertisement
ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ಕೊಡಚಾದ್ರಿ ಬೆಟ್ಟದ ಹಿಂಬದಿಯ ತಪ್ಪಲು ಪ್ರದೇಶ ಗೌರಿಕೆರೆ ಎಂಬಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅತಿಥಿ ಗೃಹವನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉದ್ಘಾಟಿಸಿದ್ದು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ.
ನಿಸರ್ಗ ಸಿರಿಯ ರಮ್ಯತಾಣವಾದ ಕೊಡಚಾದ್ರಿ ಗಿರಿಯ ಸೊಬಗನ್ನು ಸವಿಯಲು ಬರುವ ಪರಿಸರ ಪ್ರೇಮಿ ಪ್ರವಾಸಿಗರಿಗೆ ಈ ಅತಿಥಿಗೃಹದಿಂದ ಬಹಳಷ್ಟು ಅನುಕೂಲವಾಗಲಿದೆ. ಇಲ್ಲಿ ಪರಿಸರ ಪ್ರೇಮಿಗಳ ಸುಗಮ ಪ್ರವಾಸಕ್ಕೆ ಅವಕಾಶವಿದೆ. ಅಲ್ಲದೆ ಅತಿಥಿ ಗೃಹ ನಿರ್ಮಾಣಗೊಂಡ ಪ್ರದೇಶವು ಕೊಡಚಾದ್ರಿ ತಪ್ಪಲು ಪ್ರದೇಶದಲ್ಲಿದೆ. ಇಲ್ಲಿಂದಲೇ ಗಿರಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅತಿಥಿಗೃಹ ಸುತ್ತಲೂ ನೈಸರ್ಗಿಕ ರಮಣೀಯ ಉಲ್ಲಾಸಕರ ವಾತವರಣ ಇದೆ ಎನ್ನುತ್ತಾರೆ ಸ್ಥಳೀಯರಾದ ಉದಯ್ ನಿಟ್ಟೂರು.