Advertisement

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಹತ್ಯೆ

11:21 AM Feb 11, 2017 | |

ಬೆಂಗಳೂರು: ರೌಡಿಶೀಟರ್‌ನೊಬ್ಬನನ್ನು ನಾಲ್ವರು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿಂಬರ್‌ ಯಾರ್ಡ್‌ ಲೇಔಟ್‌ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕಸ್ತೂರ ಬಾ ನಗರ ನಿವಾಸಿ ಸೋಮಶೇಖರ್‌ ಅಲಿಯಾಸ್‌ ಲಂಬು (24) ಹತ್ಯೆಯಾದ ರೌಡಿಶೀಟರ್‌. ಈತನ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Advertisement

ಸೋಮಶೇಖರ್‌ ತನ್ನದೆ ಗ್ಯಾಂಗ್‌ ಕಟ್ಟಿಕೊಂಡು ಬ್ಯಾಟರಾಯನಪುರ, ಚಾಮರಾಜಪೇಟೆ ಇನ್ನಿತರ ಕಡೆ ರೌಡಿಸಂ ಮಾಡುತ್ತಿದ್ದ. ಹುಡುಗಿಯರನ್ನು ಚೂಡಾಯಿಸುವ ವಿಚಾರಕ್ಕೆ ಈತ ಮತ್ತೂಂದು ಗ್ಯಾಂಗ್‌ನೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಶುಕ್ರವಾರ ಸಂಜೆ 5.45ರ ಸುಮಾರಿಗೆ ಟಿಂಬರ್‌ ಯಾರ್ಡ್‌ ಲೇಔಟ್‌ನಲ್ಲಿದ್ದಾಗ ಎರಡು ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಮೃತ ಸೋಮನ ವಿರುದ್ಧ ಸೆಂಟ್ರಲ್‌, ಬ್ಯಾಟರಾಯನಪುರ ಸೇರಿದಂತೆ ವಿವಿಧ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.  

ಹಳೇ ದ್ವೇಷ: ಗಾರ್ಮೆಂಟ್ಸ್‌ ಬಸ್‌ ಚಾಲಕನ ಇರಿದು ಕೊಂದರು
ಬೆಂಗಳೂರು:
ಹಳೇ ದ್ವೇಷದ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್‌ ಬಸ್‌ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ. ಹೆಬ್ಬಗೋಡಿ ಸಮೀಪದ ವೀರಸಂದ್ರ ನಿವಾಸಿ ಶ್ರೀನಿವಾಸ್‌ (32) ಮೃತ ವ್ಯಕ್ತಿ.

ಶ್ರೀನಿವಾಸ್‌ ಕೆಲ ವರ್ಷಗಳಿಂದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಅರವಿಂದ್‌ ಗಾರ್ಮೆಂಟ್ಸ್‌ನ ಬಸ್‌ ಚಾಲಕನಾಗಿದ್ದ. ಗುರುವಾರ ಸಂಜೆ ಆರು ಗಂಟೆ ಸುಮಾರಿಗೆ ಶ್ರೀನಿವಾಸ್‌ಗೆ ಪರಿಚಯವಿರುವ ಕೆಲವರು ಮಾತನಾಡುವ ನೆಪದಲ್ಲಿ ಬಂದು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

Advertisement

ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದಿದ್ದ ಶ್ರೀನಿವಾಸ್‌ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಹುಡುಗಿಯ ವಿಚಾರಕ್ಕೆ ಶ್ರೀನಿವಾಸ್‌ ಜತೆ ವೀರಸಂದ್ರ ನಿವಾಸಿಗಳಾದ ರಾಜೇಶ್‌ ಮತ್ತು ಸರ್ವೇಶ್‌ ಎಂಬುವರಿಗೆ ಮನಸ್ತಾಪವಾಗಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಪೊಲೀಸರು ಶಂಕಿಸಿದ್ದಾರೆ. 

ಪ್ರಕರಣದಲ್ಲಿ ಹೆಬ್ಬಗೋಡಿ ರೌಡಿಶೀಟರ್‌ ನೇಪಾಳಿ ಮಂಜನ ಪಾತ್ರವಿದೆ ಎಂದು ತಿಳಿದು ಬಂದಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ ಶ್ರೀನಿವಾಸ್‌ ಹಾಗೂ ರಾಜೇಶ್‌ ಮತ್ತು ಸರ್ವೇಶ್‌ ವಿರುದ್ಧ ಕೂಡ ಹೆಬ್ಬಗೋಡಿ ಠಾಣೆಯಲ್ಲಿ ಅಪರಾಧ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next