Advertisement

MICE: ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿ…

10:55 AM Mar 15, 2024 | Team Udayavani |

ಉಡುಪಿ: ಕಂಪ್ಯೂಟರ್‌ ಮೌಲ್ಯಾಧಾರಿತ ಶಿಕ್ಷಣಕ್ಕೆ 35 ವರ್ಷಗಳಿಂದ ಹೆಸರುವಾಸಿಯಾದ ಮೈಸ್‌ ಸಂಸ್ಥೆ ಕಂಪ್ಯೂಟರ್‌ ಶಿಕ್ಷಣದ ಜತೆಗೆ ಒಂದೇ ಸೂರಿನಡಿ ವಿಭಿನ್ನ ಕೋರ್ಸ್‌ಗಳಿಗೆ ತರಬೇತಿ ನೀಡುತ್ತಾ ಬಂದಿದೆ.

Advertisement

ಹೈಸ್ಕೂಲ್‌ ಮಕ್ಕಳಿಗಾಗಿ ಸಿಬಿಎಸ್‌ಇ, ಸ್ಟೇಟ್‌ ಟ್ಯೂಷನ್‌ ತರಗತಿಗಳನ್ನು ನಡೆಸುತ್ತಾ ಬಂದಿದ್ದು, ಎಪ್ರಿಲ್‌ನಲ್ಲಿ 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್‌ ತರಗತಿಗಳು, 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈನ್ಸ್‌ ಫೌಂಡೇಶನ್‌ 2 ವರ್ಷದ ತರಬೇತಿ ಜೂನ್‌ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಮ್ಯಾಥ್ಸ್, ಸೈನ್ಸ್‌, ಸೋಶಿಯಲ್‌ ಸೈನ್ಸ್‌, ಜಿಮ್ಯಾಟ್‌ ವಿಷಯದಲ್ಲಿ ಎಡ್ವಾನ್ಸ್‌ ತರಬೇತಿ ನೀಡಲಾಗುವುದು. ಹಲವಾರು ವರ್ಷಗಳಿಂದ ಅನುಭವಿ ಶಿಕ್ಷಕರಿರುವ ಸಂಸ್ಥೆ ಇದುವರೆಗೆ ಉತ್ತಮ ಫ‌ಲಿತಾಂಶ ಪಡೆಯುತ್ತಿದೆ. ಪ್ರಸ್ತುತ ಕೈಗಾರಿಕಾ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಂದುವಂತೆ ಎಐ ಆಧಾರಿತ ಆಫೀಸ್‌, ಅಡ್ವಾನ್ಸ್ಡ್ ಎಕ್ಸೆಲ್‌, ಪವರ್‌ಬಿಐ, ಎಐ ಆಧಾರಿತ ವೀಡಿಯೋ ಎಡಿಟಿಂಗ್‌, ಸಿ, ಸಿ++, ಪೈಥಾನ್‌, ಗ್ರಾಫಿಕ್‌ ಡಿಸೈನಿಂಗ್‌, ಡಿಜಿಟಲ್‌ ಮಾರ್ಕೆಟಿಂಗ್‌, ಎಚ್‌ಟಿಎಂಎಲ್‌, ಜಾವಾಸ್ಕ್ರಿಪ್ಟ್, ರಿಆ್ಯಕ್ಟ್ ಜೆಎಸ್‌, ಡಾಟಾ ಸೈನ್ಸ್‌ ಮುಂತಾದ ಕಂಪ್ಯೂಟರ್‌ನ ಹೊಸ ಎಡ್ವಾನ್ಸ್‌ ಕೋರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ.

ಸಂಸ್ಥೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಂಯೋಜನೆಗೊಂಡಿದ್ದು, ಇದರಲ್ಲಿ ಟ್ಯಾಲಿ ಎಜುಕೇಶನ್‌, ಮೈಕ್ರೋಸಾಫ್ಟ್, ಎಸ್‌ಎಪಿ, ಅರ್ಥವಿದ್ಯಾ ಕಂಪೆನಿಯ ಮೂಲಕ ಕೋರ್ಸ್‌ಗಳ ಪರಿಚಯ ಮಾಡಿ ಕೊಟ್ಟಿದೆ. ಹೊರ ರಾಜ್ಯ, ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋರ್ಸ್‌ ಗಳೂ ಲಭ್ಯವಿದೆ. ಪ್ರತೀ ಕೋರ್ಸ್‌ಗೆ ಪ್ರಮಾಣಪತ್ರ ಕೊಡಲಾಗುವುದು. ಸಂಸ್ಥೆಯ ಕೇಂದ್ರಗಳಾದ ಉಡುಪಿ, ಮಣಿಪಾಲ, ಶಿರ್ವ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಕಲಿಕಾ ಕೇಂದ್ರಗಳಾದ ಕಾಪು, ಪಡುಬಿದ್ರಿ, ಶಂಕರಪುರ, ಸುರತ್ಕಲ್‌, ಪೆರ್ಡೂರು, ಹೆಬ್ರಿ, ಬ್ರಹ್ಮಾವರ, ಕೋಟ, ಕುಂದಾಪುರ, ಮುನಿಯಾಲು, ಕಾರ್ಕಳ, ಮೂಡುಬಿದಿರೆ, ಮಂದಾರ್ತಿ ಸೇರಿದಂತೆ ದೇಶದಲ್ಲಿ ಸುಮಾರು 400 ಕಲಿಕಾ ಕೇಂದ್ರಗಳನ್ನು ಹೊಂದಿದೆ. ಸಂಸ್ಥೆಯ ಕೇಂದ್ರಗಳಲ್ಲಿ ಕಲಿಯಲಿಚ್ಛಿಸುವವರು ಕೇಂದ್ರದ ವಿಳಾಸ, ದೂರವಾಣಿ ಸಂಖ್ಯೆಯನ್ನು ವೆಬ್‌ಸೈಟ್‌: www.micegroup.net ನಲ್ಲಿ ಖಾತರಿಪಡಿಸಿ ಕೊಳ್ಳಬಹುದು. ಮಾಹಿತಿ ಮತ್ತು ಹೊಸ ಮೈಸ್‌ ಕಲಿಕಾ ಕೇಂದ್ರ ತೆರೆಯಲಿಚ್ಛಿಸುವವರು ಕಲ್ಪನಾ ಟಾಕೀಸ್‌ ಹತ್ತಿರದ ಮೈಸ್‌ ಸಂಸ್ಥೆಯನ್ನು ಸಂಪರ್ಕಿಸಲು ಪ್ರಾಂಶುಪಾಲೆ ಸುಪ್ರೀತಾ ಎಸ್‌. ಅಮೀನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next